ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ವೀರ ಭಾರತಿ ವಿದ್ಯಾಕೇಂದ್ರದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆಧ್ಯತೆ ನೀಡಬೇಕಿದೆ. ಪ್ರತಿಭೆಗೆ ಸೂಕ್ತ ಉತ್ತೇಜನ ಒದಗಿಸಿದರೆ ಉನ್ನತ ಸಾಧನೆ ಸಾದ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಪ್ರತಿಭೆ ಅನಾವರಣ ಗೊಳಿಸಲು ಹಾಗೂ ಕಲಾತ್ಮಕ ಅಭಿರುಚಿ ಬೆಳೆಸಲು ಪ್ರತಿಭಾ ಕಾರಂಜಿ ಕಲೋತ್ಸವ ಸಹಕಾರಿ . ವಿದ್ಯಾರ್ಥಿಗಳು ಇಂಥ ವೇದಿಕೆ ಅವಕಾಶಗಳನ್ನು ಸಮರ್ಥವಾಗಿ ಸದ್ಭಳಿಸಿಕೊಂಡು ಸಾದನೆ ಮಾಡುವಂತೆ ಕೇಳಿಕೊಂಡರು.
ಕ್ಷೇತ್ರಶಿಕ್ಷಣಾಧಿಕಾರಿ ಸಯಿದಾ ಮುಜಾವರ, ಎಸ್.ಆರ್., ನಡಗಡ್ಡಿ, ಎ ಸಿ ಹುಣಸಗಿ, ಬಸವರಾಜ ಗೊರನಾಳ, ಮಾತನಾಡಿದರು.
ವೇದಿಕೆಯ ಮೇಲೆ ವೀರಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಭಿನಂದನ ಕಿರಣಗಿ, ಉಪಾದ್ಯಕ್ಷ ನಿರಂಜನ ಶಹಾ, ಚೇತನ ಧನಶೆಟ್ಟಿ, ವೃಷಭ ಧನಶೆಟ್ಟಿ ,ವಿದ್ಯಾಸಾಗರ ಧನಶೆಟ್ಟಿ, ಲಕ್ಷ್ಮೀಕಾಂತ ದುರ್ಗಿ, ಲಾಲ ಬಹಾದ್ದೂರ ಧನಶೆಟ್ಟಿ, ಪ್ರಜ್ವಲ ಧನಪಾಲ, ಸಚೀನ ಶಹಾ, ಸಂತೋಷ ವರ್ಧಮಾನ, ಶಿಕ್ಷಣ ಸಂಯೋಜಕ ಎ.ಓ.ಹೂಗಾರ, ಮುಖ್ಯ ಗುರು ಸುರೇಶ ಅಂಗಡಿ, ಎಸ್.ಬಿ. ಮದರಖಂಡಿ, ಶಿವಾನಂದ ಭೀಮನಗರ, ಪ್ರಶಾಂತ ಕಾಳೆ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಸುಜಾತಾ ಪೂಜಾರಿ ಮತ್ತಿತರಿದ್ದರು.

