Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬನಶಂಕರಿ ಕೋ-ಆಪರೇಟಿವ್ ಸೊಸೈಟಿ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಜನರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ರಂಗದ ಪಾತ್ರವು ಇದೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಜನರಿಗೆ ಪ್ರಾಮಾಣಿಕವಾದ ಸೇವೆ ಒದಗಿಸಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಚಿಕ್ಕೊಂಡ ಕಾಂಪ್ಲೇಕ್ಸನಲ್ಲಿ ನೂತನವಾಗಿ ಆರಂಭವಾದ ಬನಶಂಕರಿ ಕೋ-ಆಪರೇಟಿವ್ ಸೊಸೈಟಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನವಾಗಿ ಆರಂಭವಾದ ಈ ಸೊಸೈಟಿಯು ಜನರಿಗೆ ಉತ್ತಮ ಸೇವೆ ಸಲ್ಲಿಸುವಂತಾಗಲಿ. ಜನರು ಪಡೆದ ಸಾಲವನ್ನು ಸಕಾಲಿಕವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳಿಗೆ ಸಹಕಾರ ನೀಡಬೇಕು. ಸೊಸೈಟಿಯ ಆಡಳಿತ ಮಂಡಳಿಯುವರು ಜನರ ಉಳಿತಾಯ, ಸಾಲ ಸೌಲಭ್ಯ, ಸ್ವಾವಲಂಬನೆಗಾಗಿ ಉತ್ತಮ ವೇದಿಕೆಯನ್ನು ಒದಗಿಸುವವಂತಾಗಲೆಂದು ಶುಭ ಹಾರೈಸಿದರು.ಸಾನ್ನಿಧ್ಯವನ್ನು ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಶಿವಾನಂದ ಈರಕಾರ…
ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಶುಕ್ರವಾರ-ಶನಿವಾರ ಜಾತ್ರೆಯಲ್ಲಿ ಕಂಡುಬಂದವು. ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತ್ತು.ಈ ಸಲದ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳು ರೂ.1.50 ಲಕ್ಷದಿಂದ 2 ಲಕ್ಷದವರೆಗೂ ಮಾರಾಟವಾದವು. ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳು ಸಹ ಮಾರಾಟಕ್ಕೆ ಬಂದಿದ್ದವು. ರೈತ ಬಾಂಧವರು ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುವ ಜೊತೆಗೆ ಜಾನುವಾರುಗಳಿಗೆ ಬೇಕಾದ ಹಗ್ಗ, ಗೆಜ್ಜೆ ಸರ, ಹಣೆಕಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.ಶುಕ್ರವಾರದಿಂದ ಆರಂಭವಾಗಿರುವ ಜಾನುವಾರುಗಳ ಜಾತ್ರೆಗೆ ಜಿಲ್ಲೆ ಸೇರಿದಂತೆ ಶಹಾಪೂರ, ಯಾದಗಿರಿ, ಬಾಗಲಕೋಟ, ರಾಯಚೂರ ವಿವಿಧ ಜಿಲ್ಲೆಯ ರೈತ ಬಾಂಧವರು ಮಾರಾಟ ಮಾಡುವ ಉದ್ದೇಶದಿಂದ ಅವುಗಳಿಗೆ ಅಗತ್ಯವಿರುವ ಮೇವಿನೊಂದಿಗೆ ಬಂದು ಬಿಡು ಬಿಟ್ಟಿದ್ದಾರೆ. ಬಿರು ಬಿಸಿಲಿನಿಂದಾಗಿ ಬಸವಳಿಯುತ್ತಿರುವ ಎತ್ತುಗಳಿಗೆ ಕೆಲ ರೈತರು ನೆರಳು ಮಾಡಿರುವುದು ಕಂಡುಬಂದಿತ್ತು.ತಾಲೂಕಿನ ಇಂಗಳೇಶ್ವರ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶನಿವಾರ ನಗರದ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬಕ್ಕೆ ತೆರೆ ಎಳೆದರು.ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರ ದಾನ ಮಾಡಿದರು. ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮ ಬಾಂಧವರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊAಡು ಶುಭಾಶಯ, ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು. ಸ್ನೇಹಿತರ, ಸಂಬಂಧಿಕರ ಮನೆಗೆ ತೆರಳಿ ಶುಭಾಶಯ ಕೋರಿದರು.ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮ ಗುರು ಮೌಲಾನಾ ಶಕೀರ್ ಹುಸೇನ್ ಕಾಸ್ಮಿ ಮುಫ್ತಿ, ಅಬ್ದುಲ್ ರೆಹಮಾನ್ ಅರಬ್, ಹಫೀಜ್ ಫಿರೋಜ್ ಬಾಗವಾನ, ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಟಿಎಂಸಿ ಸದಸ್ಯ ಜಾವೀದ ಮೋಮಿನ್, ಜೈನುದ್ಧಿನ್ ಬಾಗವಾನ, ಪ್ರಶಾಂತ ಕಾಳೆ, ಮಹಿಬೂಬ್ ಅರಬ, ರಫೀಕ್ ಇಂಡೀಕರ, ಅಸ್ಲಾಂ ಪಟೇಲ್, ಅಯೂಬ್ ಬಾಗವಾನ, ಅಬ್ದುಲ್‌ರಹಿದ್…
ಉದಯರಶ್ಮಿ ದಿನಪತ್ರಿಕೆ ಇಂಡಿ: ಜಾನಪದ ಸಾಹಿತ್ಯ ಗ್ರಾಮೀಣ ಸಂಸ್ಕೃತಿ ಬದುಕು ಮತ್ತು ಮೌಖಿಕ ಪರಂಪರೆಯನ್ನು ಪ್ರತಿಬಿಂಬಿಸುವ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರವಾಗಿದೆ. ಇದು ಹಳೆ ತಲೆ ಮಾರಿನಿಂದ ವಂಶಸ್ಥವಾಗಿ ಬಾಯಿಯಿಂದ ಬಾಯಿಗೆ ಹರಿದು ಬಂದಿರುವ ಜ್ಞಾನ ಮತ್ತು ಕಲೆಯಾಗಿದೆ ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ನಗರದ ಸಿಂದಗಿ ರಸ್ತೆಯ ಸದಾಶಿವ ನಗರದ ಶಿರಶ್ಯಾಡದ ಶಾಖಾ ಮಠದಲ್ಲಿ ಶುಕ್ರವಾರ ನಡೆದ ಜನಪದ ಸಾಹಿತ್ಯದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂತಹ ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾನಪದ ಪರಿಷತ್ ವತಿಯಿಂದ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾನಪದವನ್ನು ಎಲ್ಲೆಡೆ ಪಸರಿಸುವ ಕಾರ್ಯ ಜಾನಪದ ಪರಿಷತ್ ಮಾಡುತ್ತಿರುವುವುದು ಹೆಮ್ಮೆಯ ಸಂಗತಿ ಎಂದರು.ಪ್ರೊ ಎಸ್.ಜೆ.ಮಾಡ್ಯಾಳ ಮಾತನಾಡಿ ಜಾನಪದ ಸಂಸ್ಕೃತಿಯನ್ನು ಸಾಹಿತ್ಯ ನೃತ್ಯ ಕರಡಿ ಮಜಲು ನಂದಿಕೋಲು ಕುಣಿತ ಶ್ರೀ ಕೃಷ್ಣ ಪಾರಿಜಾತ ಬಯಲಾಟ ದೊಡ್ಡಾಟ ಯಕ್ಷಗಾನ ಹೀಗೆ ನಾನಾ ಕಲೆಗಳು ಶ್ರೀಮಂತಗೊಳಿಸಿವೆ ಜನಪದ ಗೀತೆಗಳು ಅತ್ಯಂತ ವೈವಿದ್ಯಮಯವಾಗಿವೆ ಕನ್ನಡ ನಾಡಿನ ವಿವಿಧ ಪ್ರದೇಶಗಳಪ್ರಾಧೇಶಿಕ…
ಸ್ಟೇಡಿಯಂನಲ್ಲಿ ಈಜುಕೊಳ ನಿರ್ಮಿಸಲು ರೂ.5 ಕೋಟಿಗೆ ಸಿಎಂಗೆ ಮನವಿ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಈಗಾಗಲೇ 5 ಕೋಟಿ ಅನುದಾನ ಬಿಡುಗಡೆ ಆಗಿದ್ದು ಒಳಾಂಗಣ ಕ್ರೀಡಾಂಗಣದಲ್ಲಿ ನಾಲ್ಕು ಶಟಲ್ ಕಾಕ್ ಕೋರ್ಟ್, ಫುಟ್ಬಾಲ್, ವಾಲಿಬಾಲ್ , ಕಬಡ್ಡಿ, ಖೋ ಖೋ ಕೋರ್ಟ್ ನಿರ್ಮಿಸಲು ಕೆಲಸ ನಡೆಯುತ್ತಿದೆ. ಜೊತೆಗೆಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಈಜು ಕೊಳ ನಿರ್ಮಿಸಲು ಮತ್ತೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಹಂತ ಹಂತವಾಗಿ ಕ್ರೀಡಾಂಗಣ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ವಿಭಾಗ ಮತ್ತು ಹಾರ್ಟ್ ಸಂಸ್ಥೆ, ಮೈಸೂರು ಸಹಯೋಗದೊಂದಿಗೆ ಆಯೋಜನೆ ಮಾಡಿರುವ ಹುಲಿಮಿತ್ರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.ಮಹನೀಯರ ಜಯಂತಿ ಹೆಸರಿನಲ್ಲಿ, ಫ್ರೆಂಡ್ಸ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತೆ. ಆದರೆ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು…
ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಶುಭ ಸಮಾಚಾರ | ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತರಲು ಹರಸಾಹಸ ನವದೆಹಲಿ: ಸಿಲಿಂಡರ್ ಗಳಿಲ್ಲದೆ ಪರದಾಡುತ್ತಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಕೇಂದ್ರ ಸರ್ಕಾರ ಶನಿವಾರ ಗುಡ್ ನ್ಯೂಸ್ ನೀಡಿದ್ದು, ವಾಣಿಜ್ಯ ಬಳಕೆ LPG ಸಿಲಿಂಡರ್ ಹಂಚಿಕೆಯನ್ನು ಶೇ. 50ಕ್ಕೆ ಹೆಚ್ಚಿಸಿದೆ.ಮನೆಗಳಿಗೆ ಅಡಿಗೆ ಅನಿಲ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತಿದೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಶೇ. 20 ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರೊಂದಿಗೆ ಒಟ್ಟು ಹಂಚಿಕೆಯನ್ನು ಶೇ. 50 ಕ್ಕೆ ಹೆಚ್ಚಿಸಲಾಗಿದೆ.ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಪಶ್ಚಿಮ ಏಷ್ಯಾ ಯುದ್ಧದಿಂದ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯವಾಗಿದೆ. ಇದರಿಂದಾಗಿ ಮನೆಗಳಿಗೆ ಎಲ್ ಪಿಜಿ ಸರಬರಾಜು ಮಾಡಲು ಆದ್ಯತೆ ನೀಡಲು ಹೋಟೆಲ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಸರಬರಾಜಿನಲ್ಲಿ ಕಡಿತ ಮಾಡಲಾಗಿತ್ತು.ಇದೀಗ ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಅನಿಲ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಿನ್ನನ್ನು ನನ್ನಿಂದ ಯಾರೂ ದೂರ ಮಾಡಲು ಸಾಧ್ಯವಿಲ್ಲ ನೀನು ಕೂಡ. ನನಗಂತಲೇ ಆ ಬ್ರಹ್ಮ ಪುರುಸೊತ್ತು ಮಾಡಿಕೊಂಡು ತಯಾರು ಮಾಡಿದ ಶಿಲಾಬಾಲಿಕೆ. ಸೋದರ ಸೊಸೆಯಾದ ನಿನ್ನನ್ನು ಹೀಗೆ ಹುಚ್ಚನ ತರಹ ಪ್ರೀತಸ್ತಿನಿ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕವರಿದ್ದಾಗ ಮನೆಯಲ್ಲಿ ಎಲ್ಲರೂ ನನಗೆ ನಿನ್ನನ್ನು ಕೊಟ್ಟು ಮದುವೆ ಮಾಡೋದು ಅಂದಾಗ ಕೋಪದಲ್ಲಿ ಅವರಿಗೆ ಬೈಯುತ್ತಿದ್ದೆ. ಆದರೆ ಈಗ ಪ್ರೀತಿಗೂ ಪ್ರೀತಿ ಬರುವ ತರಹ ಹುಚ್ಚುಚ್ಚಾಗಿ ಹೆಚ್ಚೆಚ್ಚು ನಿನ್ನನ್ನೇ ಪ್ರೀತಸ್ತಿದಿನಿ ಅನ್ನೋ ವಿಷಯ ನಿನಗೆ ತಿಳಿದಿಲ್ಲ ಅಂತೇನಿಲ್ಲ. ನಿನ್ನ ನೆನಸಿಕೊಳ್ಳುತ್ತ ಸದಾ ಸುಂದರ ಸ್ವರ್ಗ ಲೋಕದಲ್ಲಿ ತೇಲ್ತಾ ರ‍್ತಿನಿ. ನಿನ್ನೊಂದಿಗೆ ಕಳೆದ ಸವಿಕ್ಷಣಗಳನ್ನು ನೆನೆದರೆ ಸಾಕು ಗಾಳಿಯಲ್ಲಿ ತೇಲಿದಂತಹ ಅನುಭವ ಆಗುತ್ತದೆ. ಕಿಶೋರಾವಸ್ಥೆಯವರೆಗೂ ಹಳ್ಳಿಯಲ್ಲಿ ನಿನ್ನೊಂದಿಗಿದ್ದ ನಾನು ಕಾಲೇಜಿನ ಶಿಕ್ಷಣಕ್ಕೆಂದು ನಗರಕ್ಕೆ ಬಂದೆ. ಶಿಕ್ಷಣ ಮುಗಿಸಿಕೊಂಡು ಮರಳಿ ಬರುವಷ್ಟರಲ್ಲಿ ದೊಡ್ಡ ಅಚ್ಚರಿಯೇ ಕಾದಿತ್ತು.ಹಳ್ಳಿಗೆ ಕಾಲಿಟ್ಟಾಗ ನಿನ್ನ ಹರೆಯ ಉಕ್ಕುತ್ತಿತ್ತು. ಮೂವತ್ತಾರು ಇಪ್ಪತ್ನಾಲ್ಕು ಮೂವತ್ತಾರು…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ನೀರು ಅಮೂಲ್ಯ ಸಂಪತ್ತು, ಹಿತ-ಮಿತವಾಗಿ ಅದರ ಬಳಕೆಯಾಗಬೇಕು. ಆದ್ದರಿಂದ ನೀರು ನಮ್ಮ ಜೀವನಕ್ಕೊಂದು ಆಧಾರ ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪತ್ತು. ಅದನ್ನು ನಮಗೆ ಎಷ್ಟು ಬೇಕು ಅಷ್ಟನ್ನೇ ಬಳಸಿ-ಮುಂದಿನ ಜನಾಂಗಕ್ಕಾಗಿ ಉಳಿಸಿ-ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತರ್ವವಾಗಬೇಕು. ಈ ಭೂಮಿಯ ಜೀವಿಸುವ ಸಕಲ ಮಾನವ ಆದಿಯಾಗಿ ಸಕಲ ಚರಾಚರ ಜೀವರಾಶಿಗಳಿಗೆ ನೀರು ಬೇಕೇ ಬೇಕು. ನೀರಿಲ್ಲದೇ ಯಾವ ಪ್ರಾಣಿಯೂ ಬದುಕಲಾರದು. ಒಂದು ವೇಳೆ ನೀರು ಇಲ್ಲದೇ ಹೋದರೆ ಬದುಕೇ ಇಲ್ಲವಾಗುತ್ತದೆ. ಅದಕ್ಕಾಗಿ ನಿಸರ್ಗದ ನಾಶದಿಂದ ಮತ್ತು ಅರಣ್ಯ ಸಂಪತ್ತಿನ ನಾಶದಿಂದ ಜಗತ್ತಿನೆಲ್ಲೆಡೆಯಲ್ಲಿ ಮಳೆಯ ಪ್ರಮಾಣವು ಸಹ ಕಡಿಮೆಯಾಗುತ್ತಿದೆ. ಇದರಿಂದ ರಾಷ್ಟç-ರಾಷ್ಟçಗಳ ಮಧ್ಯೆ, ರಾಜ್ಯ-ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆಗಾಗಿ ಹಾಹಾಕಾರ, ಪ್ರತಿಭಟನೆ, ಹೋರಾಟಗಳು ಸರ್ವೇ ಸಾಮಾನ್ಯವಾಗುತ್ತಿವೆ. ಮಳೆಯ ಅಭಾವದಿಂ ಕೊರತೆಯುಂಟಾಗುತ್ತಿರುವ ನೀರು-ಜಲದ ಸಂರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ನಿಲ್ಲಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. .ಈ ದಿನದ ಆಚರಣೆಯ ಹಿನ್ನೆಲೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ನೀರಿನ…
ರಾಜ್ಯದ ೧೦ ಸಾವಿರ ಶಿಕ್ಷಕರಿಗೆ ಸರ್ಕಾರದಿಂದ ಯುಗಾದಿ ಕೊಡುಗೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಳೆದ ನಾಲ್ಕು ವರ್ಷಗಳಿಂದ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ, ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ (ಎಎಂ ಟೂ ಎಚ್ ಎಂ) ಪದೋನ್ನತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇದರಿಂದ ರಾಜ್ಯದ ೧೦ ಸಾವಿರಕ್ಕೂ ಅಧಿಕ ಸಹಶಿಕ್ಷಕರಿಗೆ ಬಡ್ತಿಭಾಗ್ಯ ಸಿಗಲಿದೆ.ಇದು ಸಂಘದ ನಿರಂತರ ಪ್ರಯತ್ನಕ್ಕೆ ಒಲಿದ ಫಲ ಹಾಗೂ ಶಿಕ್ಷಕರಿಗೆ ಯುಗಾದಿ ಹಬ್ಬಕ್ಕೆ ಸರ್ಕಾರ ನೀಡಿದ ಕೊಡುಗೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಬಣ್ಣಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಬದಲಾವಣೆಗಳು, ನಾನಾ ಕಾನೂನು ತೊಡಕುಗಳು, ನ್ಯಾಯಾಲಯದ ಪ್ರಕರಣಗಳ ಹಿನ್ನಲೆಯಲ್ಲಿ ಸಹಶಿಕ್ಷಕರು ಮುಖ್ಯ ಶಿಕ್ಷಕರ ಹುದ್ದೆಯಿಂದ ವಂಚಿತಗೊAಡಿದ್ದರು. ಹಲವಾರು ಶಿಕ್ಷಕರು ಬಡ್ತಿಯಿಲ್ಲದೇ ನಿವೃತ್ತರಾಗಿದ್ದರು.ಅದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಸಂಘ ಹೋರಾಟ ನಡೆಸಿತ್ತು. ಅದರಲ್ಲಿಯೂ ಕಳೆದ ಏಳು ತಿಂಗಳಿAದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಂಪುರ ಬೆನಕೋಟಗಿ, ಮಲಘಾಣ ಸೇರುವ ರಸ್ತೆಗೆ ರೂ.೨ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅತೀ ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು. ರಾಂಪುರ ಸಿಂದಗಿ ಪ್ರಮುಖ ರಸ್ತೆ ಸುಧಾರಣೆಗೆ ರೂ.೪ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಅಶೋಕ ಹೇಳಿದರು.ತಾಲೂಕಿನ ರಾಂಪುರ ಪಿಎ ಗ್ರಾಮದ ಆರೂಢ ಸಂಗನಬಸವೇಶ್ವರ ಮಠದಲ್ಲಿ ಸಿಂದಗಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೆಯ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೨೫ಲಕ್ಷ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ ಅದಕ್ಕೆ ಕಿವಿಗೋಡದೆ ನಾನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಾ ಹೋಗುತ್ತೇನೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಗ್ಯಾರಂಟಿಯಿಂದಾಗಿ ರಾಜ್ಯ ಸರಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುವ ವಿರೋಧ ಪಕ್ಷದವರಿಗೆ ಒಂದು ಬಾರಿ ಸಿಂದಗಿ ಸುತ್ತಿ ನೋಡಲಿ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠ…
