ಅಧ್ಯಕ್ಷರಾಗಿ ಮಹಾಂತೇಶ ನೂಲಾನವರ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶೇಖ ಅವಿರೋಧ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಹಾಂತೇಶ ನೂಲಾನವರ, ಉಪಾಧ್ಯಕ್ಷರಾಗಿ ಭೀಮು ಕೆಂಭಾವಿ, ಅಂಬರೀಷ ಸುಣಗಾರ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶೇಖ ಅವಿರೋಧವಾಗಿ ಆಯ್ಕೆಯಾದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾನಿಪ ಸಂಘ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.
ಕಳೆದ ತಿಂಗಳು ಜಿಲ್ಲಾ ಘಟಕದ ಕಾನಿಪ ಚುನಾವಣೆ ಜರುಗಿದ ಬಳಿಕ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಲಾಗಿತ್ತು. ಇದರಂತೆ ಡಿ.೧೦ರಂದು ಸಿಂದಗಿ ಘಟಕದ ಕಾನಿಪ ಪತ್ರಕರ್ತರ ಚುನಾವಣೆ ನಿಗದಿಯಾಗಿತ್ತು.
ಈ ಚುನಾವಣೆಯಲ್ಲಿ ನೂತನ ಘಟಕದ ಪದಾಧಿಕಾರಿಗಳಾಗಿ ಮಹಾಂತೇಶ ನೂಲಾನವರ (ಅಧ್ಯಕ್ಷ), ಭೀಮರಾಯ ಕೆಂಭಾವಿ, ಅಂಬರೀಷ ಸುಣಗಾರ (ಉಪಾಧ್ಯಕ್ಷ), ಇಸ್ಮಾಯಿಲ್ ಶೇಖ್ (ಪ್ರಧಾನ ಕಾರ್ಯದರ್ಶಿ), ವಿಕಯಕುಮಾರ ಪತ್ತಾರ (ಖಜಾಂಚಿ), ನವೀನ ಶೆಳ್ಳಗಿ (ಕಾರ್ಯದರ್ಶಿ) ಕಾರ್ಯಕಾರಿಯಾಗಿ ಸಿದ್ದಣ್ಣ ಕಡಗಂಚಿ, ರಣಜೀತಸಿಂಗ್ ರಜಪೂತ, ವಿನಯಕುಮಾರ ಅಗಸರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಹೇಶ ಶೆಟಗಾರ ತಿಳಸಿದ್ದಾರೆ.
ಇದೇ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿಗಳಾಗಿ ಎಸ್.ಸಿ.ಕುಲಕರ್ಣಿ, ಮೋಹನ ಕುಲಕರ್ಣಿ, ಸಮೀರ ಇನಾಮದಾರ ಕಾರ್ಯ ನಿರ್ವಹಿಸಿದರು. ಎಂ.ಎಂ.ಇನಾಮದಾರ, ರವಿ ಮಲ್ಲೇದ, ಮಲ್ಲಿಕಾರ್ಜುನ ಅಲ್ಲಾಪುರ, ಆನಂದ ಶಾಬಾದಿ, ಸುದರ್ಶನ ಜಂಗ್ಗಣ್ಣಿ, ಮಲ್ಲಿಕಾರ್ಜುನ ಕೆಂಭಾವಿ, ಎ.ಡಿ.ಕೋರವಾರ, ಎಂ.ಎ.ಖತೀಬ, ಗುರುರಾಜ ಮಠ, ಹಣಮಂತ್ರಾಯ ಕುಲಕರ್ಣಿ, ವಿಶ್ವಪ್ರಕಾಶ ಮನಗೊಂಡ, ರಮೇಶ ಪೂಜಾರಿ, ಸಲಿಂ ಮರ್ತೂರ ಸೇರಿದಂತೆ ಇತರರು ಇದ್ದರು.

