ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಪ್ರಸಿದ್ಧ ಹನುಮಾನ(ಕೋರವಾರೇಶ ) ಕಾರ್ತಿಕೋತ್ಸವದ ಅವರೋಹಣ ಕಾರ್ಯಕ್ರಮ ದಿ: ೨೯ ರಂದು ಶನಿವಾರ ಜರುಗಲಿದೆ.
ಕಾರ್ಯಕ್ರಮಕ್ಕೆ ರಾಮಚಂದ್ರ ದೇವರ ಉಪಾಸಕರಾದ ರಘುವರೇಂದ್ರತೀರ್ಥ ಶ್ರೀಪಾದರು ಭೀಮಸಿತು ಮುನಿವೃಂದ ಸಂಸ್ಥಾನಮಠ ಭೀಮನಕಟ್ಟೆ, ಶಿವಮೊಗ್ಗ ಜಿಲ್ಲೆ ಇವರು ದಿ: ೨೮ ರಂದು ಕೋರವಾರಕ್ಕೆ ಆಗಮಿಸುವರು
ಶ್ರೀಪಾದಂಗಳವರನ್ನು ಸಕಲ ವಾದ್ಯ, ವೈಭವ, ವಿವಿಧ ಭಜನಾ ತಂಡಗಳಿಂದ ಭಜನೆ, ಸಾಂಪ್ರದಾಯಿಕ ಕೋಲಾಟ, ಧಾರ್ಮಿಕ ಸ್ತಬ್ಧ ಚಿತ್ರಗಳ ಮೆರವಣಿಗೆಯೊಂದಿಗೆ ಸ್ವಾಗತಿಸುವುದರ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆಯನ್ನ ಕೈಗೊಳ್ಳಲಾಗುವುದು
ದಿ: ೨೯ ರಂದು ಶನಿವಾರ ಬೆಳಗ್ಗೆ ಶ್ರೀಪಾದಂಗಳವರಿಂದ ಶ್ರೀಕೊರವರೇಶನಿಗೆ ಅಭಿಷೇಕ, ರಜತಕವಚ ಅಲಂಕಾರ ನಂತರ ಸಂಸ್ಥಾನಪೂಜೆ, ನೈವೇದ್ಯ, ಭಕ್ತಾದಿಗಳೆಲ್ಲರಿಗೂ ಪ್ರಸಾದ ವ್ಯವಸ್ಥೆ. ಸಾಯಂಕಾಲ ಶ್ರೀಗಳಿಂದ ಆಶೀರ್ವಚನ. ನಂತರ ಸಕಲ ವಾದ್ಯವೈಭವಗಳೊಂದಿಗೆ ಪಲ್ಲಕ್ಕಿ ಸೇವೆ ನಂತರ ದೇವಸ್ಥಾನ ಟ್ರಸ್ಟ್ ಇವರಿಂದ ವರದಿ ವಾಚನ ಮುಂತಾದ ಕಾರ್ಯಕ್ರಮಗಳು ಜರುಗುವವು
ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀರಾಮಚಂದ್ರದೇವರ ಹಾಗೂ ಶ್ರೀಕೊರವಾರೇಶನ ಅನುಗ್ರಹಕ್ಕೆ ಪಾತ್ರರಾಗಲು ದೇವಸ್ಥಾನ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.

