Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಸೃಷ್ಟಿಸಿದ ಗೃಹಲಕ್ಷ್ಮಿ ಯೋಜನೆ | ಪದವೀಧರರ ಪಾಲಿಗೆ ಆಶಾಕಿರಣ ಯುವನಿಧಿ ಯೋಜನೆ ಲೇಖನ- ಮಿಥುನ ಬನಸೋಡೆಪ್ರ ಶಿಕ್ಷಣಾರ್ಥಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯಪುರ ಉದಯರಶ್ಮಿ ದಿನಪತ್ರಿಕೆ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ವಾಸ್ತವದಲ್ಲಿ ಕರುನಾಡು ಜನತೆಯ ಪಾಲಿಗೆ ವರದಾನವಾಗಿ ಹೊರಹೊಮ್ಮಿದ್ದು, ಗೃಹಲಕ್ಷ್ಮಿ ಯೋಜನೆಯಂತೂ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸೋಪಾನವಾಗಿದ್ದು, ಮಹಿಳಾ ಸಬಲೀಕರಣಕ್ಕೆ ನೈಜ ಶಕ್ತಿ ತುಂಬಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತ-ಹಂತವಾಗಿ ಜಾರಿಗೊಳಿಸುವುದರ ಮೂಲಕ ರಾಜ್ಯದ ಶ್ರೀ ಸಾಮಾನ್ಯರಾದಿಯಾಗಿ ಎಲ್ಲ ವರ್ಗದ ಜನತೆಯ ಸಂಪ್ರೀತಿಗೆ ಪಾತ್ರರಾಗಿದ್ದಾರೆ.2023 ರ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ಜನತೆಗೆ ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದೇ ತಡ.ಶಕ್ತಿ ಯೋಜನೆಅದೇ ವರ್ಷದ ಜೂನ್ 11 ರಂದು ಶಕ್ತಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆಂಧ್ರ ಪ್ರದೇಶದಲ್ಲಿ ಪ್ಯಾರಾ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪ್ಯಾರಾ ಒಲಂಪಿಕ್ ಕಮಿಟಿ ಆಫ್ ಇಂಡಿಯಾ ಜಂಟಿಯಾಗಿ ಆಯೋಜನೆ ಮಾಡಿದ್ದ ೧೪ನೇ ಹಿರಿಯರ ಪುರುಷರ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್‌ಶಿಪ್ ಲೀಗ್‌ನಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.ಈ ಆಟದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ದಿವ್ಯಾಂಗ ಕ್ರೀಡಾಪಟು ಯಮನಪ್ಪ ಶಂಕ್ರೆಪ್ಪ ದೊಡಮನಿ ಭಾಗಿಯಾಗಿ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಅಧ್ಯಕ್ಷ ಸತ್ಯ ನಾರಾಯಣ, ಪ್ಯಾರಾ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಜನರಲ್ ಸೆಕ್ರೆಟರಿ ವಿಜಯರಾವ್ ಶಿಂದೆ, ದಿವ್ಯಾಂಗ ಪ್ಯಾರಾ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ತರಬೇತುದಾರ ರಾಘವೇಂದ್ರ, ಸಿಂದಗಿ ತಾಪಂ ಕಚೇರಿಯ ಎಂ.ಆರ್.ಡಬ್ಲ್ಯೂ ಮುತ್ತುರಾಜ ಸಾತಿಹಾಳ ಸೇರಿದಂತೆ ಸಹಚರ ಆಟಗಾರರು ದಿವ್ಯಾಂಗ ಮಿತ್ರರು ಅಭಿನಂದಿಸಿದ್ದಾರೆ.
ಸಿಂದಗಿಯ ಪ್ರೇರಣಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ೧೦ನೆಯ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶುಭ ಕೋರುವ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿಗಳಲ್ಲಿ ಕರ, ಉರ, ಶಿರ ಶುದ್ಧವಾಗಬೇಕು, ಸಮಾಜ ನಮಗೆ ಏನು ನೀಡಿದೆ ಎನ್ನುವುದರ ಬದಲು ಸಮಾಜಕ್ಕಾಗಿ ನಾವು ಏನು ಕೊಡುಗೆ ನೀಡಬೇಕಿದ ಎಂಬುದರ ಬಗ್ಗೆ ಅವಲೋಕಿಸಬೇಕು ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು ಹೇಳಿದರು.ಸಿಂದಗಿ ನಗರದ ರಾಂಪುರ ರಸ್ತೆಯಲ್ಲಿರುವ ಪ್ರೇರಣಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ೧೦ನೆಯ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶೂಭಕೋರುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬಂದಿದ್ದು ಎಲ್ಲ ಮಕ್ಕಳು ಮೊಬೈಲ್‌ನ್ನು ಬಿಟ್ಟು ಪುಸ್ತಕ ಹಿಡಿಯಬೇಕು. ಓದಿನೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.ಈ ವೇಳೆ ವಿಜಯಪುರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಜಿ. ಸಜ್ಜನ, ವಿಜಯಪುರದ ಅಂಜುಮನ್ ಬಾಲಕಿಯರ ಪಪೂ ಕಾಲೇಜಿನ ಪ್ರಾಚಾರ್ಯ ಎಮ್.ಎ.ಜುಮನಾಳ ಎಮ್.ಸಿ.ಸಿಂದಗಿ ಮಾತನಾಡಿ, ವಿದ್ಯಾರ್ಥಿಗಳು ಕಲಿಸಿದ ಗುರು, ಪಾಲನೆ ಮಾಡಿದ ತಂದೆ-ತಾಯಿ ಧರ್ಮ ಗುರುಗಳನ್ನು ಜೀವನದಲ್ಲಿ ಮರೆಯಬಾರದು. ಮಕ್ಕಳು…
ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ೨೦೨೬-೨೭ ನೇ ಸಾಲಿನ ಬಜೆಟ್ ಸಂಪೂರ್ಣ ಬಡವರ, ರೈತರ ಮತ್ತು ರಾಜ್ಯದ ಅಭಿವೃದ್ದಿ ಪರವಾದ ಬಜೆಟ್ ಆಗಿದೆ. ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣಕ್ಕೆ ಹೆಚ್ಚು ಮಹತ್ವ ಈ ಬಾರಿ ಮೂಡಿಬಂದಿದೆ. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರಾಜ್ಯದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿರೋಧ ಪಕ್ಷದವರು ಎಷ್ಟೇ ಟೀಕಿಸಿದರು ರಾಜ್ಯದ ಜನತೆ ಈ ಬಾರಿಯ ಬಜೆಟೆಗೆ ಶಾಸಕ ಅಶೋಕ ಮನಗೂಳಿ ಸೈ ಎಂದಿದ್ದಾರೆ.ಅದರಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಮೊದಲ ಬಾರಿಗೆ ಕಾರ್ಮಿಕ ಮಕ್ಕಳಿಗಾಗಿ ೬ನೇ ತರಗತಿಯಿಂದ ೧೨ನೇ ತರಗತಿಯ ವರೆಗೆ ಶ್ರಮಿಕ ವಸತಿ ಶಾಲೆ, ಪ್ರಗತಿ ಪಥ ಯೋಜನೆಯಡಿಯಲ್ಲಿ ಸಿಂದಗಿ ಮತಕ್ಷೇತ್ರದ ೩೦ಕೀಮಿ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಬಜೆಟ್‌ನಲ್ಲಿ ಅನುದಾನ ಮಂಜೂರಾಗಿದೆ, ಮತಕ್ಷೇತ್ರದ ಕೆಂಗನಾಳ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ, ಲೋಕೋಪಯೋಗಿ ಇಲಾಖೆಯ ಕೇಶಿಪ್ ಯೋಜನೆಯಡಿಯಲ್ಲಿ ಚಡಚಣ-ಇಂಡಿ-ಆಲಮೇಲ-ಗಾಣಗಾಪೂರ ಪಟ್ಟಣಕ್ಕೆ ಸೇರುವ…
ವಿದಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಶೂನ್ಯ ಬಜೆಟ್ ಕೊಟ್ಟಿರುವಂತಹ ಸಿಎಂ ಸಿದ್ದರಾಮಯ್ಯ ಅವರು ಗ್ರಾರಂಟಿಯನ್ನೇ ಹೊಸ ಆರ್ಥಿಕತೆ ಸೃಷ್ಠಸಿದ್ದೇವೆ ಎನ್ನುವ ಭ್ರಮೆಯನ್ನು ಸೃಷ್ಠಿಸಿದ್ದಾರೆ. ಆರ್ಥಿಕತೆಯ ಹೊಸ ಭಾಷೆ ಬರೆಯುತ್ತೇವೆ. ಪ್ರತಿಯೊಬ್ಬರಿಗೂ ಸಶಕ್ತರನ್ನಾಗಿ ಮಾಡುತ್ತೇವೆ ಎಂದು ಹೊರಟಿದ್ದರು. ಆದರೆ ರಾಜ್ಯ ಆರ್ಥಿಕತೆಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳದ ಸ್ಥಿತಿಗೆ ರಾಜ್ಯ ಸರಕಾರಿ ನೌಕರರು ಬಂದು ತಲುಪಿದ್ದಾರೆ. ಜೊತೆಗೆ ಮಕ್ಕಳ ವಸತಿ, ಸ್ಕಾಲರ್‌ಶಿಪ್ ಇಲ್ಲದೇ ಮಕ್ಕಳು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಸಶಕ್ತಿಕರಣ ಮಾಡುತ್ತೇವೆ ಎಂದು ೫ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿಗೆ ಹಣವಿಲ್ಲ ಎಂಬುದು ಸ್ವಪಕ್ಷದ ಶಾಸಕರಿಂದ ಮಾತುಗಳು ಕೇಳಿವರುತ್ತಿವೆ ಹಾಗಾಗಿ ಇದೊಂದು ಮರಿಚಿಕೆ ಬಜೆಟ್ ಆಗಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2026 ನೇ ಸಾಲಿನ ಬಜೆಟ್ ನಲ್ಲಿ ತಾವು ವಚನ ವಿಶ್ವ ವಿದ್ಯಾಲಯದ ಸ್ಥಾಪನೆಗೆ 25 ಎಕರೆ ಭೂಮಿ ನೀಡುವುದಾಗಿ ಘೋಷಣೆ ಮಾಡಿದ್ದು ಸಂತೋಷದ ವಿಚಾರ. ಆದರೆ ವಿಶ್ವ ವಿದ್ಯಾಲಯವು ಸರಕಾರಿ ವಿಶ್ವವಿದ್ಯಾಲಯ ಆಗಬೇಕೆ ಹೊರತು ಖಾಸಗಿ ಸಂಸ್ಥೆ ಅಥವಾ ಮಠಗಳು ನಡೆಸುವ ಸಂಸ್ಥೆ ಆಗಬಾರದು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕೆಗೆ ಪತ್ರ ಬಿಡುಗಡೆ ಮಾಡಿದ ಅವರು, ಹೋದ ಸಲದ ಬಜೆಟ್ ನಲ್ಲಿ ನೀವು ಬೆಂಗಳೂರಿನಲ್ಲಿ ವಚನ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸುತ್ತೇನೆ ಎಂದು ಘೋಷಣೆ ಮಾಡಿದ್ದೀರಿ ಆದರೆ ಅದು ಇಲ್ಲಿಯವರೆಗೆ ಅನುಷ್ಠಾನಕ್ಕೆ ಬಂದಿಲ್ಲ.ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ವರದಿ ಆಧಾರಿತ ಸರಕಾರದ ನಿರ್ಣಯದ ಪ್ರಸ್ತಾವನೆ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಖಾಲಿ ಚೊಂಬು ಕೊಟ್ಟಿದೆ ಎಂದು ಪ್ರತಿಪಕ್ಷ ಬಿಜೆಪಿ ಕಿಡಿ ಕಾರಿದೆ.ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ದಾಖಲೆಯ 17ನೇ ಬಾರಿ ಬಜೆಟ್ ಮಂಡಿಸಿದರು. ಆದರೆ ಪ್ರತಿಪಕ್ಷ ಬಿಜೆಪಿ ಈ ಬಜೆಟ್ ವಿರೋಧಿಸಿ, ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದೆ.ರಾಜ್ಯದ ಜನತೆಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.ರಾಜ್ಯದ ಜನತೆಯನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಂತಹ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ವಿಜಯೇಂ ಮತ್ತು ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಮುಂಭಾಗದಲ್ಲಿ ಖಾಲಿ ಚೊಂಬು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆರ್ ಅಶೋಕ್, ರಾಜ್ಯದ…
ಉದಯರಶ್ಮಿ ದಿನಪತ್ರಿಕೆ ಜನರ ನಿರೀಕ್ಷೆ ನನಸಾಗಿಸುವ ಬಜೆಟ್”ಸರ್ವರಿಗೂ ಅನ್ವಯಿಸುವ ಬಜೆಟ್. ಜನರ ನಿರೀಕ್ಷೆ ನನಸಾಗಿಸುವ ಬಜೆಟ್. ಜನಪರ ಯೋಜನೆಗೆ ಹೆಚ್ಚು ಒತ್ತುನೀಡಿದ್ದಾರೆ. ಮೂಲ ಸೌಕರ್ಯಕ್ಕೆ ಆಧ್ಯತೆ ನೀಡಿದ್ದು ಇದೊಂದು ಉತ್ತಮ ಬಜೆಟ್.”- ಯಶವಂತರಾಯಗೌಡ ಪಾಟೀಲಶಾಸಕರು, ಇಂಡಿ ಅಲ್ಪ ಸಂಖ್ಯಾತರ ಕಲ್ಯಾಣದ ಬಜೆಟ್”ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ೧೫೦ ಸಂಖ್ಯಾಬಲದ ೨೫ಹೊಸ ಮೇಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಯೋಚಿಸಿರುವದು ಸ್ವಾಗತಾರ್ಹ, ವಿದ್ಯಾರ್ಥಿ ಸಂಖ್ಯೆ ೫೦ ರಷ್ಟು ಹೆಚ್ಚಿಸಿ ೧೦ ಕೋಟಿ ಅನುದಾನ ನೀಡಿರುವದು ಮತ್ತು ೧೦ ಹೊಸ ಸಿಬಿಎಸ್ ಇ ಶಾಲೆ ಪ್ರಾರಂಭಿಸುತ್ತಿರುವದು ಸ್ವಾಗತಾರ್ಹ.”- ಇಲಿಯಾಸ ಬೋರಾಮಣಿಜಿಲ್ಲಾ ಅಧ್ಯಕ್ಷರು, ಗ್ಯಾರಂಟಿ ಸಮಿತಿ, ಇಂಡಿ ಜೈನ ಬೌದ್ದ ಸಿಖ್ ಸಮುದಾಯಗಳಿಗೆ ಅನುದಾನ”ಜೈನ ಬೌದ್ದ ಸಿಖ್ ಸಮುದಾಯಗಳಿಗೆ ಸಮಗ್ರ ಅಬಿವೃದ್ದಿಗಾಗಿ ರೂ.೧೦೦ ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ.”- ಪ್ರಶಾಂತ ಕಾಳೆತಾಲೂಕಾ ಅಧ್ಯಕ್ಷರು, ಗ್ಯಾರಂಟಿ ಸಮಿತಿ, ಇಂಡಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲ”೫೬ ಸಾವಿರ ಸರಕಾರಿ ಖಾಲಿ ಹುದ್ದೆಗಳನ್ನು ತುಂಬುತ್ತಿರುವುದು ಸಂತೋಷದ ವಿಚಾರ. ಇದರಿಂದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.”-…
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒಳ ಮೀಸಲಾತಿ ವಿಷಯವಾಗಿ ಯಾವ ಸೂಕ್ತ ನಿರ್ಧಾರವನ್ನು ಪ್ರಸಕ್ತ ಬಜೆಟ್ ವೇಳೆಯಲ್ಲಿ ಕೈಗೊಳ್ಳದ ಮುಖ್ಯಮಂತ್ರಿಗಳು ದಲಿತ ವರ್ಗಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ, ಇದು ಬಜೆಟ್ ಆಗಿರದೇ ಕೇವಲ ಘೋಷಣಾ ಪತ್ರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಳ ಮೀಸಲಾತಿ ಜಾರಿಯ ಬಗ್ಗೆ ಯಾವ ನಿರ್ಧಾರವನ್ನು ಪ್ರಕಟಿಸದ ಮುಖ್ಯಮಂತ್ರಿಗಳು ದಲಿತ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ, ಹೀಗಾಗಿ ಅಹಿಂದ ನಾಯಕ ಎಂದು ಕರೆಯಿಸಿಕೊಳ್ಳುವ ಯಾವ ನೈತಿಕತೆಯನ್ನು ಅವರು ಉಳಿಸಿಕೊಂಡಿಲ್ಲ ಎಂದು ಕಾರಜೋಳ ಹೇಳಿದ್ದಾರೆ.ಇನ್ನೂ ಬಜೆಟ್ ವಿಶ್ಲೇಷಣೆ ಎನ್ನುವುದಕ್ಕಿಂತ ಬಜೆಟ್ ಎನ್ನದೇ ಇದೊಂದು ಘೋಷಣೆ ಎನ್ನಬಹುದಾಗಿದೆ, ಯಾವ ಯೋಜನೆಗೆ ಅನುಷ್ಠಾನಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳಿಲ್ಲ, ಕೇವಲ ರೈಲು ಬಿಟ್ಟಂತೆ ಘೋಷಣೆಗಳನ್ನು ಘೋಷಣೆ ಮಾಡುತ್ತಾ ಹೋಗಿದ್ದಾರೆ, ವಿಜಯಪುರ ಜಿಲ್ಲೆಯ ಸರ್ಕಾರಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ಬಜೆಟ್ನಲ್ಲಿ ವಿಜಯಪುರ ಮಹಾನಗರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಕೇಶವ ಪ್ರಸಾದ್ ಎಸ್. ಆರೋಪಿಸಿದ್ದಾರೆ.ಶುಕ್ರವಾರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಹುನಿರೀಕ್ಷಿತ ವಿಮಾನ ನಿಲ್ದಾಣವನ್ನು ಯಾವಾಗ ಪ್ರಾರಂಭಮಾಡಲಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ವಿಶೇಷವಾಗಿ ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ನಿರ್ದಿಷ್ಟವಾದ ಅನುದಾನವನ್ನು ಒದಗಿಸಿಲ್ಲ. ಕಳೆದ ಬಜೆಟ್ನಲ್ಲಿ ಘೋಷಿಸಲಾದ ಫುಡ್ಪಾರ್ಕ್ ಹಾಗೂ ದ್ರಾಕ್ಷಿ ಬೆಳೆಗಾರರ ಕೋಲ್ಡ್ ಸ್ಟೋರೇಜ್ ಪ್ರಗತಿಯಾಗಿಲ್ಲ, ಈ ಬಜೆಟ್ನಲ್ಲಿ ಯಾವುದೇ ಪ್ರಸ್ಥಾಪವಿಲ್ಲ. ಉತ್ತರ ಕರ್ನಾಟಕ ಭಾಗದ ಕ್ರೀಡೆಯ ಪ್ರೋತ್ಸಾಹಕ್ಕೆ ವಿಜಯಪುರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಹುಉಪಯೋಗಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದೆಂದು ಆಶಿಸಲಾಗಿತ್ತು, ಅದರ ಬಗ್ಗೆ ಈ ಬಜೆಟ್ನಲ್ಲಿ ಚಕಾರವಿಲ್ಲ. ಶ್ರೀ ಲಿಂ. ಶ್ರೀ ಸಿದ್ದೇಶ್ವರ ಶ್ರೀಗಳ ಅಧ್ಯಯನ ಕೇಂದ್ರ ಸ್ಥಾಪಿಸುವ ಯಾವುದೇ ಪ್ರಸ್ಥಾಪವಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ವರ್ಷದಲ್ಲಿ ತರಗತಿ ಪ್ರಾರಂಭಿಸಲಾಗುವುದೆಂದು ಆಶಿಸಲಾಗಿತ್ತು. ವಿಜಯಪುರ ಮಹಾನಗರವು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನದ ಬಗ್ಗೆ…
