ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಪ್ರತಿಭಾವಂತ ಶಿಕ್ಷಕರಾದ ಅಮಸಿದ್ಧ ಬಗಲಿ ಅವರು ಚಡಚಣ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಅಡಿಯಲ್ಲಿ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಂಗಳವಾರ ಚಡಚಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಅವರು ತಮ್ಮ ಸೃಜನಾತ್ಮಕ ಕೌಶಲ್ಯದ ಮೂಲಕ ಜಯ ಸಾಧಿಸಿದರು. ಪ್ರಸ್ತುತ ಅವರು ಶಿರಾಡೋಣದ ಶ್ರೀ ಬೀರೇಶ್ವರ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಸುರೇಶ ನಾಯಕ, ಬಿಆರ್‌ಪಿಗಳಾದ ಶ್ರೀಮತಿ ರಾಜೇಶ್ವರಿ ಕಾಮಗೊಂಡ, ಎಸ್.ಎಸ್. ಪಾಟೀಲ, ಗುರುಗಳು ಜೇವೂರ, ಸುನಿಲ್ ಯಳಮೇಲಿ, ಸುನಿಲ್ ಶಾಹಾ, ಜಗದೀಶ ಚಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಮಸಿದ್ಧ ಬಗಲಿ ಅವರ ಈ ಸಾಧನೆಗೆ ಶಿಕ್ಷಕರು, ವಿದ್ಯಾರ್ಥಿಗಳು, ಶ್ರೀ ಬೀರೇಶ್ವರ ಪ್ರೌಢ ಶಾಲೆಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಶಿಕ್ಷಣ ವಲಯದವರಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ

