ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಭೀಮನಗರದ ಅಂಬೇಡ್ಕರ ವೃತದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂವಿದಾನ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಯುವ ಕಾಂಗ್ರೇಸ್ ಅಧ್ಯಕ್ಷ ಪ್ರವೀಣ ಪೂಜಾರಿ ಹಾಗೂ ಅಂಬೇಡ್ಕರ ಸಂಘದ ಅಧ್ಯಕ್ಷ ದಶರಥ ಗೋವಿಂದಗೋಳ, ದೈಹಿಕ ಶಿಕ್ಷಕ ಯಲ್ಲಪ್ಪ ಭಜಂತ್ರಿ, ಸದ್ದಾಮ ನದಾಫ, ಪ್ರಭು ದೂಡವಾಡ ಸೇರಿದಂತೆ ಹಲವಾರು ಜನ ಯುವಕರು ಉಪಸ್ಥಿತರಿದ್ದರು.

