ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿ ಪ್ರಪ್ರಥಮ ಬಾರಿಗೆ ಯುವಾ ಬ್ರಿಗೇಡ್ ವತಿಯಿಂದ ನ.೨೯ರಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ಸಾಯಂಕಾಲ ೫ಗಂಟೆಗೆ ಡಾ.ಬಾಬಾಸಾಹೇಬ್ ಅವರ ವಿಚಾರಗಳ ಅನಾವರಣ, ಹೊಸ ಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವಾ ಬ್ರಿಗೇಡ್ ವಿಭಾಗೀಯ ಸಂಚಾಲಕ ರಾಜು ಪಾಟೀಲ ಹೇಳಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ಸಚಿವ ಎನ್.ಮಹೇಶ, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ. ಸಾನಿಧ್ಯವನ್ನು ಯಂಕAಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರು ವಹಿಸಿಕೊಳ್ಳುವರು. ಹಾಗಾಗಿ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಅಮೃತ ಬಿಂದು ರಾಜ್ಯ ಸಂಚಾಲಕ ಚಂದ್ರಶೇಖರ ನಂಜನಗೂಡು ಮಾತನಾಡಿ, ದೇಶಕ್ಕೆ ಕೊಡುಗೆ ನೀಡಿದ ಮಹಾಪುರುಷರ ವಿಚಾರಗಳನ್ನು ಸಂಪೂರ್ಣವಾಗಿ ಸಮಾಜಕ್ಕೆ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವಾಗಿದೆ. ಬಾಬಾಸಾಹೇಬರ್ ವಿಚಾರಗಳನ್ನು ಕುರಿತಾಗಿ ಸಾರ್ವಜನಿಕರಿಗೆ ತಿಳಿಸುವ ದಿಸೆಯಲ್ಲಿ ಹೊಸ ಬೆಳಕು ಎನ್ನುವ ಕಾರ್ಯಕ್ರಮವನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಆಯೋಜನೆ ಮಾಡಲಾಗುತ್ತಿದೆ. ಹೊಸ ಬೆಳಕು ಕಾರ್ಯಕ್ರಮಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿರುವ ೬ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ಈ ವೇಳೆ ಯುವಾ ಬ್ರಿಗೇಡ್ ಸಹ ಸಂಚಾಲಕ ಶಿವಮೂರ್ತಿ ಕಾಟಕರ್, ಜಿಲ್ಲಾ ಸಂಚಾಲಕ ಮಡಿವಾಳ ವಾಲೀಕಾರ ಸೇರಿದಂತೆ ಅನೇಕರು ಇದ್ದರು.

