ಉದಯರಶ್ಮಿ ದಿನಪತ್ರಿಕೆ
ಚಡಚಣ:ಓಬವ್ವ ಸ್ವಾಮಿನಿಷ್ಠೆ, ಸಮಯಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಸಾಮಾನ್ಯ ಗೃಹಿಣಿಯೊಬ್ಬಳು ತೋರಿದ ಅಸಾಮಾನ್ಯ ಸಾಹಸ ಇಂದಿಗೂ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ನಂ. ೨), ಮರಡಿ ಶಾಲೆಯಲ್ಲಿ ನಡೆದ ಮೌಲಾನಾ ಅಬುಲ್ ಕಲಾಂ ಅಜಾದ್ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಓಬವ್ವ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿದ್ದು, ಅವಳ ಆಚಾರ–ವಿಚಾರ, ನಡೆ–ನುಡಿ ಮತ್ತು ಕಾಯಕನಿಷ್ಠೆಯ ದೃಢಸಂಕಲ್ಪ ಇಂದಿನ ಮಹಿಳೆಯರಿಗೆ ಚೇತನ ಶಕ್ತಿ. ಅವಳು ಧೈರ್ಯ, ಶೌರ್ಯ ಮತ್ತು ನಂಬಿಕೆಯ ಪ್ರತೀಕ,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಮಾತನಾಡಿ, “ಭಾರತೀಯ ಶಿಕ್ಷಣದ ಪ್ರವರ್ತಕ ಮೌಲಾನಾ ಅಬುಲ್ ಕಲಾಂ ಅಜಾದ್ ಅವರು ಸ್ವಾತಂತ್ರ‍್ಯ ಹೋರಾಟಗಾರರಾಗಿ, ಚಿಂತಕರಾಗಿ ಹಾಗೂ ಶಿಕ್ಷಣ ತಜ್ಞರಾಗಿ ನೀಡಿದ ಕೊಡುಗೆಗಳು ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಿ.ಎಸ್. ಬಗಲಿ, ಮಹಾದೇವ ಆದಿಗೊಂಡೆ, ಎಚ್.ಜೆ. ಲೋಣಿ, ಎಂ.ಎಸ್. ನಿಂಬಾಳಕರ, ವಿ.ಎಸ್. ಪತ್ತಾರ, ಜಯಶ್ರೀ ಗೋಟ್ಯಾಳ, ಪ್ರೇಮಾ ಧೋತ್ರೆ, ಕಮಲಾ ಬುಕ್ಕಾ, ಅಡುಗೆ ಸಹೋದರಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

