ಕಾರ್ಯನಿರತ ಪತ್ರಕರ್ತರ ಸಂಘ ತಾಳಿಕೋಟಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಗಳ ನೇಮಕ ಮಾಡಲಾಯಿತು.
ತಾಳಿಕೋಟಿ ಪ್ರವಾಸಿ ಮಂದಿರದಲ್ಲಿ ನಡೆದ ತಾಳಿಕೋಟಿ ತಾಲೂಕಿನ ೨೦೨೫-೨೮ರ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಉಸ್ತುವಾರಿಗಳಾಗಿ ಆಗಮಿಸಿದ ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮತ್ತು ಜಿಲ್ಲಾ ಖಜಾಂಚಿ ರಾಹುಲ ಆಪ್ಟೆ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತಾಳಿಕೋಟಿ ತಾಲೂಕಿನ ಅಧ್ಯಕ್ಷರನ್ನಾಗಿ ಉದಯವಾಣಿ ವರದಿಗಾರ ಮೈಬೂಬಸುಬಾನಿ ಸಿರಸಗಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಶಿವಾನಂದ ಎಮ್. ಸಜ್ಜನ ಮತ್ತು ಉಪಾಧ್ಯಕ್ಷರಾಗಿ ಸಂಜಯಸಿಂಗ್ ರಜಪೂತ, ಕಾರ್ಯದರ್ಶಿಯಾಗಿ ಯಲಗೂರಪ್ಪ ವಡವಡಗಿ ಹಾಗೂ ಖಜಾಂಚಿಯಾಗಿ ಸಂತೋಷ ಶಹಾಪೂರ ಅವರನ್ನು ಎಲ್ಲ ಕಾನಿಪ ಸದಸ್ಯರ ಸಹಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಕಾನಿಪ ಸದಸ್ಯರಾದ ಶ್ರೀಶೈಲ ಬಿರಾದಾರ, ಈರಣ್ಣ ಝಳಕಿ, ಸುನೀಲ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೃತ್ತಿ ಗೌರವ ಹೆಚ್ಚಿಸಲು ಶ್ರಮಿಸೋಣ :ಇಂದುಶೇಖರ
ಈ ವೇಳೆ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಘೋಷಣಾ ಪತ್ರವನ್ನು ನೀಡಿ ಮಾತನಾಡಿದ ಚುನಾವಣಾಧಿಕಾರಿ ಹಾಗೂ ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರು, ಪದಾಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಕಾರ್ಯಗಳ ಕುರಿತು ವಿವರಣೆ ಮತ್ತು ಮಾರ್ಗದರ್ಶನವನ್ನು ನೀಡಿ, ತಾಳಿಕೋಟೆ ಪದಾಧಿಕಾರಿಗಳು ನಿರಂತರವಾಗಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳೊಡನೆ ಸಂಪರ್ಕದಲ್ಲಿದ್ದು, ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಂಘದ ಬೆಳವಣಿಗೆಯ ಜೊತೆಗೆ ಪತ್ರಿಕಾ ವೃತ್ತಿ ಗೌರವವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

