ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಹಲವು ಸಾಂಕ್ರಾಮಿಕ ರೋಗಿಗಳಿಗೆ ಆಹ್ವಾನ ನೀಡುವುದೇ ಮಹಾಮಾರಿ ಏಡ್ಸ್ ವೈರಸ್ ಎಂದು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ರೇವಣ್ಣಸಿದ್ದಪ್ಪ ರಾಜಾಪುರ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ರೆಡ್ ಕ್ರಾಸ್ ಘಟಕದಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಡಿಸೆಂಬರ್ ಒಂದರಂದು ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸಿದ ಚಿಕಿತ್ಸೆಯ ಉಪಕರಣಗಳು, ಏಡ್ಸ್ ರೋಗಿ ಬಳಸಿದ ಬ್ಲೇಡ್, ಏಡ್ಸ್ ರೋಗವಿದ್ದ ತಾಯಿ ಎದೆ ಹಾಲು ಏಡ್ಸ್ ರೋಗಕ್ಕೆ ಕಾರಣವಾಗುತ್ತದೆ, ಇದು ಹೆಚ್ಚಾಗಿ ಕಟ್ಟಡ ಕಾರ್ಮಿಕರು, ವಲಸಿಗರು, ಲಾರಿ ಚಾಲಕರಲ್ಲಿ ಕಂಡುಬರುತ್ತದೆ. ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಹಾಗಾಗಿ ಹದಿ ಹರೆಯದ ಯುವಕ ಯುವತಿಯರು ಜಾಣರಾಗಿ, ಜಾಗೃತರಾಗಿ ಜಗದ ಆರೋಗ್ಯ ಕಾಪಾಡಲು ಮುಂದಾಗಬೇಕಿದೆ ಎಂದರು.
ರೇಡ್ ಕ್ರಾಸ್ ಸಂಯೋಜಕ ಮಲ್ಲಿಕಾರ್ಜುನ ಮರಡ್ಡಿ ಪ್ರಾಸ್ತಾವಿಕ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಆತುರದ ನಿರ್ಧಾರ ಅನಾರೋಗ್ಯಕ್ಕೆ ಕಾರಣ, ನಮ್ಮ ಆರೋಗ್ಯ ನಮ್ಮ ಹಕ್ಕು ಎಂಬುದನ್ನು ಅರಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ ಸಿದ್ದಲಿಂಗ ರಾಠೋಡ್ ವಿದ್ಯಾರ್ಥಿಗಳು ಸದೃಢ ಹಾಗೂ ಸಶಕ್ತ ಸಮಾಜ ನಿರ್ಮಾಣವೇ ವಿಶ್ವ ಏಡ್ಸ್ ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಇದೇ ವೇಳೆ ಸಿಡಿಸಿ ಸದಸ್ಯರಾದ ಡಾ ಯಂಕನಗೌಡ ಪಾಟೀಲ, ಡಾ ಮಲ್ಲಣ್ಣ ಬಿಳೆಬಾವಿ, ಉಪನ್ಯಾಸಕರಾದ ಡಾ ಶರಣಪ್ಪ ಸಾಹು, ಡಾ ಆನಂದ ರೇವಡಿ , ಶರಣಬಸವ ಅಂಗಡಿ, ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

