Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳ ದೈಹಿಕ, ಮಾನಸಿಕ ಶ್ರೇಯೋಭಿವೃದ್ಧಿಗೆ ಶಾಲೆ ಆವರಣದ ಪರಿಸರವು ಪರಿಣಾಮ ಬೀರುತ್ತದೆ. ಈ ಶಾಲೆಯಲ್ಲಿ ಮಕ್ಕಳ ಪ್ರಗತಿಗೆ ಪೂರಕ ವಾತರಣವಿರುವುದು ತುಂಬಾ ಹರ್ಷ ತಂದಿದೆ. ಕೇವಲ ಎರಡೇ ವರ್ಷದಲ್ಲಿ ಶಾಲೆ ಇಷ್ಟೊಂದು ಎತ್ತರಕ್ಕೆ ಬೆಳೆಯಬೇಕಾದರೆ ಶಾಲಾ ವ್ಯವಸ್ಥಾಪಕ ಮಂಡಳಿಯ ಜೊತೆಗೆ ಸಿಬ್ಬಂದಿಗಳ ಶ್ರಮವೂ ಪ್ರಮುಖವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಹೇಳಿದರು.ಪಟ್ಟಣದ ಕಿಡ್ಜಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸಂಸ್ಕಾರ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ, ಸಾಂಸ್ಕೃತಿಕ ಚಟುವಟಕೆಗಳು ಮತ್ತು ಸ್ನೇಹ ಬಾಂಧವ್ಯವನ್ನು ಉತ್ತೇಜಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಇಂತಹ ಸಮಾರಂಭಗಳು ಮಕ್ಕಳಲ್ಲಿ ನಾಯಕತ್ವದ ಗುಣ, ಶಿಸ್ತು, ಸಂಸ್ಕಾರ, ಸಂಸ್ಕೃತಿ ಮತ್ತು ಮೌಲ್ಯಯುತ ಶಿಕ್ಷಣವನ್ನು ಬೆಳೆಸುವ ವೇದಿಕೆಯಾಗುತ್ತದೆ ಎಂದರು.ಈ ವೇಳೆ ೫೦೦ಕ್ಕೂ ಅಧಿಕ ವಚನಗಳ ವಾಚನ, ಭಗವದ್ಗೀತೆಯ ೧೮ ಅಧ್ಯಾಯಗಳ ಹೆಸರು, ಶ್ರೀರಾಮ ವಂಶಸ್ಥರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಹಿಳೆಯರು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿ ಜೀವನ ಸಾಗಿಸಬೇಕು. ಮಹಿಳೆ ಎಲ್ಲರಿಗೂ ಮಾದರಿಯಾಗಿ ಬದುಕಬೇಕು ಎಂದು ಸಮಾಜ ಸೇವಕಿ, ಶಿಕ್ಷಣ ಪ್ರೇಮಿ ನಾಗರತ್ನ ಅಶೋಕ ಮನಗೂಳಿ ಅಭಿಪ್ರಾಯ ವ್ಯಕ್ತಪಡಿಸಿದರು.ಸಿಂದಗಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಸಾಧನೆಗೈದಿದ್ದಾರೆ. ವಿದ್ಯಾವಂತ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಮಹಿಳೆಯರನ್ನು ಪೂಜ್ಯನೀಯ ಭಾವದಿಂದ ಭಾರತ ಕಾಣುತ್ತದೆ ಎಂದರು.ಈ ವೇಳೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮಾತನಾಡಿ, ಮಹಿಳೆಯರು ಇಂದು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತನ್ನುನ್ನು ತಾವು ಎಲ್ಲ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ನೀಡುವುದರ ಮೂಲಕ ಮಹಿಳೆಯರನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡುಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲಮೇಲ ಮಹಿಳಾ ಸಾಹಿತಿ ರೇವತಿ ಉಪ್ಪಿನ ವಹಿಸಿ ಮಾತನಾಡಿದರು.…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ರಾಮ ನವಮಿ ನಿಮಿತ್ತ ಶ್ರೀರಾಮನ ಮೂರ್ತಿ ಮೆರವಣಿಗೆ ಪಟ್ಟಣದ ದೇವಿಗುಡಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣ ಪಂಚಾಯತ ಆವರಣದವರೆಗೆ ನಡೆಯಿತು.ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಸಾಮಾಜಿಕ ಸಮರಸತ ಪ್ರಮುಖರಾದ ಶ್ರೀಮಂತ ದುದ್ದಗಿ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಹಣಮಂತ ರಜಪೂತ ಮಾತನಾಡಿ, ಈಗಿನ ಯುವಪಿಳಿಗೆಗಳಾದ ನಾವುಗಳು ರಾಮನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ನಮ್ಮ ಹಿಂದೂ ಆಚರಣೆಗಳನ್ನು ರೂಡಿಸಿಕೊಳ್ಳಬೇಕು. ನಮ್ಮ ಹಿಂದೂ ಧರ್ಮ ರಕ್ಷಣೆಗೆ ನಾವೆಲ್ಲರೂ ಸಿದ್ದರಿರಬೇಕು ಎಂದರು.ಮುಖಂಡ ಕಮಲಾಕರ ಪತ್ತಾರ ಮಾತನಾಡಿ, ಹಿಂದೂ ಹುಡುಗಿಯರು ಮತಾಂತರ ವಾಗುವುದನ್ನು ತಡೆಗಟ್ಟಬೇಕಿದೆ. ಗೋವು ರಕ್ಷಣೆ ದೇಶರಕ್ಷಣೆ ಧರ್ಮ ರಕ್ಷಣೆ ಪ್ರತಿಯೊಬ್ಬ ಭಾರತೀಯ ಹಿಂದೂವಿನ ಕರ್ತವ್ಯವಾಗಿದೆ ಎಂದು ಹೇಳಿದರು.ಮೆರವಣಿಗೆಯಲ್ಲಿ ವಿಜಯಪುರ ಶಾಸಕರ ಬಸವನಗೌಡ ಪಾಟೀಲ(ಯತ್ನಾಳ) ಭಾವಚಿತ್ರಗಳು ರಾರಾಜಿಸುತ್ತಿದ್ದವು. ಯುವಕರ ಬಾಯಿಯಲ್ಲಿ ಮುಂದಿನ ಮುಖ್ಯಮಂತ್ರಿ ಬಸನಗೌಡ ಪಾಟೀಲ ಎಂದು ಕೂಗುತ್ತಿದ್ದರು. ಬಿಜೆಪಿ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಹಿಂದೆ ನಮ್ಮ ತಂದೆ/ತಾಯಿ, ಅಜ್ಜ /ಅಜ್ಜಿಯರ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಸಂತಾನ ಹೆಚ್ಚಾಗಿ ಮನೆಗಳಲ್ಲಿ ಕಾಣುತಿದ್ದೆವು, ಆದರೆ ಇವಾಗ ಜಗತ್ತಿನಲ್ಲಿ ಮೊಬೈಲ್, ಸೆಟಲೈಟ್, ವಾಹನಗಳ ಮಾಲಿನ್ಯಕ್ಕೆ ಪಕ್ಷಿಗಳ ಸಂತಾನ ಕ್ಷಿಣಿಸುತ್ತಿದೆ, ಇದಕ್ಕೆಲ್ಲ ನಾವು ಮನುಜರು ಮನಸ್ಸು ಮಾಡಿದರೆ ಪಕ್ಷಿಗಳ ಸಂತಾನ ಉಳಿಸಲು ಸಾಧ್ಯ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಹೇಳಿದರು.ಬೇಸಿಗೆ ಸಮಯದಲ್ಲಿ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಕೆರೆಯಲ್ಲಿ ಸಾವಿರಾರು ಪಕ್ಷಿಗಳು ನಾಶವಾದ ವಿಷಯ ಕಂಡು ಝಳಕಿ ಗ್ರಾಮದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಹಾಗೂ ಗೆಳೆಯರ ಬಳಗದ ಸಹಯೋಗದಲ್ಲಿ ಪಕ್ಷಿಗಳಿಗೆ ನಿರುಣಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿಂದೆ ಸಲೀಮ್ ಅಲಿ ಅಂತಹ ಪ್ರಾಣಿ, ಪಕ್ಷಿಗಳ ಪ್ರಿಯರು ಇತಿಹಾಸದಲ್ಲೇ ದಾಖಲೆಯಾಗಿದ್ದನ್ನು ಕಂಡಿದ್ದೇವೆ, ನಾವುಗಳು ಪಕ್ಷಿಗಳಿಗೆ ದಿನದ ಒಂದು ಅರ್ಧ ಗಂಟೆ ಮಾತ್ರ ಕಾರ್ಯಗತರಾಗೋಣ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶ ಬಿರಾದಾರ,…
ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಮೊನ್ನೆ ನಡೆದ ಜನರೊಂದಿಗೆ ಜನತಾದಳ ಸಮಾವೇಶಕ್ಕೆ ಮಾಜಿ ಶಾಸಕ ಚಿಕ್ಕಣ್ಣ ಅವರನ್ನು ಕರೆತಂದಿದ್ದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ NDA ಅಭ್ಯರ್ಥಿ ಗೆಲ್ಲುವ ಒಂದು ಅವಕಾಶವಿತ್ತು. ಆದರೆ ಆ ಕೆಲಸವನ್ನು ನಿಖಿಲ್ ಕುಮಾರಸ್ವಾಮಿ ಮಾಡಲಿಲ್ಲ. ಜೆಡಿಎಸ್ ಪಕ್ಷದಿಂದ ದೂರ ಇರುವ ಮಾಜಿ ಶಾಸಕ ಚಿಕ್ಕಣ್ಣ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಅಂದೇ ಪಂಚೆಯನ್ನು ಮೇಲಕ್ಕೆ ಕಟ್ಟಿ, ಟಿಕೆಟ್ ತರುವುದಾಗಿ ತೊಡೆ ತಟ್ಟಿದ್ದರು. ಆ ಕೆಲಸವನ್ನು ಮುಂಬರುವ ವಿಧಾನಸಭೆ ಚುನಾವಣೆಗೂ ಮಾಡುತ್ತಾರೆ, NDA ಮೈತ್ರಿಕೂಟದಲ್ಲಿ ಟಿಕೆಟ್ ತರುತ್ತಾರೆ. ಹೀಗಾಗಿ ಇಬ್ಬರ ಜಗಳದಲ್ಲಿ ಮೂವರಿಗೆ ಲಾಭ ಎನ್ನುವ ಗಾದೆ ಮಾತಿನಂತೆ 2028 ವಿಧಾನಸಭಾ ಚುನಾವಣೆಗೂ ಕಾಂಗ್ರೆಸ್ ಗೆ ಲಾಭವಾಗಲಿದ್ದು, ಶಾಸಕ ಅನಿಲ್ ಚಿಕ್ಕಮಾದು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ವಿ. ಬಸವರಾಜು ಭವಿಷ್ಯ ನುಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಬಿ.ವಿ. ಬಸವರಾಜು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.ಸೋಮವಾರ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಭಗವಾನ್ ಮಹಾವೀರರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಪಂಚಮಹಾವ್ರತಗಳನ್ನು ಬೋಧಿಸಿದ್ದಾರೆ. ಈ ತತ್ವಗಳು ನಮ್ಮ ವ್ಯಕ್ತಿತ್ವವನ್ನು ಶೇಷ್ಠಗೋಳಿಸುವ ಮಾರ್ಗಸೂಚಿಗಳಾಗಿವೆ. ಎಲ್ಲರೂ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಭಾಗದ ಡೀನ ಮತ್ತು ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ಉಪಪ್ರಾಂಶುಪಾಲ ಡಾ. ಆನಂದ ಪಿ. ಅಂಬಲಿ, ಆರ್. ಆ್ಯಂಡ್ ಡಿ ವಿಭಾಗದ ನಿರ್ದೇಶಲ ಡಾ. ಎಂ. ಎಂ. ಪಾಟೀಲ, ಕಾನೂನು ಶಾಲೆಯ…
ವಿಜಯಪುರ ಜಿಲ್ಲಾಡಳಿತದಿಂದ ಭಗವಾನ ಮಹಾವೀರ ಜಯಂತಿ ಆಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತ್ಯಾಗಕ್ಕೆ ಮತ್ತೊಂದು ಹೆಸರು ಭಗವಾನ್ ಮಹಾವೀರರು. ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.ನಗರದ ಕಂದಗಲ್ ಶ್ರೀ ಹನಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾನತೆ, ಜಾತಿ ಪದ್ಧತಿ ನಿರಾಕರಿಸಿ ಎಲ್ಲರೂ ಸಮಾನರು ಎಂದು ಬೋಧಿಸಿದ ಮಹಾನ್ ಪುರುಷ ಭಗವಾನ್ ಮಹಾವೀರರು ಎಂದು ಬಣ್ಣಿಸಿದರು. ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳನ್ನು ಯುವಕರು ಅರ್ಥೈಸಿಕೊಂಡು ಆದರ್ಶ ಜೀವನ ನಡೆಸಬೇಕೆಂದರು.ಸಂತರು, ಸತ್ಪುರುಷರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಅರಿತುಕೊಳ್ಳುವ ಮೂಲಕ ಯುವಕರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮೋರಟಗಿ ಗ್ರಾಮವನ್ನು ಹಾಗೂ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಗಬಸಾವಳಗಿ, ಕೆರೂರ, ಆಹೇರಿ, ಬಿಸನಾಳ ಹಾಗೂ ಹಂಚಿನಾಳ ಗ್ರಾಮಗಳನ್ನು ಹಾಗೂ ಗುತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಗುತ್ತರಗಿ ಹಾಗೂ ಭಂಟನೂರ ಗ್ರಾಮಗಳನ್ನು ಮತ್ತು ತಾಳಿಕೋಟಿ ತಾಲೂಕಿನ ಸಾಸನೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸಾಸನೂರ ಹಾಗೂ ಚಬನೂರ ಗ್ರಾಮಗಳನ್ನು ಹಾಗೂ ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ವಡವಡಗಿ, ಹುಲಿಬೆಂಚಿ, ನಾಗರಾಳಹುಲಿ, ನಂದಿಹಾಳ ಪಿ.ಎಚ್, ಸಿಂಧಗೇರಿ ಹಾಗೂ ಶರಣ ಸೋಮನಾಳ ಗ್ರಾಮಗಳನ್ನು ಒಳಪಡಿಸಿ, ಗ್ರಾಮ ಪಂಚಾಯತಿಗಳನ್ನು ಪುನರ್ ರಚಿಸಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ಆನಂದ. ಕೆ. ಅವರು ಅಧಿಸೂಚನೆ ಹೊಡಿಸಿದ್ದಾರೆ.ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್.೨ ರೊಳಗೆ ಲಿಖಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಏಪ್ರಿಲ್ 27 ಮತ್ತು 28 ರಂದು ಸಿಂದಗಿ ನಗರದಲ್ಲಿ ನಡೆಯುವ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕವಿಗೋಷ್ಠಿ, ವಿಚಾರಗೋಷ್ಠಿ, ಉಪನ್ಯಾಸ, ಸಂಗೀತ, ಜನಪದ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಈ ಮೂಲಕ ಪೊಲೀಸರ ವಿವಿಧ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಮೌಲಾಲಿ ಆಲಗೂರ ಮನವಿ ಮಾಡಿಕೊಂಡರು.ಬಿಡುವಿಲ್ಲದ ಕರ್ತವ್ಯದ ನಡುವೆಯೂ ಜಿಲ್ಲೆಯ ನೂರಾರು ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಗಳು, ಕಥೆ, ಕಾವ್ಯ, ಕಾದಂಬರಿ ಒಳಗೊಂಡ ಸಾಹಿತ್ಯ, ಸಂಗೀತ, ಪ್ರವಚನ, ಜನಪದ, ನೃತ್ಯ, ನಟನೆ, ಸೇರಿದಂತೆ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಬಿಡುವಿನ ಅವಧಿಯನ್ನು ಕಲಾ ಆರಾಧನೆಗೆ ಅರ್ಪಿಸಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಇಲ್ಲದೆ ಕಲೆಗೆ ಬೆಲೆ ಸಿಗದಂತಾಗಿದೆ. ಆದ್ದರಿಂದ ಏಪ್ರಿಲ್ ಕೊನೆಯ ವಾರದಲ್ಲಿ ಜರುಗುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕರಿಗೆ ಅವಕಾಶ ನೀಡಿ, ಅವರ ಕಲೆ ಇಮ್ಮಡಿಗೊಳಿಸಬೇಕು.ಹಂಸಕವಿ ನಾಮದ ಬೀದರ ಜಿಲ್ಲೆ ಹೆಡ್ ಕಾನ್ಸ್‌ಟೇಬಲ್ ಹಣಮಂತರಾಯ ವಲ್ಲೆಪುರ…
