Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಂದ – ಆರೋಗ್ಯ

ವಚನಗಳು ಲಿಂಗಾಯತರು ಮತ್ತು ನಾವು

ಅಮ್ಮಾ ಫೌಂಡೇಶನ್ ಉದ್ಘಾಟನೆ | ತಾಯಂದಿರರ ಪಾದಪೂಜೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೂಡದ ಒಮ್ಮತ | ಈರೇಗೌಡ ವಿರುದ್ಧ ಮಾಜಿ ಕಾರ್ಯದರ್ಶಿ ಜಯಮ್ಮ ಆರೋಪ
(ರಾಜ್ಯ ) ಜಿಲ್ಲೆ

ಮೂಡದ ಒಮ್ಮತ | ಈರೇಗೌಡ ವಿರುದ್ಧ ಮಾಜಿ ಕಾರ್ಯದರ್ಶಿ ಜಯಮ್ಮ ಆರೋಪ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಬೇಡವೇ?

ಉದಯರಶ್ಮಿ ದಿನಪತ್ರಿಕೆ

ಎಚ್ ಡಿ ಕೋಟೆ: ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ಥಗಿತಗೊಳ್ಳಲು ಮೈಮುಲ್ ಮಾಜಿ ಅಧ್ಯಕ್ಷ ಈರೇಗೌಡ ಕಾರಣ ಎಂದು ಸಂಘದ ಮಾಜಿ ಕಾರ್ಯದರ್ಶಿ ಜಯಲಕ್ಷ್ಮಿ ಆರೋಪ ಮಾಡಿದ್ದಾರೆ.
ಸ್ಥಗಿತಗೊಂಡಿರುವ ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಮುಂದುವರಿಯಬೇಕಾ, ಬೇಡವಾ ಎಂಬುದರ ಕುರಿತು ಚರ್ಚಿಸಲು ಬುಧವಾರ ತಾಲೂಕಿನ ಹೆಬ್ಬಲಗುಪ್ಪೆಯಲ್ಲಿ ಸಭೆ ಕರೆಯಲಾಗಿತ್ತು. ಸಿಡಿಒ ರೇಣುಕಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರ, ವಿರೋಧ ಚರ್ಚೆಯಾಯಿತು. ಒಮ್ಮತ ಅಭಿಪ್ರಾಯ ವ್ಯಕ್ತವಾಗದ ಹಿನ್ನೆಲೆ ಸಹಿ ಸಂಗ್ರಹಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲು ಸಭೆಯಲ್ಲಿ ರೇಣುಕಾ ಅವರು ನಿರ್ಧಾರ ಕೈಗೊಂಡರು.
ಈ ವೇಳೆ ಮಾತನಾಡಿದ ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಜಯಲಕ್ಷ್ಮಿ ಅವರು, 3-11-2008 ರಂದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನೋಂದಣಿಯಾಗಿದ್ದು, ಸುಮಾರು 16 ವರ್ಷಗಳ ಕಾಲ ಕಾನೂನುತ್ಮಾಕವಾಗಿ ನಡೆಸಿಕೊಂಡು ಬಂದೆ. ಯಾವುದೇ ತೊಂದರೆಯಿಲ್ಲದೆ ರೈತರ ಮೆಚ್ಚುಗೆ ಪಡೆದು ಸಂಘ ಸಬಲರಾಗುತ್ತಿದ್ದನ್ನು ಸಹಿಸಲಾರದೆ ಗ್ರಾಮದ ಕೆಲವರು ಕುತಂತ್ರ ನಡೆಸಿ ಡೈರಿಗೆ ಹಾಲು ಪೂರೈಕೆಯಾಗದಂತೆ ನೋಡಿಕೊಳ್ಳುತ್ತಾರೆ. ಮಹಿಳಾ ಸಹಕಾರ ಸಂಘಕ್ಕೆ ಹಾಲು ಪೂರೈಕೆಯಾಗುತ್ತಿರುವ ನಡುವೆಯೇ ಖಾಸಗಿ ಡೈರಿ ಆರಂಭ ಮಾಡುತ್ತಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಹಾಲು ಪೂರೈಕೆಯಾಗದಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಾರೆ. ಹೀಗಾಗಿ ಜೂನ್ 2023 ರಂದು ಮೈಮುಲ್ ನಿಂದ ಸಂಘಕ್ಕೆ ತಡೆ ತರುತ್ತಾರೆ. 2024ರಲ್ಲಿ ಮತ್ತೆ ರೈತರು ನನ್ನ ಬಳಿ ಬಂದು ಖಾಸಗಿ ಡೈರಿಯಲ್ಲಿ ಬೋನಸ್ ಸೇರಿದಂತೆ ಯಾವುದೇ ಸವಲತ್ತು ಸಿಗುತ್ತಿಲ್ಲ. ಹೀಗಾಗಿ ಮತ್ತೆ ಮಹಿಳಾ ಸಹಕಾರ ಸಂಘ ಡೈರಿ ಮುಂದುವರೆಸುವಂತೆ ನನಗೆ ಮನವಿ ಮಾಡುತ್ತಾರೆ. 2024ರಲ್ಲಿ ಮಹಿಳಾ ಸಹಕಾರ ಸಂಘ ಪುನಶ್ಚೇತನ ಮಾಡಿಕೊಂಡುವಂತೆ ಹುಣಸೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಮಾಡಿದ್ದೆ. ಆದರೆ ಇದಕ್ಕೂ ಈರೇಗೌಡ ಹಾಗೂ ಅವರ ಬೆಂಬಲಿಗರು ತಕರಾರು ಅರ್ಜಿ ಸಲ್ಲಿಸುತ್ತಾರೆ. ಈ ವಿಷಯ ಗೊತ್ತಾದ ಮೇಲೆ 11-09-2025 ರಂದು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ. ತದನಂತರ ಪುನಶ್ಚೇತನ ಸಂಬಂಧ ಸಭೆ ಕರೆದಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಹ್ಯಾಂಡ್ ಪೋಸ್ಟ್ ಹಾಲು ಶಿಥಿಲೀಕರಣ ಘಟಕದ ಮೇಲ್ವಿಚಾರಕಿ ತೆಹರಾ ಘರಾಗ್, ಚಿಕ್ಕತಾಯಮ್ಮ, ಪಾರ್ವತಮ್ಮ, ಮಾಯಮ್ಮ, ಭಾಗ್ಯ, ಕಮಲಮ್ಮ, ಆಲಮ್ಮ, ಅನುಸೂಯ, ಗೋಪಮ್ಮ, ರಾಜಮ್ಮ, ಜಯಮ್ಮ, ಚಿನ್ನಮ್ಮ, ಪುಟ್ಟಮ್ಮ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

“ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪುನಶ್ಚೇತನ ಸಂಬಂಧ ಸಭೆ ಕರೆಯಲಾಗಿತ್ತು. ಆದರೆ ಒಮ್ಮತದ ನಿರ್ಧಾರ ವ್ಯಕ್ತವಾಗದ ಹಿನ್ನೆಲೆ ಮಹಿಳಾ ಸಹಕಾರ ಸಂಘ ಬೇಕಾ ಅಥವಾ ಖಾಸಗಿ ಸಹಕಾರ ಸಂಘ ಬೇಕಾ ಎಂಬುದರ ಬಗ್ಗೆ ಸಹಿ ಸಂಗ್ರಹಿಸಲಾಗಿದ್ದು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.”

– ರೇಣುಕಾ, ಸಿಡಿಒ

BIJAPUR NEWS congress public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಂದ – ಆರೋಗ್ಯ

ವಚನಗಳು ಲಿಂಗಾಯತರು ಮತ್ತು ನಾವು

ಅಮ್ಮಾ ಫೌಂಡೇಶನ್ ಉದ್ಘಾಟನೆ | ತಾಯಂದಿರರ ಪಾದಪೂಜೆ

ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜಿನಲ್ಲಿ ಯೋಗ ದಿನಾಚರಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಂದ – ಆರೋಗ್ಯ
    In ಭಾವರಶ್ಮಿ
  • ವಚನಗಳು ಲಿಂಗಾಯತರು ಮತ್ತು ನಾವು
    In ವಿಶೇಷ ಲೇಖನ
  • ಅಮ್ಮಾ ಫೌಂಡೇಶನ್ ಉದ್ಘಾಟನೆ | ತಾಯಂದಿರರ ಪಾದಪೂಜೆ
    In (ರಾಜ್ಯ ) ಜಿಲ್ಲೆ
  • ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜಿನಲ್ಲಿ ಯೋಗ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಮೂಡದ ಒಮ್ಮತ | ಈರೇಗೌಡ ವಿರುದ್ಧ ಮಾಜಿ ಕಾರ್ಯದರ್ಶಿ ಜಯಮ್ಮ ಆರೋಪ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026
    In ದಿನಪತ್ರಿಕೆ
  • ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
    In (ರಾಜ್ಯ ) ಜಿಲ್ಲೆ
  • ನೇಕಾರ ಸಮ್ಮಾನ್ ಯೋಜನೆಯಡಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬಿತ್ತನೆ ಬೀಜ ಮಾರಾಟ ಮಳಿಗೆ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.