Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿಷಯಗಳನ್ನು ಮನನ ಮಾಡಿಕೊಳ್ಳುವತ್ತಾ ಗಮನಹರಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಉಪ ನಿರ್ದೇಶಕ ಅಜಿತ್ ಮನಿಕೇರಿ ಹೇಳಿದರು.ಅವರು ಕುಂಬಾರಹಳ್ಳದ ಸರಕಾರಿ ಪ್ರೌಢಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಶಾಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿ ಜೀವನ ಸುಂದರವಾಗಿ ರೂಪಿಸಿಕೊಳ್ಳಲು ಎಸ್ ಎಸ್ ಎಲ್ ಸಿ ಪ್ರಮುಖ ಘಟ್ಟವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಒಳ್ಳೆಯ ಫಲಿತಾಂಶ ಪಡೆದು ತೇರ್ಗಡೆ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಶಿಕ್ಷಕ ವೃಂದ ಅತ್ಯಂತ ಅಚ್ಚುಕಟ್ಟಾಗಿ ತಮ್ಮ ಬೋಧನೆಯಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಕುಂಬಾರಹಳ್ಳ ಪ್ರೌಢಶಾಲೆಯು ಫಲಿತಾಂಶ ಮತ್ತು ಕ್ರೀಡೆಗಳಲ್ಲಿ ತಾಲೂಕು ಮತ್ತು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಶಾಲೆಯಾಗಿದೆ ಎಂದು ಹೇಳಿದರು.ಕಳೆದ ವರ್ಷಕ್ಕಿಂತ ಈ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ನೂರಕ್ಕೆ ನೂರರಷ್ಟು ಆಗಲು ಶಿಕ್ಷಕರು ಶ್ರಮಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀಮತಿ ಶಾರದಾ ಮಠ, ಸಂಜೀವ ಝಂಬುರೆ,…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಹಲವು ಸಾಂಕ್ರಾಮಿಕ ರೋಗಿಗಳಿಗೆ ಆಹ್ವಾನ ನೀಡುವುದೇ ಮಹಾಮಾರಿ ಏಡ್ಸ್ ವೈರಸ್ ಎಂದು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ರೇವಣ್ಣಸಿದ್ದಪ್ಪ ರಾಜಾಪುರ ಹೇಳಿದರು.ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ರೆಡ್ ಕ್ರಾಸ್ ಘಟಕದಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಡಿಸೆಂಬರ್ ಒಂದರಂದು ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸಿದ ಚಿಕಿತ್ಸೆಯ ಉಪಕರಣಗಳು, ಏಡ್ಸ್ ರೋಗಿ ಬಳಸಿದ ಬ್ಲೇಡ್, ಏಡ್ಸ್ ರೋಗವಿದ್ದ ತಾಯಿ ಎದೆ ಹಾಲು ಏಡ್ಸ್ ರೋಗಕ್ಕೆ ಕಾರಣವಾಗುತ್ತದೆ, ಇದು ಹೆಚ್ಚಾಗಿ ಕಟ್ಟಡ ಕಾರ್ಮಿಕರು, ವಲಸಿಗರು, ಲಾರಿ ಚಾಲಕರಲ್ಲಿ ಕಂಡುಬರುತ್ತದೆ. ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಹಾಗಾಗಿ ಹದಿ…
ವಿಜಯಪುರದಲ್ಲೊಂದು ಅಪರೂಪದ ವಿವಾಹ ಮಹೋತ್ಸವ | ಸ್ವಲ್ಪವೂ ಪ್ಲಾಸ್ಟಿಕ್ ಬಳಕೆ ಇಲ್ಲದ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಾಹ ಸಮಾರಂಭದಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಪ್ಲೇಟ್ ಎಗ್ಗಿಲ್ಲದೇ ಬಳಕೆಯಾಗುವುದು ರೂಢಿ. ಆದರೆ ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಅಪರೂಪದ ವಿವಾಹ ಮಹೋತ್ಸವ ನಡೆಯಿತು.ಅದಕ್ಕೆ ಕಾರಣ ಪ್ಲಾಸ್ಟಿಕ್ ಬಳಕೆಯೇ ಇಲ್ಲದಿರುವುದು. ಅಷ್ಟೇ ಅಲ್ಲದೇ ಉತ್ತಮ ಜೀವನಕ್ಕೆ ಮಾರ್ಗದರ್ಶಿಯಾದ ಮಹಾತ್ಮರ ಸೂಕ್ತಿಗಳ ಪ್ರದರ್ಶನ, ಭಾರತೀಯ ಆಹಾರ ಸಂಸ್ಕೃತಿ ಪ್ರತಿನಿಧಿಸುವ ಬಾಳೆ ಎಲೆಯಿಂದ ಮಾಡಿದ ತಟ್ಟೆಗಳ ಬಳಕೆ ಹೀಗೆ ಸಂಸ್ಕೃತಿ, ಸ್ವದೇಶಿ, ಪರಿಸರ ರಕ್ಷಣೆಯ ತ್ರಿವೇಣಿ ಸಂಗಮದಂತೆ ಕಲ್ಯಾಣ ಮಹೋತ್ಸವ ಜರುಗಿತು.ಕಳೆದ ಹಲವಾರು ವರ್ಷಗಳಿಂದ ಪರಿಸರ ರಕ್ಷಣೆ, ಸ್ವದೇಶಿ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾಗಪ್ಪ ಅಂಗಡಿ ಅವರು ತಮ್ಮ ಸುಪುತ್ರ ಸಚೀನ್ ಅವರ ವಿವಾಹ ಮಹೋತ್ಸವದಲ್ಲಿಯೂ ಸ್ವದೇಶಿ ಹಾಗೂ ಅರ್ಥಪೂರ್ಣತೆಯ ಸ್ಪರ್ಶ ಮಾಡಿದ್ದು ವಿಶೇಷ.ಸಚೀನ್ ಹಾಗೂ ಪ್ರತೀಕ್ಷಾ ಅವರು ಸಪ್ತಪದಿ ತುಳಿದ ಪವಿತ್ರ ಶುಭ ಸಮಾರಂಭದಲ್ಲಿ ಪರಿಸರ ರಕ್ಷಣೆಯ ಕಾಳಜಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಹಾಗೂ ಭಾಷೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ ಶಂಕರ ಬೈಚಬಾಳ ಹೇಳಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಮತ್ತು ಶ್ರೀ ಸಂಗಮೇಶ್ವರ ಕಲಾ & ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಭಾಷೆಯ ಶ್ರೀಮಂತಿಕೆ ವಿಸ್ತರಿಸಲು ಕನ್ನಡ ಬಳಕೆ ಹೆಚ್ಚಳ ಅಗತ್ಯವಿದೆ ಎಂದು ಹೇಳಿದ ಅವರು, “ಗಡಿ ಪ್ರದೇಶಗಳಲ್ಲಿ ಕನ್ನಡ ನಾಡು–ನುಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕು” ಎಂದು ಒತ್ತಿಹೇಳಿದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ಮಾಗಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಭಾಷೆಗಳ ವ್ಯಾಮೋಹದಿಂದ ಕನ್ನಡದ ಬೇರುಗಳು ಕುಗ್ಗುತ್ತಿರುವ ಆತಂಕ ವ್ಯಕ್ತಪಡಿಸಿದರು. “ಕನ್ನಡದ ಗತ ವೈಭವ ಮರಳಿ ತರಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ” ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಆರ್.ಪಿ. ಬಗಲಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ…
ವಿಜಯಪುರದಲ್ಲಿ ವೃಕ್ಷೆೊಥಾನ್ ಟ್ರಸ್ಟ್ನ ಸಂಚಾಲಕ ಡಾ.ಮಹಾಂತೇಶ ಬಿರಾದಾರ ವಿವರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಸರ ರಕ್ಷಣೆಯ ದೃಷ್ಟಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಧ್ಯೇಯೋದ್ದೇಶದಿಂದ ಡಿಸೆಂಬರ್ ೭ ರಂದು ನಡೆಯಲಿರುವ ವೃಕ್ಷೆೊಥಾನ್‌ಗೆ ಈ ಬಾರಿ ಸಾಂಸ್ಕೃತಿಕ ಸ್ಪರ್ಶ ನೀಡಲಾಗಿದ್ದು, ಓಟ ನಡೆಯುವ ಸ್ಥಳಗಳಲ್ಲಿ ಭಾರತೀಯ ಕಲಾ ಸಂಸ್ಕೃತಿಯ ಭವ್ಯತೆ ಅನಾವರಣಕ್ಕೆ ವಿಶೇಷ ವೇದಿಕೆ ರೂಪಿಸಲಾಗುತ್ತಿದೆ.ಆಯಾ ಸ್ಥಳಗಳಲ್ಲಿ ಕಲಾ ವೈವಿಧ್ಯಮ ಸಾರುವ ವಿಶೇಷ ವೇದಿಕೆಗಳಲ್ಲಿ ಕಲಾ ತಂಡಗಳು ತಮ್ಮ ಕಲಾ ಪ್ರೌಢಿಮೆಯನ್ನು ನಿರೂಪಿಸಲಿವೆ.ಸೋಮವಾರ ಈ ಕುರಿತು ವಿವರಣೆ ನೀಡಿದ ವೃಕ್ಷೆೊಥಾನ್ ಟ್ರಸ್ಟ್ನ ಸಂಚಾಲಕ ಡಾ.ಮಹಾಂತೇಶ ಬಿರಾದಾರ, ಆರನೇಯ ಬಾರಿಗೆ ವೃಕ್ಷೆೊಥಾನ್ ವಿಜಯಪುರ ಜಿಲ್ಲೆಯಲ್ಲಿ ನಡೆಸಲಾಗುತ್ತಿದ್ದು, ಈ ಬಾರಿ ೨೦ ಸಾವಿರಕ್ಕೂ ಹೆಚ್ಚು ಜನರು ಓಟದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದು, ಉದ್ದೇಶವೊಂದಕ್ಕೆ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ನವ ದಾಖಲೆ ಬರೆಯಲು ವಿಜಯಪುರ ಜನತೆ ಸಜ್ಜಾಗಿದ್ದಾರೆ, ಹೀಗಾಗಿ ಈ ಬಾರಿ ಓಟಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ವಿವರಿಸಿದರು.ಡಾ. ಬಿ. ಆರ್. ಅಂಬೇಡ್ಕರ್ ಒಳ ಆವರಣದಲ್ಲಿ ಪುಣೆಯ…
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಚಿಂತಕ ಡಿ.ಉಮಾಪತಿ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕುಡಿಯುವ ನೀರನ್ನು ಸಹ ಸರ್ಕಾರಗಳು ಖಾಸಗೀಕರಣ ಮಾಡುತ್ತಿದೆ, ಖಾಸಗಿಯವರು ದುಬಾರಿ ಶುಲ್ಕದ ಮೂಲಕ ಜನಸಾಮಾನ್ಯರ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಚಿಂತಕ ಡಿ.ಉಮಾಪತಿ ಖಾಸಗಿಕರಣದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಬೇಧವಿಲ್ಲದೇ ಸಕಲ ಪಕ್ಷಗಳು ಖಾಸಗೀಕರಣಕ್ಕೆ ಕುಮ್ಮಕ್ಕು ನೀಡುತ್ತಿವೆ, ಕುಡಿಯುವ ನೀರು, ಆರೋಗ್ಯ ಎಲ್ಲವನ್ನೂ ಖಾಸಗಿಯವರ ಸುಪರ್ದಿಗೆ ನೀಡುತ್ತಿದೆ, ಈ ಖಾಸಗಿಯವರು ಶುಲ್ಕಗಳನ್ನು ಮನಸ್ಸಿಗೆ ಬಂದಂತೆ ಪಡೆದುಕೊಂಡು ಜನಸಾಮಾನ್ಯರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.ಈ ದೇಶದ ಕಾಡು, ನದಿ, ಗುಡ್ಡ ಕೊಳ್ಳೆ ಹೊಡೆದು ಪ್ರಾಕೃತಿಕ ಸಂಪತ್ತುಗಳಾದ ಗಣಿ ಮೊದಲಾದವುಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುತ್ತಿದ್ದಾರೆ, ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವ ಹುನ್ನಾರವನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕು ಎಂದು ಕರೆ…
ಲೇಖನ- ಬಸವರಾಜ್ ಹೂಗಾರ (ಆಲಮೇಲ)ನಿಕಟ ಪೂರ್ವ ಜಿಲ್ಲಾಧ್ಯಕ್ಷರು, ಬಿಜೆಪಿ ಮೋರ್ಚಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ 2025ರ ನವೆಂಬರ್—ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮೈಲುಗಲ್ಲು“ಮಹಿಳಾ ವಿಜಯದ ನವೆಂಬರ್”.ಒಂದೇ ತಿಂಗಳಲ್ಲಿ, ಒಂದೇ ಆತ್ಮಸತ್ಯದಿಂದ, ಒಂದೇ ರಾಷ್ಟ್ರಧ್ವಜದ ಕೆಳಗೆ—ಭಾರತದ ಮೂವರು ಮಹಿಳಾ ತಂಡಗಳು ಜಾಗತಿಕ ವೇದಿಕೆಯಲ್ಲಿ ಮೂರು ವಿಶ್ವಕಪ್‌ಗಳನ್ನು ಗೆದ್ದು ರಾಷ್ಟ್ರದ ಹೆಮ್ಮೆಯನ್ನು ದಶಪಟ್ಟು ಹೆಚ್ಚಿಸಿವೆ.ನವೆಂಬರ್ 2ರಂದು ಮಹಿಳಾ ಏಕದಿನ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿ ಹಿಡಿದಾಗ, ಅದು ಕೇವಲ ಟ್ರೋಫಿ ಅಲ್ಲ; ದಶಕಗಳ ಪರಿಶ್ರಮ, ಮೌನದ ಹೋರಾಟ ಮತ್ತು ವಿಶ್ವಮಟ್ಟದ ಸಾಮರ್ಥ್ಯದ ಘೋಷಣೆ.ಅದೇ ದಿನ, ನವೆಂಬರ್ 2ರ ನಸುಕಿನ ಸುದ್ದಿಯಲ್ಲೇ ಮತ್ತೊಂದು ಮಿಂಚು ಅಂಧರ ಮಹಿಳಾ ಟಿ–20 ವಿಶ್ವಕಪ್‌ನಲ್ಲಿ ಭಾರತದ ಅಚಲ ವಿಜಯ. ಕಣ್ಣು ಕಾಣದಿದ್ದರೂ, ಲಕ್ಷ್ಯ ತಪ್ಪದ ಧೈರ್ಯ. ಮೈದಾನದಲ್ಲೇ ಅಲ್ಲ, ಮನಸ್ಸಿನಲ್ಲೂ ಬೆಳಕು ಬೀರುವ ಜಯ.ಈ ಜಯಗಳ ಜೋಡಿ ದೇಶದೊಳಗೆ ಸಂಭ್ರಮದ ಹೊಳೆ ಹರಿಸುತ್ತಿರುವಾಗ, ನವೆಂಬರ್ 23ರಂದು ಮತ್ತೊಂದು ಗರಳಿನ ಗುರುತು—ಭಾರತ ಮಹಿಳಾ ತಂಡದ ಟಿ–20 ವಿಶ್ವಕಪ್ ಜಯ. ಕ್ರಿಕೆಟ್‌ನ ಎರಡೂ ಸ್ವರೂಪಗಳನ್ನೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಕಾಳಿಕಾ ನಗರದ ನಿವಾಸಿ ಶಕುಂತಲಾ ವಿಶ್ವನಾಥ ಗೋಲಾ (೮೪) ರವಿವಾರ ನಿಧನರಾಗಿದ್ದಾರೆ. ಮೃತರು ಪತಿ ಮತ್ತು ಜಿ.ಪಿ.ಪೋರವಾಲ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಅವರು ಸೇರಿದಂತೆ ಈರ್ವರು ಸುಪುತ್ರ ಮತ್ತು ಸುಪುತ್ರಿಯರನ್ನು ಅಗಲಿದ್ದಾರೆ.ರವಿವಾರ ಸಂಜೆ ಸಿಂದಗಿಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ವಿಧಿವತ್ತಾಗಿ ನೆರವೇರಿತು.ಸಂತಾಪ: ಮೃತರಿಗೆ ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ವಿಪ ಶಾಸಕ ಅರುಣ ಶಹಾಪೂರ, ಅಶೋಕ ವಾರದ, ಇಂದುಶೇಖರ ಮಣೂರ, ಎಂ.ಎಂ.ಹಂಗರಗಿ, ಮುತ್ತು ಮುಂಡೇವಾಡಗಿ ಸೇರಿದಂತೆ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ, ನೆಹರೂ ಮನೆತನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಸಂವಿಧಾನವನ್ನು ಯಾರು ಎಷ್ಟು ಬಾರಿ ತಿದ್ದುಪಡಿ ಮಾಡಿದರು, ಏತಕ್ಕಾಗಿ ಮಾಡಿದರು ಎಂಬುದು ಮುಖ್ಯ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಸಿಂದಗಿ ಪಟ್ಟಣದ ಮಾಂಗಲ್ಯ ಭವನದಲ್ಲಿ ಸಿಂದಗಿ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳ ಅನಾವರಣ ಹಾಗೂ ಹೊಸ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೭೫ರ ತುರ್ತು ಪರಿಸ್ಥಿತಿ, ೧೯೫೧ರಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೆರಲು ಮಾಡಿದ ತಿದ್ದುಪಡಿ ಸೇರಿದಂತೆ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ೭೬ಬಾರಿ ಸಂವಿಧಾನ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದು ಕಾಂಗ್ರೆಸ್ ಎಂದು ಆರೋಪ ಮಾಡಿದರು.ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ವಿರುದ್ಧ ಚುನಾವಣಾ ತಕರಾರು ಪ್ರಕರಣ ದಾಖಲಿಸಲು ನಿರ್ಬಂಧ ವಿಧಿಸುವ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುವಂತಿಲ್ಲ ಎಂದಿದ್ದು ಕಾಂಗ್ರೆಸ್. ಕಾಂಗ್ರೆಸ್ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ” ಎಂಬ ಅಂಬೇಡ್ಕರ್ ಮಾತು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ದತ್ತ ಜಯಂತಿ ನಿಮಿತ್ಯ ಮಹಾರಾಷ್ಟ್ರದ ಭಕ್ತರು ದತ್ತಾತ್ರೆ ಮೂರ್ತಿಯ ಪಲ್ಲಕಿಯೊಂದಿಗೆ ಪಾದಯಾತ್ರೆ ಮೂಲಕ ಗಾಣಗಾಪೂರಕ್ಕೆ ತೆರಳುತ್ತಿರುವ ದತ್ತಾತ್ರೆಯ ಪಾದಯಾತ್ರಿಗಳು ಬಾನುವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ್ದು ಸ್ಥಳಿಯ ಭಕ್ತರು ಸ್ವಾಗತಿಸಿದರು.ನಂತರ ಅಫಜಲಪೂರ ರಸ್ತೆಯ ಮಹಾದೇವ ಗೋಪಾಳ ಬಂಡಗಾರ ಇವರ ತೊಟದ ಮನೆಯಲ್ಲಿ ವಾಸ್ತವ್ಯ ಮಾಡಿದರು. ಬಂಡಗಾರ ಕುಟುಂಬ ಭಕ್ತಿಯಿಂದ ಸ್ವಾಗತಿಸಿ ವಿಶೇಷ ಪೂಜೆಗೈದು ಬಿಳಕೊಟ್ಟರು.ಬೆಳಗ್ಗೆ 11 ಗಂಟೆಗೆ ಬಂಡಗಾರ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಮದ್ಯಾಹ್ನ ಪ್ರಸಾದ ಸೇವಿಸಿ ಸಾಯಂಕಾಲ 4 ಗಂಟೆಗೆ ಮತ್ತೆ ಪಾದಯಾತ್ರೆ ಮೂಲಕ ದೇವಣಗಾಂವ ಮಾರ್ಗವಾಗಿ ಗಾಣಗಾಪೂರಕ್ಕೆ ತೆರಳಿದರು. ಪಾದಯಾತ್ರಿಕರು ಮಹಾರಾಷ್ಟ್ರದ ಸೊಲಾಪೂರ ಜಿಲ್ಲೆಯ ಮಾಳಸಿರಸ ನಗರದ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ನೇತೃತ್ವದಲ್ಲಿ ಮೂರೆನೆ ವರ್ಷ ಹೊಸ ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯ ಮೂಲಕ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪೂರ ದತ್ತಾತ್ರಾಯ ದರ್ಶನಕ್ಕೆ ತೆರಳುತ್ತಿರುವದಾಗಿ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ಪ್ರಮುಖ ಪೂಜಾರಿ ದಾದಾ ಮಹಾರಾಜ ತಿಳಿಸಿದರು.ಪಾದಯಾತ್ರೆಯಲ್ಲಿ ಪ್ರಮುಖರಾದ ಬಾರಮತಿಯ…
