ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಒನಕೆ ಓಬವ್ವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಓಬವ್ವ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಓಬವ್ವ ೧೮ನೇ ಶತಮಾನದ ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಪತ್ನಿಯಾಗಿ ತನ್ನ ಶೌರ್ಯತನದಿಂದ ಒನಕೆಯ ಮೂಲಕ ಸಾಹಸ ಮೆರೆದು ಇತಿಹಾಸದಲ್ಲಿ ಹೆಸರಾಗಿದ್ದಾಳೆ ಎಂದರು.
ಶಿಕ್ಷಕರಾದ ಜಿ.ಪಿ.ಬಿರಾದಾರ, ಅರುಣ ಕೋರವಾರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಮೇಲಿನಮನಿ, ಪ್ರಕಾಶ ಗುಡಿಮನಿ, ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಓಬವ್ವ ರ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷತಾ ಬಿರಾದಾರ(ಪ್ರಥಮ), ಶಿವಲೀಲಾ ಮುತ್ತಗಿ(ದ್ವಿತೀಯ), ಆಕಾಶ ಕರಿಗೌಡ(ತೃತಿಯ) ಇವರಿಗೆ ಪುಸ್ತಕ ಪಾರಿತೋಷಕ ವಿತರಿಸಲಾಯಿತು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಚನ್ನಬಸು ಹೊಸಮನಿ, ಗ್ರಾಮಾಡಳಿತ ಅಧಿಕಾರಿಗಳಾದ ರಮಾನಂದ ಚಕ್ಕಡಿ(ದೇವರಹಿಪ್ಪರಗಿ) ಅನೀಲ ರಾಠೋಡ(ಯಾಳವಾರ) ಬಸವರಾಜ ತಳಕೇರಿ, ಬಸವರಾಜ ಇಂಗಳಗಿ, ಪಿಂಟು ಭಾಸುತ್ಕರ್ ಇದ್ದರು.

