ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಡು ಬಡತನ ಕುಟುಂಬದಲ್ಲಿ ಜನಿಸಿ, ಏಕಾಗ್ರತೆ, ಶಿಸ್ತು, ಶ್ರದ್ಧೆ, ಸಹನೆಯಿಂದ ಓದಿ ೨೦೦೬ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿ, ೨೦೧೨ರಲ್ಲಿ ಐಎಎಸ್‌ಗೆ ಮುಂಬಡ್ತಿ ಹೊಂದಿ ಸಮಾಜ ಹಾಗೂ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಬಸವ ಅನುಯಾಯಿಯಾಗಿದ್ದ ಇವರು ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.
ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ಹಮ್ಮಿಕೊಂಡ ಮಹಾಂತೇಶ ಬೀಳಗಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿ ಅವರು, ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಸಾವು ಅತ್ಯಂತ ನೋವಿನ ಸಂಗತಿ ಎಂದರು.
ಈ ವೇಳೆ ಆರಕ್ಷಕರಾದ ತುಕಾರಾಮ, ಸಂಜು, ಜಲಾಲುದ್ದೀನ್, ಜಾವೀದ್ ಮಹಾಂತೇಶ ಬೀಳಗಿ ಇವರ ಪೋಟೋಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಇದೇ ವೇಳೆ ಪುಟಾಣಿಗಳಾದ ಜುನೈರಾ ಆಲಗೂರ, ಜೋಹಾ ಭೈರಾಮಡಗಿ ಮಹಾಂತೇಶ ಬೀಳಗಿ ಇವರ ಭಾವಚಿತ್ರಕ್ಕೆ ಭಕ್ತಿಯ ದೀಪವನ್ನು ಗೌರವದಿ ಬೆಳಗಿ ನುಡಿ ನಮನ ಸಲ್ಲಿಸಿದರು.

