ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ತಾಲ್ಲೂಕಿನ ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ, ಒನಕೆ ಒಬವ್ವ ಜಯಂತಿ ಹಾಗೂ ಉರ್ದುದಿನ ಆಚರಣೆ ಜರುಗಿತು.
ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕ ಎ.ಜೆ.ಕೆಂಭಾವಿ ಮಾತನಾಡಿ, ರಾಷ್ಟದ ಮೊದಲ ಶಿಕ್ಷಣಮಂತ್ರಿಯಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ರವರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಅವರಂತೆ ಆದರ್ಶದ ಬದುಕು ನಮ್ಮದಾಗಬೆಕು. ತನ್ನ ರಾಜ್ಯವನ್ನು ವೈರಿಪಡೆಯಿಂದ ರಕ್ಷಿಸಲು ಮೈಸೂರಿನ ಹೈದರಾಲಿಯ ಸೈನ್ಯವನ್ನು ಹಿಮ್ಮೆಟ್ಟಿಸಿ ಪ್ರಾಣಾರ್ಪಣೆ ಮಾಡಿದ ವೀರವನಿತೆ ಒನಕೆ ಓಬವ್ವಳ ಧೈರ್ಯ ಸಾಹಸವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಂದರು.
ಉರ್ದು ಶಿಕ್ಷಕ ಮಹಮ್ಮದ ಉಮರ್ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು ೨೩೦ ಮಿಲಿಯನ್ ಜನರು ಉರ್ದುವನ್ನು ಮಾತನಾಡುವ ಕಾರಣ, ಇದು ವಿಶ್ವದ ಹತ್ತನೇ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ. ಎಲ್ಲ ಭಾಷೆಗಳನ್ನು ಪ್ರೀತಿಸಬೇಕು. ಮಾತೃಭಾಷೆಯನ್ನು ಮರೆಯಬಾರದು ಎಂದರು.
ವಿಜ್ಞಾನ ಶಿಕ್ಷಕ ಮಹಮ್ಮದ ಯಾಸೀನ ಮಂದೇವಾಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಮಾತನಾಡಿದರು.
ಶಿಕ್ಷಕರುಗಳಾದ ಮಂಜುನಾಥ ಸಜ್ಜನ, ದೈಹಿಕ ಶಿಕ್ಷಣ ಶಿಕ್ಷಕ ಆರ್.ಆರ್. ನಿಂಬಾಳಕರ, ಅತಿಥಿ ಶಿಕ್ಷಕಿ ಸೂರಮ್ಮದೇವಿ ಕುಂಟೋಜಿ, ಶ್ರೀದೇವಿ ಹೆಗ್ಗಣದೊಡ್ಡಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಮಿಸ್ಬಾ ದೊಡಮನಿ ನಿರ್ವಹಿಸಿದರು. ಆಸ್ಮಾ ಮಳ್ಳಿ ಪ್ರಾರ್ಥಿಸಿದರು.

