ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷರಿಗೆ ಸುಪ್ರೀಂಕೋರ್ಟ ಟಿಇಟಿ ಕಡ್ಡಾಯಗೊಳಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಶಿಕ್ಷಕರು ಇಇಡಿಎಸ್ ತಂತ್ರಾಂಶದಲ್ಲಿ ಮಾಹಿತಿ ತುಂಬಬೇಕಾಗಿದೆ ತಕ್ಷಣವೇ ಈ ಕಾರ್ಯವನ್ನು ಮಾಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ
1ಲಕ್ಷ 22 ಸಾವಿರ ಜನ ಶಿಕ್ಷಕರು ಟಿಇಟಿ ಕುರಿತು ಇನ್ನೂ ಮಾಹಿತಿ ತುಂಬಿಲ್ಲ. ಕೇವಲ 10 ಸಾವಿರ ಜನ ಮಾತ್ರ ಟಿಇಟಿ ಸಂಬಂಧಿಸಿದ ಮಾಹಿತಿಯನ್ನು ತುಂಬಿದ್ದಾರೆ. ಇನ್ನೂ 1 ಲಕ್ಷ 22 ಸಾವಿರ ಜನ ಶಿಕ್ಷಕರು ಮಾಹಿತಿಯನ್ನು ತುಂಬಬೇಕಾಗಿದೆ. ತಕ್ಷಣ ತಮ್ಮ ತಮ್ಮ ಇಇಡಿಎಸ್ ತಂತ್ರಾಂಶದಲ್ಲಿ ಟಿಇಟಿ ಪರೀಕ್ಷೆ ಕುರಿತು ಮಾಹಿತಿ ತುಂಬುವುದರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳರವರ ಕಚೇರಿಯಲ್ಲಿ ತೆರಳಿ ಯಾರು ಟಿಇಟಿ ಪಾಸಾಗಿಲ್ಲ ಎಂಬ ಮಾಹಿತಿಯನ್ನು ತಕ್ಷಣ ಅಪಡೇಟ್ ಮಾಡಿಸಬೇಕು. ಸುಪ್ರೀಂ ಕೋರ್ಟಿಗೆ ಲಕ್ಷಾಂತರ ಜನ ಶಿಕ್ಷಕರ ಅಂಕಿ ಅಂಶಗಳ ಮೂಲಕ ದಾವೆ ಸಲ್ಲಿಸಬೇಕಾಗಿದೆ. ಇದು ಅತ್ಯಂತ ತುರ್ತು ಮಾಹಿತಿಯಾಗಿರುವುದ ರಿಂದ ಎಲ್ಲರೂ ತಕ್ಷಣ ಗಮನಹರಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ ಹಾಗೂ ಅಲ್ಲಾಬಕ್ಸ ವಾಲೀಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
