Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ

ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬೇಡ ಪ್ರತಿಕ್ರಿಯೆ, ಇರಲಿ ಪ್ರತಿಸ್ಪಂದನೆ
ವಿಶೇಷ ಲೇಖನ

ಬೇಡ ಪ್ರತಿಕ್ರಿಯೆ, ಇರಲಿ ಪ್ರತಿಸ್ಪಂದನೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಒಮ್ಮೆ ಅಕ್ಬರ್ ಬೀರಬಲ್‌ನನ್ನು ಕರೆದು ಅವನ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಕಠಿಣ ಪ್ರಶ್ನೆಗಳನ್ನು ಕೇಳಿದ. ‘ಬೀರಬಲ್, ನನಗೆ ಸತ್ಯವಾಗಿ ಉತ್ತರಿಸು ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯ ಯಾವುದು? ‘ಬೀರಬಲ್ ಒಂದು ಕ್ಷಣ ಯೋಚಿಸಿ ಹೇಳಿದ.’ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ವರ್ತಮಾನದಲ್ಲಿ ಬದುಕುವುದು. ಭೂತಕಾಲ ಕಳೆದುಹೋಗಿದೆ ಮತ್ತು ಭವಿಷ್ಯವು ಅನಿಶ್ಚಿತವಾಗಿದೆ. ಆದರೆ ವರ್ತಮಾನವು ನಮಗೆ ಕಾರ್ಯನಿರ್ವಹಿಸುವ ಶಕ್ತಿ ಇರುವ ಸ್ಥಳವಾಗಿದೆ. ಅಕ್ಬರ ಚಿಂತನಶೀಲವಾಗಿ ತಲೆಯಾಡಿಸಿ ನಂತರ. ಅತ್ಯಂತ ಮುಖ್ಯವಾದ ಸಮಯ ಯಾವುದು?’ ಎಂದು ಕೇಳಿದ. ಅದಕ್ಕೆ ಬೀರಬಲ್ ಹೇಳಿದ ಉತ್ತರ ವರ್ತಮಾನ ಎಂದಾಗಿತ್ತು. ಅದು ಹೇಗೆ ಎಂದು ಮರುಪ್ರಶ್ನಿಸಿದಾಗ ಬೀರಬಲ್‌ನಿಂದ ಬಂದ ಉತ್ತರ ಬಹಳಷ್ಟು ವಾಸ್ತವಿಕವಾಗಿದೆ: ಏಕೆಂದರೆ ಅದು ನಾವು ನಿಯಂತ್ರಿಸಬಹುದಾದ ಏಕೈಕ ಸಮಯವೆಂದ. ಬೀರಬಲ್ಲನ ಉತ್ತರಗಳಿಂದ ಅಕ್ಬರ್ ಪ್ರಭಾವಿತನಾದ. ಕಳೆದು ಹೋದುದರ ಮೇಲೆ ಮುಂದೆ ಆಗಲಿರುವುದರ ಮೇಲೆ ನಮಗೆ ನಿಯಂತ್ರಣವಿಲ್ಲ. ಆದರೆ ಕೈಯಲ್ಲಿರುವ ಕ್ಷಣದ ಮೇಲೆ ನಿಯಂತ್ರಣವಿದೆ. ಆದ್ದರಿಂದ ನಾವು ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಹಿಂದೆ ನಡೆದದ್ದನ್ನು ತೆಗೆದು ಅತಿಯಾಗಿ ಯೋಚಿಸುವುದು ಸರಿಯಲ್ಲ. ಮುಂದೇನಾಗುವುದೋ ಎಂದು ತಲೆ ಕೆಡಿಸಿಕೊಂಡು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಏಕಾಏಕಿ ನಡೆದ ಘಟನೆಗೆ ಪ್ರಸ್ತುತ ಹೇಗೆ ತಾಳ್ಮೆಯಿಂದ ಪ್ರತಿಸ್ಪಂದಿಸಬೇಕೆನ್ನುವುದು ಮುಖ್ಯ. ಅದು ಮುಂಬರುವ ಅನೇಕ ಸಮಸ್ಯೆಗಳನ್ನು ತಪ್ಪಿಸುತ್ತದೆ.


ಪ್ರತಿಕ್ರಿಯೆ-ಪ್ರತಿಸ್ಪಂದನೆ
ನಾಳೆ ಏನು ಯಾರಿಗೂ ಗೊತ್ತಿಲ್ಲ. ಭವಿಷ್ಯದಲ್ಲಿ ಏನು ನಡೆಯಲಿದೆ ಅಂತ ನಿಖರವಾಗಿ ಯಾರಿಗೂ ತಿಳಿದಿಲ್ಲ. ತಜ್ಞರು ಭವಿಷ್ಯ ನುಡಿಯಬಹುದು ನೀವು ಹೇಳಬಹುದು. ಆದರೆ ಅವು ಮುನ್ಸೂಚನೆಯಂತೆ ನಿಖರವಾಗಿ ವಿರಳವಾಗಿ ಸಂಭವಿಸುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಕಾರಣದಿಂದಾಗಿ ಎಣಿಸದೇ ಬರುವ ಸಮಸ್ಯೆಗಳೊಂದಿಗೆ, ಸವಾಲುಗಳೊಂದಿಗೆ, ಕಷ್ಟಗಳೊಂದಿಗೆ, ಹೊಡೆತಗಳೊಂದಿಗೆ ಎದೆಗಾರಿಕೆಯಿಂದ ಎದುರಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಕಷ್ಟಕರ ಸಮಸ್ಯೆಗಳನ್ನು ಎದುರಿಸುವಾಗ ತಕ್ಷಣವೇ ಪ್ರತಿಕ್ರಿಯಿಸದೇ ತಾಳ್ಮೆಯಿಂದ ಪ್ರತಿಸ್ಪಂದಿಸಬೇಕು. ಏನಿದು ಪ್ರತಿಕ್ರಿಯೆ ಮತ್ತು ಪ್ರತಿಸಂದಿಸುವುದು ಒಂದೇ ಅಲ್ಲವೇ? ಎನ್ನುವ ಅನುಮಾನದ ಪ್ರಶ್ನೆ ಮನದಲ್ಲಿ ಬರಬಹುದು. ಇವೆರಡರಲ್ಲಿ ವ್ಯತ್ಯಾಸವಿದೆ. ಪ್ರತಿಕ್ರಿಯೆಯು ಯೋಚಿಸದೇ ನೀಡುವಂತಹದ್ದು. ಆದರೆ ಯೋಚಿಸಿ ನೀಡುವಂತಹದ್ದು ಪ್ರತಿಸಂದಿಸುವಿಕೆ.
ಹಾಗಾದರೆ ಪ್ರತಿಕ್ರಿಯೆಯ ಬದಲಾಗಿ ಪ್ರತಿಸ್ಪಂದಿಸುವುದಕ್ಕೆ ಸಹಾಯವಾಗುವ ಅಂಶಗಳನ್ನು ತಿಳಿಯೋಣ ಬನ್ನಿ.
ಹಿಡಿತದಲ್ಲಿಲ್ಲ
ಸಾಮಾನ್ಯವಾಗಿ ನಾವೆಲ್ಲರೂ ನಮ್ಮಿಷ್ಟದಂತೆ ಘಟನೆಗಳು ನಡೆಯುವಾಗ ಚೆನ್ನಾಗಿಯೇ ಇರುತ್ತೇವೆ. ನಮ್ಮ ನಮ್ಮ ನಿಯಂತ್ರಣದಲ್ಲೂ ಇರುತ್ತೇವೆ. ಅಂತಹ ಸಮಯದಲ್ಲಿ ನಾವು ಘಟನೆಗಳನ್ನು ನಿಯಂತ್ರಿಸುತ್ತಿದ್ದೇವೆ. ಅದಕ್ಕಾಗಿಯೇ ಸಂಗತಿಗಳು ನಮ್ಮ ಹಿಡಿತದಲ್ಲಿವೆ ಎಂದು ತಪ್ಪಾಗಿ ಭಾವಿಸುತ್ತೇವೆ. ಕೆಟ್ಟದಾದಾಗ ದೊಡ್ಡ ದೊಡ್ಡ ಸಮಸ್ಯೆಗಳು ಎದುರಿಗೆ ಬಂದು ನಿಂತಾಗ ವಾಸ್ತವವಾಗಿ ನಾವು ಅಂದುಕೊಂಡದ್ದರ ವಿರುದ್ಧ ಸಂಗತಿಗಳು ಸಂಭವಿಸಿದಾಗ ನಮ್ಮ ನಿಯಂತ್ರಣವನ್ನು ಪೂರಾ ಅಂದರೆ ಪೂರಾ ಕಳೆದುಕೊಂಡು ಬಿಡುತ್ತೇವೆ. ಜೀವನದಲ್ಲಿ ಸೋತುಬಿಟ್ಟೆ ಇನ್ನು ಮುಂದೆ ಏನೂ ಉಳಿದಿಲ್ಲವೆಂದು ಖಿನ್ನತೆಗೆ ಒಳಗಾಗುತ್ತೇವೆ. ಜೀವನದಲ್ಲಿ ಪ್ರತಿಯೊಂದು ನಮ್ಮ ಹಿಡಿತದಲ್ಲಿಲ್ಲ ಎನ್ನುವುದನ್ನು ಮನಗಾಣಬೇಕು.
ಸೃಜನಶೀಲತೆ
ವಿಶ್ವದ ಅತ್ಯಂತ ಯಶಸ್ವಿ ವ್ಯಕ್ತಿಗಳು ಘಟನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿದಿರುತ್ತಾರೆ. ನಡೆದಿರುವ ಘಟನೆಗಳಿಗೆ ತಮ್ಮ ಸೃಜನಶೀಲ ಪ್ರತಿಸ್ಪಂದನೆಯ ಮೂಲಕ ನಿಭಾಯಿಸಲು ಪ್ರಯತ್ನಿಸುತ್ತಾರೆ. ಹಾಗೆ ನೋಡಿದರೆ ಅನಿಶ್ಚಿತವಾಗಿರುವ ಯಾವುದೇ ಸಮಯವು, ನಮ್ಮ ಎಲ್ಲಾ ಗಮನ ಮತ್ತು ಶಕ್ತಿಯನ್ನು ಮುಂದೆ ಬರುವ ಎಲ್ಲಾ ಅನಿರೀಕ್ಷಿತ ಘಟನೆಗಳಿಗೆ ಸೃಜನಾತ್ಮಕವಾಗಿ ಪ್ರತಿಸ್ಪಂದಿಸುವತ್ತ ಕೇಂದ್ರೀಕರಿಸಲು ಅತ್ಯುತ್ತಮ ಸಮಯವಾಗಿದೆ. ‘ಎಲ್ಲರಿಗೂ ನೋವುಗಳಿವೆ. ಆದರೆ ಅವುಗಳನ್ನು ತೋರಿಸುವ ಬಗೆ ಬೇರೆ ಬೇರೆಯಾಗಿದೆ. ಕೆಲವರು ಕಣ್ಣೀರು ಸುರಿಸುತ್ತಾರೆ. ಇನ್ನು ಕೆಲವರು ಮುಂದೆ ಸರಿ ಹೋಗುತ್ತದೆಂದು ನಗು ಚೆಲ್ಲುತ್ತಾರೆ.
ಒಪ್ಪಿಕೊಳ್ಳಿ


ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ನಿಮ್ಮ ಭಾವನೆಗಳು ನಿಮ್ಮನ್ನು ನೀವೇ ಆಗಿಸಿರಿಕೊಳ್ಳಲು ಕಷ್ಟಕರವಾಗಿಸಬಹುದು. ಈ ಭಾವನೆಗಳನ್ನು ಮಾಯವಾಗಿಸುವುದು ಅಸಾಧ್ಯವಾದರೂ ನೀವು ಇರುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದರಿಂದ ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ. ನೀವು ಅದನ್ನು ಬೇಗ ಒಪ್ಪಿಕೊಂಡಷ್ಟು ಬೇಗ ನೀವು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಒಪ್ಪಿಕೊಳ್ಳಲು ಮುಂದಾದರೆ ಭಾವನೆಗಳು ಬದಲಾಗುತ್ತವೆ. ಈ ವಿಶ್ವದಲ್ಲಿ ನಾವು ಬದಲಾಯಿಸಲು ಸಾಧ್ಯವಾಗದ ಕೆಲವು ವಿಷಯಗಳಿವೆ ಎಂದು ಒಪ್ಪಿಕೊಂಡು ನಡೆಯುವುದು ಜಾಣತನ ಲಕ್ಷಣ.
ಬೀಗದ ಕೈ
ದೊಡ್ಡ ಮನೆ ಬಾಗಿಲು ತೆಗೆಯಲು ಸಣ್ಣದೊಂದು ಬೀಗದ ಕೈ ಸಾಕು. ಹಾಗೆಯೇ ನಾವು ಗಾಬರಿಯಾಗುವಂತೆ ಖಿನ್ನತೆಗೆ ಒಳಗಾಗುವಂತೆ ಮಾಡುವ ಅನಿರೀಕ್ಷಿತ ಘಟನೆಯು ಚಿಕ್ಕದಾದ ಪ್ರತಿಸ್ಪಂದನೆಯಲ್ಲಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಬೀಗದ ಜತೆಗೆ ಅದನ್ನು ತೆರೆಯಲು ಒಂದು ಬೀಗದ ಕೈ ಇದ್ದಂತೆ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಅದನ್ನು ಹುಡುಕುವ ವ್ಯವಧಾನ ಬೇಕಷ್ಟೆ. ಪರಿಹಾರವಿಲ್ಲವೆಂದರೆ ಅದು ಸಮಸ್ಯೆ ಅಲ್ಲ. ಸಮಸ್ಯೆಯತ್ತ ನೋಡಿದರೆ ಸಮಸ್ಯೆ ಕಾಣುತ್ತದೆ. ಪರಿಹಾರದತ್ತ ನೋಡಿದರೆ ಪರಿಹಾರ ಕಾಣುತ್ತದೆ ಎಂಬ ಮಾತಿನಂತೆ ನೋಡುವ ದೃಷ್ಟಿಯನ್ನು ಬದಲಿಸಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಸೃಜನಶೀಲರಾಗಿ
ಅನಿಶ್ಚಿತವಾಗಿ ನಡೆವ ಘಟನೆಗಳು ಅಥವಾ ಕೆಟ್ಟ ಸಮಯಗಳು ಯಾವಾಗಲೂ ಹಿಂದಿನ ರೀತಿಯನ್ನೇ ಅಂಟಿಕೊಳ್ಳುವುದಿಲ್ಲ. ಮತ್ತು ಅವು ಹಿಂದಿನ ರೀತಿಯಲ್ಲಿಯೇ ಪರಿಹಾರವನ್ನು ಬಯಸುತ್ತವೆ ಎಂಬುದು ತಪ್ಪು ತಿಳುವಳಿಕೆ. ಅವು ನಾವೀನ್ಯತೆಯನ್ನು ಬೇಡುತ್ತವೆ ಎಂಬುದನ್ನು ಮರೆಯಬಾರದು. ಹೊಸ ಹೊಸ ಪ್ರಯೋಗಗಳತ್ತ ನೋಡಬೇಕಾದ ಅಗತ್ಯವಿದೆ. ಸಮಸ್ಯೆಯೆಂಬ ಚಕ್ರದಲ್ಲಿ ಸಿಲುಕಿಕೊಳ್ಳುವ ಇಲ್ಲವೇ ಇನ್ನಷ್ಟು ಸಮಸ್ಯೆಯ ಚಕ್ರಗಳನ್ನು ಸೃಷ್ಟಿಸುವ ಹುಚ್ಚುತನಕ್ಕೆ ಕೈ ಹಾಕಬೇಡಿ. ಅದರ ಬದಲಾಗಿ ನಡೆದ ಘಟನೆಗಳ ಪ್ರತಿ ನಿಮ್ಮ ಸಂಪೂರ್ಣ ವ್ಯವಹಾರ ಹೇಗಿದೆ ಎನ್ನುವುದನ್ನು ಕೂಲಂಕುಷವಾಗಿ ನೋಡಿ. ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲು ನೀವು ವಿಭಿನ್ನವಾಗಿ ಕೆಲಸಗಳನ್ನು ಮಾಡುವ ವಿಧಾನಗಳನ್ನು ನಿರ್ಧರಿಸಿ.
ಮಿತಿ ತಿಳಿದುಕೊಳ್ಳಿ
ನಿಮ್ಮ ಎಲ್ಲ ಹಠಾತ್ ಸಮಸ್ಯೆಗಳನ್ನು ಪರಿಹರಿಸಲು ಆಥವಾ ಪ್ರತಿ ಫಲಿತಾಂಶವು ನಿಮ್ಮ ಪರವಾಗಿ ತಿರುಗುವಂತೆ ನೀವು ನಿರೀಕ್ಷಿಸುವುದು ಉಚಿತವಲ್ಲ. ಏಕೆಂದರೆ ಅಂತಹ ನೀವು ನಿರೀಕ್ಷೆ ಸಾಧ್ಯವಿಲ್ಲ. ನಿಮ್ಮ ನಿರೀಕ್ಷೆಯಲ್ಲಿ ವಾಸ್ತವಿಕವಾಗಿರಿ. ಮತ್ತು ಅವಸರದ ಪ್ರತಿಕ್ರಿಯೆಯಲ್ಲಿ ನಿಮ್ಮನ್ನು ನೀವು ಸುಟ್ಟುಕೊಳ್ಳಬೇಡಿ. ನಿಮ್ಮಿಂದ ಅತ್ಯುತ್ತಮ ಪ್ರಯತ್ನವನ್ನು ಮಾಡಲು ನಿಮ್ಮಿಂದ ಸಾಧ್ಯವಾದಷ್ಟು ಮಾಡಿ. ಮತ್ತು ನೀವು ನಿಮ್ಮಿಂದ ನೀರೀಕ್ಷಿಸಬಹುದಾದ್ದು ಅಷ್ಟೆ. ನೀವು ಯೋಚಿಸಿದಂತೆ ವಿಷಯಗಳು ನಿಖರವಾಗಿ ಕೊನೆಗೊಳ್ಳದಿದ್ದರೆ, ನೀವು ಮಾಡಿದ ಎಲ್ಲಾ ಪ್ರಗತಿಯನ್ನು ನಿಲ್ಲಿಸುವ ಅಪಾಯವಿದೆ.
ಕೊನೆ ಹನಿ
ಘಟನೆಗಳಿಗೆ ಪ್ರತಿಕ್ರಿಯಿಸುವತ್ತ ಅಲ್ಲ ಪ್ರತಿಸ್ಪಂದಿಸುವತ್ತ ಗಮನಹರಿಸಿ, ಸಾವಧಾನತೆಯ ಮೂಲಕ ಶಾಂತತೆಯನ್ನು ಬೆಳೆಸಿಕೊಳ್ಳಿ. ಆಳವಾದ ಉಸಿರು ತೆಗೆದುಕೊಳ್ಳಿ. ಮಾತನಾಡುವ ಮೊದಲು ವಿರಾಮ ತೆಗೆದುಕೊಳ್ಳಿ. ನಿಮ್ಮ ಭಾವನೆಗಳನ್ನು ಹೆಸರಿಸಿ, ಅರ್ಥಮಾಡಿಕೊಳ್ಳಲು ಸಕ್ರಿಯಯವಾಗಿ ಆಲಿಸಿ. ಹಠಾತ್ತನೆ ಪ್ರತಿಕ್ರಿಯಿಸುವ ಬದಲಾಗಿ ವಾಸ್ತವಿಕವಾಗಿ ಏನು ಮಾಡಬಹುದು ಎಂದು ನಿಮ್ಮನ್ನು ನೀವು ಕೇಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಿಯಂತ್ರಿಸಬಹುದಾದ ಕ್ರಿಯೆಗಳ ಮೇಲೆ ಗಮನ ಕೇಂದ್ರೀಕರಿಸಿ. ಒತ್ತಡವನ್ನು ನಿರ್ವಹಿಸಲು ಮತ್ತು ರಚನಾತ್ಮಕವಾಗಿ ಪ್ರತಿಕ್ರಿಯಿಸಲು ನಿಮ್ಮೊಂದಿಗೆ ಸೌಮ್ಯವಾಗಿರಿ. ಹೆಚ್ಚು ಚಿಂತನಶೀಲ ಉತ್ತರವನ್ನು ರೂಪಿಸಲು ಇತರರ ದೃಷ್ಟಕೋನಗಳಿಗೆ ಗಮನ ಕೊಡಿ. ನಿಮ್ಮ ಪ್ರತಿಕ್ರಿಯೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಮಾನ್ಯವಾಗಿ ಏನು ಹೊಂದಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅನಿರೀಕ್ಷಿತ ಘಟನೆಗಳಿಂದ ಬುದ್ಧಿವಂತಿಕೆ ಹೆಚ್ಚುವುದು ಮತ್ತು ಮಾಗಿದ ಜೀವನ ನಗುಮೊಗದಿ ಸ್ವಾಗತಿಸುವುದು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ

ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು

ಅರ್ಜುನ ನೆನಪಿಸಲು ಇದೇ 30 ರಂದು ಬರ್ತಿದೆ ‘ಮಾವುತ’

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ
    In (ರಾಜ್ಯ ) ಜಿಲ್ಲೆ
  • ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು
    In (ರಾಜ್ಯ ) ಜಿಲ್ಲೆ
  • ಅರ್ಜುನ ನೆನಪಿಸಲು ಇದೇ 30 ರಂದು ಬರ್ತಿದೆ ‘ಮಾವುತ’
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಜಲಾಶಯ ಭದ್ರತೆ ಪರೀಕ್ಷಿಸಿದ ಕಮಾಂಡೆಂಟ್ 
    In (ರಾಜ್ಯ ) ಜಿಲ್ಲೆ
  • ಟೆಂಡರ್ ರದ್ದಿಗೆ ಆಗ್ರಹಿಸಿ ದಿನಗೂಲಿ ನೌಕರರ ಸಂಘದಿಂದ ಧರಣಿ
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಮತ್ತು ನೇತ್ರ ಉಚಿತ ತಪಾಸಣೆ ಶಿಬಿರ
    In (ರಾಜ್ಯ ) ಜಿಲ್ಲೆ
  • ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.