ಉದಯರಶ್ಮಿ ದಿನಪತ್ರಿಕೆ
ಆಲಮೇಲ: ದತ್ತ ಜಯಂತಿ ನಿಮಿತ್ಯ ಮಹಾರಾಷ್ಟ್ರದ ಭಕ್ತರು ದತ್ತಾತ್ರೆ ಮೂರ್ತಿಯ ಪಲ್ಲಕಿಯೊಂದಿಗೆ ಪಾದಯಾತ್ರೆ ಮೂಲಕ ಗಾಣಗಾಪೂರಕ್ಕೆ ತೆರಳುತ್ತಿರುವ ದತ್ತಾತ್ರೆಯ ಪಾದಯಾತ್ರಿಗಳು ಬಾನುವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ್ದು ಸ್ಥಳಿಯ ಭಕ್ತರು ಸ್ವಾಗತಿಸಿದರು.
ನಂತರ ಅಫಜಲಪೂರ ರಸ್ತೆಯ ಮಹಾದೇವ ಗೋಪಾಳ ಬಂಡಗಾರ ಇವರ ತೊಟದ ಮನೆಯಲ್ಲಿ ವಾಸ್ತವ್ಯ ಮಾಡಿದರು. ಬಂಡಗಾರ ಕುಟುಂಬ ಭಕ್ತಿಯಿಂದ ಸ್ವಾಗತಿಸಿ ವಿಶೇಷ ಪೂಜೆಗೈದು ಬಿಳಕೊಟ್ಟರು.
ಬೆಳಗ್ಗೆ 11 ಗಂಟೆಗೆ ಬಂಡಗಾರ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಮದ್ಯಾಹ್ನ ಪ್ರಸಾದ ಸೇವಿಸಿ ಸಾಯಂಕಾಲ 4 ಗಂಟೆಗೆ ಮತ್ತೆ ಪಾದಯಾತ್ರೆ ಮೂಲಕ ದೇವಣಗಾಂವ ಮಾರ್ಗವಾಗಿ ಗಾಣಗಾಪೂರಕ್ಕೆ ತೆರಳಿದರು. ಪಾದಯಾತ್ರಿಕರು ಮಹಾರಾಷ್ಟ್ರದ ಸೊಲಾಪೂರ ಜಿಲ್ಲೆಯ ಮಾಳಸಿರಸ ನಗರದ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ನೇತೃತ್ವದಲ್ಲಿ ಮೂರೆನೆ ವರ್ಷ ಹೊಸ ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯ ಮೂಲಕ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪೂರ ದತ್ತಾತ್ರಾಯ ದರ್ಶನಕ್ಕೆ ತೆರಳುತ್ತಿರುವದಾಗಿ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ಪ್ರಮುಖ ಪೂಜಾರಿ ದಾದಾ ಮಹಾರಾಜ ತಿಳಿಸಿದರು.
ಪಾದಯಾತ್ರೆಯಲ್ಲಿ ಪ್ರಮುಖರಾದ ಬಾರಮತಿಯ ದತ್ತಾತ್ರೆಯ ಗೋರೆ, ವಿಜಯ ಗೊರೆ ಮುಂತಾದವರು ಇದ್ದರು.

