ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ 11-11-2025 ಮಂಗಳವಾರದಂದು ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.
ಕಾಲೇಜಿನ ಐಕ್ಯೂಎಸಿ, ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕೋಶ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ `ನಿಮ್ಮ ಧ್ವನಿ-ನಿಮ್ಮ ಹಕ್ಕು’ ಕುರಿತು ಕಾನೂನು ಜಾಗೃತಿ ಮೂಡಿಸಿ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಸವಿತಾ ಶಾಸ್ತ್ರಿಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಡಾ.ರಾಜೇಶ್ವರಿ ಪುರಾಣಿಕ, ಪ್ರೊ.ಆರ್.ಆರ್. ಹಟಗಾರ್, ಪ್ರೊ.ಪವನಕುಮಾರ್ ಮಹೀಂದ್ರಕರ, ಗಾಯತ್ರಿ ಗೌಡರ, ಲಕ್ಷ್ಮಿ ಪಟ್ಟಣಶೆಟ್ಟಿ, ಪಿಒಎಸ್‌ಎಚ್ ಸೆಲ್‌ನ ಅಧ್ಯಕ್ಷೆ ಪ್ರೊ.ಆರ್.ಡಿ.ಜೋಶಿ, ಭಾರತಿ ಹೊನ್ನಳ್ಳಿ, ವಿಜಯಪುರದ ಮಕ್ಕಳ ಸಹಾಯವಾಣಿ 1098/112 ರ ಕೌನ್ಸೆಲರ್ ನೀಲಮ್ಮ ಅರಳಗುಂಡಗಿ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

