ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಅಶೋಕ ಯಡಳ್ಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪತ್ರಿಕಾ ರಂಗ ರಾಜಕೀಯ ಅತ್ತೆ-ಸೊಸೆ ಇದ್ದಂತೆ. ಜೊತೆಯಾಗಿ ಮುನ್ನಡೆದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಸಾಧ್ಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಪತ್ರಕರ್ತ ಅಶೋಕ ಯಡಳ್ಳಿ ಹೇಳಿದರು.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಟ್ಟು ೨೫ ಸ್ಥಾನಗಳಿಗೆ ಅವರೋಧ ಆಯ್ಕೆಗೆ ಸಾಕಷ್ಟು ಶ್ರಮ ವಹಿಸಿದರೂ ಕೊನೆಗೆ ೨೪ ಪದಾಧಿಕಾರಿಗಳು ಅವಿರೋಧ ಆಯ್ಕೆಯಾದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಕೊನೆ ಘಳಿಗೆವರೆಗೆ ಪ್ರಯತ್ನಿಸಿದರೂ ಚುನಾವಣೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು ಎಂದರು.
ಚುನಾವಣೆಗೆ ಹೋಗುವ ಮುನ್ನ ನಾವು ಅವರೊಂದು ನಾವೊಂದು ಪೆನಲ್ ರೀತಿ ಚುನಾವಣೆ ಎದುರಿಸಿಲ್ಲ. ಪತ್ರಕರ್ತರು ಎಲ್ಲರೂ ನಾವು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ ಎಂದು ಪ್ರತಿಪಾದಿಸಿದರು.
ಜಿಲ್ಲೆಯ ಪತ್ರಕರ್ತರು ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರನ್ನು ಒಳಗೊಂಡು ಎಲ್ಲರನ್ನು ವಿಶ್ವಾಸ ಪಡೆದು ಕಾರ್ಯನಿರತ ಪತ್ರಕರ್ತರ ಸಂಘದ ಏಳ್ಗೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಓರೆ-ಕೋರೆ ತಿದ್ದಲು ಮಾಧ್ಯಮ ಅತಿ ಅವಶ್ಯ. ಪತ್ರಿಕಾ ರಂಗ ಜಾತಿ-ಬೇಧ ಮರೆತು ಕೆಲಸ ಮಾಡಬೇಕು. ಬರವಣಿಗೆ ಮೂಲಕ ಸರ್ಕಾರದ ತಪ್ಪು ನೀತಿಗಳನ್ನು ತಿದ್ದುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.
ಈ ವೇಳೆ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಉಮೇಶ ಕಾರಜೋಳ ಸೇರಿದಂತೆ ಹಲವರು ಪತ್ರಕರ್ತರ ಸಂಘಧ ಅಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ, ಇಂದುಶೇಖರ ಮಣೂರ, ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಸಮೀರ ಇನಾಮದಾರ, ಹಿರಿಯ ಪತ್ರಕರ್ತ ಸುಶಿಲೆಂದ್ರ ನಾಯಕ್, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಜಿಲ್ಲಾ ಸದಸ್ಯರಾದ ಗೋಪಾಲ ಕಣಿಮನಿ, ಪವನ ಕುಲಕರ್ಣಿ, ಗುರು ಗದ್ದನಕೇರಿ, ಶ್ರೀನಿವಾಸ ಸೂರಗೊಂಡ, ಸುರೇಶ ತೇರದಾಳ, ಸುಧೀಂದ್ರ ಕುಲಕರ್ಣಿ, ಪ್ರಭು ಕುಮಟಗಿ, ಶಂಕರ ಜಲ್ಲಿ, ಶಿವಾನಂದ ಶಿವಶರಣ ಅವರನ್ನು ಸನ್ಮಾನಿಸಿದರು.
ಈ ವೇಳೆ ಸಂಜೀವ ಐಹೊಳೆ, ಮುಳುಗೌಡ ಪಾಟೀಲ, ಸಪ್ನ ಕಣ್ಮುಚ್ಚಿನಾಳ ಈರಣ್ಣ ರಾವೂರ್ ಸಾಬು ಮಾಶಾಳ ವಿಜಯ ಜೋಶಿ ಸೇರಿದಂತೆ ಹಲವರು ಇದ್ದರು.


