ಸಿಂದಗಿಯಲ್ಲಿ ರೂ.೫ ಕೋಟಿ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಅವರಿಂದ ಭೂಮಿ ಪೂಜೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರವನ್ನು ಸೌಂದರ್ಯಿಕರಣಗೊಳಿಸುವ ನಿಟ್ಟಿನಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಿಂದಗಿ ನಗರಕ್ಕೆ ತರಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಗಾಂಧೀ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯವತಿಯಿಂದ ರಸ್ತೆ ಡಾಂಬರೀಕರಣ, ವಿದ್ಯುತ್ ದೀಪ ಅಳವಡಿಕೆ ರೂ. ೫ ಕೋಟಿ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಅವರು ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
೧೯೯೪ ರಲ್ಲಿ ದಿವಂಗತ ಎಂ.ಸಿ.ಮನಗೂಳಿ ಅವರ ಅಧಿಕಾರಾವಧಿಯಲ್ಲಿ ಸಿಂದಗಿ ನಗರದಲ್ಲಿ ಮಹಾತ್ಮಾ ಗಾಂಧಿ ವೃತ್ತವನ್ನು ನಿರ್ಮಿಸಿದ್ದರು. ಪ್ರಸ್ತುತ ನನ್ನ ಅವಧಿಯಲ್ಲಿ ಒಂದು ಸುಸಜ್ಜಿತ ಮಹಾತ್ಮಾ ಗಾಂಧಿ ವೃತ್ತವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿರುವ ಮಹಾತ್ಮಾ ಗಾಂಧಿ ವೃತ್ತವನ್ನು ಸ್ಥಳಾತರಿಸಿ ಆ ಜಾಗದಲ್ಲಿ ರಾಷ್ಟ್ರದ ಹೆಮ್ಮೆಯ ಪ್ರತೀಕ, ರಾಷ್ಟ್ರ ಲಾಂಛನವಾದ ಸಾರಾನಾಥದ ಅಶೋಕ ಸ್ಥಂಬದ ಮಾದರಿಯಲ್ಲಿಯೇ ವೃತ್ತವನ್ನು ನಿರ್ಮಿಸಬೇಕೆಂಬ ಮಹಾದಾಸೆ ನನ್ನದಾಗಿದೆ. ಜನೇವರಿ ೨೬ ರಂದು ಲೋಕಾರ್ಪಣೆಗೊಳಿಸಲಾಗುವುದು.
ಮಹಾತ್ಮಾ ಗಾಂಧಿ ವೃತ್ತದಿಂದ ಡಾಲ್ಪಿನ್ ಡಾಬಾದವರೆಗೆ ರೂ ೫ ಕೋಟಿ ವೆಚ್ಚದಲ್ಲಿ ಡಾಂಬರೀಕರಣ, ವಿದ್ಯುತ್ ದೀಪ ಅಳವಡಿಕೆ, ರಸ್ತೆಯ ಮಧ್ಯೆಯ ವಿಭಜಕ ನಿರ್ಮಾಣ ರಸ್ತೆಯ ಸೊಬಗನ್ನು ಹೆಚ್ಚಿಸಲಿವೆ ಗಿಡಗಳನ್ನು ನೆಟ್ಟು ಪರಿಸರದ ಹಸಿರೀಕರಣ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟು ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಲಾಗಿದೆ. ಸ್ಥಳೀಯರು ಮತ್ತು ಗುತ್ತಿಗೆದಾರರು ಉತ್ತಮರೀತಿಯ ರಸ್ತೆ ನಿರ್ಮಿಸಿಕೊಳ್ಳಬೇಕೆಂದು ಸೂಚಿಸಿದರು. ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನನ್ನ ಎರಡುವರೇ ವರ್ಷದ ನನ್ನ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದು ಕೆಲಸ ಮಾಡಿದ್ದೇನೆ. ಇನ್ನೂಳಿದ ಅವಧಿಯಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು. ಚಿಕ್ಕಸಿಂದಗಿ ಬೈಪಾಸ್‌ದಿಂದ ನವೀನ ಪೆಟ್ರೋಲಿಯಂ ವರೆಗೆ ೪.೬೫ ಕೋಟಿ ಟಿಪ್ಪು ಸರ್ಕಲ್‌ದಿಂದ ಬೈಪಾಸ್ ವರೆಗೆ ೨.೧೫ ಕೋಟಿ, ಕೆರೆ ಸೌಂದರ್ಯೀಕರಣಕ್ಕಾಗಿ ೨ ಕೋಟಿ ಹಾಗೂ ಏಳು ವೃತ್ತಗಳಿಗೆ ಸಿ.ಸಿಕ್ಯಾಮರಾ ಅಳವಡಿಕೆಗಾಗಿ ೨.೬ ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಜನವರಿಯಲ್ಲಿ ಬಿಡುಗಡೆಗೊಳ್ಳುವ ವಿಶ್ವಾಸವಿದೆ ಸರಕಾರಿ ಆಸ್ಪತ್ರೆಗೆ ೪೫ ಲಕ್ಷ ರೂದಲ್ಲಿ ಹೈಟೈಕ್ ಅಂಬ್ಯುಲೆನ್ಸ್ ಒದಗಿಸುವುದು. ಸಂಗೊಳ್ಳಿರಾಯಣ್ಣ ವೃತ್ತದಿಂದ ವಿವೇಕಾನಂದ ವೃತ್ತದವರೆಗೆ ಸುಸಜ್ಜಿತ ರಸ್ತೆ ಹೀಗೆ ಇನ್ನೂ ಹೆಚ್ಚಿನ ನಗರ ಸೌಂದರ್ಯಿಕರಣಗೊಳಿಸಿ ಜಿಲ್ಲೆಯಲ್ಲಿಯೇ ಸುಂದರ ನಗರವನ್ನಾಗಿಸುವ ಮಹಾದಾಸೆ ಹೊಂದಿದ್ದೇನೆ ಎಂದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಶಾಸಕರು ಸಾಕಷ್ಟು ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ. ರಾಷ್ಟç ಲಾಂಛನ, ರಾಷ್ಟ್ರಾಭಿಮಾನದ ಸಂಕೇತವಾದ ಅಶೋಕ ಸ್ಥಂಬದ ನಿರ್ಮಾಣ ಹೆಮ್ಮೆಯ ಸಂಗತಿ. ಪಟ್ಟಣದ ಸುರಕ್ಷಿತೆಯ ದೃಷ್ಠಿಯಿಂದ ಎಲ್ಲ ವೃತ್ತಗಳಲ್ಲಿಯು ಸಿಸಿಕ್ಯಾಮರಾ ಅಳವಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಿಐ ನಾನಾಗೌಡ ಪೋಲೀಸ್ ಪಾಟೀಲ, ಪಿಎಸ್‌ಐ ಆರೀಫ್ ಮುಶಾಪುರಿ, ರಾಜಶೇಖರ ಕೂಚಬಾಳ, ಎಂ.ಎ.ಖತೀಬ, ಸುನಂದಾ ಯಂಪೂರೆ, ಹಣಮಂತ ಸುಣಗಾರ, ಜಯಶ್ರೀ ಹದನೂರ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಹಾಸೀಂಪೀರ್ ಆಳಂದ, ಗುತ್ತಿಗೆದಾರ ಎಂ.ಬಿ.ಬೀಳಗಿ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ ಸೇರಿದಂತೆ ಇನ್ನಿತರರು ಇದ್ದರು.

