Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಏಪ್ರಿಲ್ ೧೦ ರಿಂದ ೧೪ ವರೆಗೆ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುಸ್ತಕ ಮೇಳದಲ್ಲಿ ಜಿಲ್ಲೆಯ ಜನರು, ಸಾಹಿತ್ಯಾಸಕ್ತರು, ಓದುಗರು ಪಾಲ್ಗೊಂಡು ಪುಸ್ತಕ ಮೇಳವನ್ನು ಯಶಸ್ವಿಗೊಳಿಸುವಂತೆ ಕೋರಿದರು.ಮೇ ಸಾಹಿತ್ಯ ಬಳಗದ ಚೆನ್ನು ಕಟ್ಟಿಮನಿ, ಸೋಮು ರಣದೇವಿ, ಶಿವರಾಜ ಕಟ್ಟಿಮನಿ, ಅಪ್ಪು ಚಿನಗುಂಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಸಾಮೂಹಿಕ ವಿವಾಹಗಳು ನಿರ್ಗತಿಕರ ಮದುವೆಗಳಲ್ಲ. ಅವು ಭಾಗ್ಯವಂತರ ಮದುವೆಗಳು ಇಂತಹ ವಿವಾಹ ಮಾಡಿಕೊಂಡವರೇ ಶ್ರೇಷ್ಠರು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಹೇಳಿದರು.ಅವರು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು, ಹನುಮ ಜಯಂತಿ ಹಾಗೂ ಗೈಬುಸಾಬ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಇಲ್ಲಿ ಮದುವೆಯಾಗುವ ವಧು ವರರಿಗೆ ಹರ ಗುರು ಚರಮೂರ್ತಿಗಳು, ಸಹಸ್ರಾರು ಜನ ಅಕ್ಷತೆ ಹಾಕಿ ಹರಸುತ್ತಾರೆ. ಇಂತಹ ಭಾಗ್ಯ ಬೇರೆಡೆ ಸಿಗುವುದಿಲ್ಲ. ಹೀಗಾಗಿ ಇವು ಭಾಗ್ಯವಂತರ ಮದುವೆಗಳು ಎಂದು ಹೇಳಿದರು.ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವದಂಪತಿಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೇರುವ ಶಪಥ ಮಾಡಬೇಕು.ನಿಮ್ಮ ಉದರದಿಂದ ಜನಿಸಿದ ಒಂದು ಮಗು ದೇಶ ಸೇವೆಗಾಗಿ, ಒಂದು ಮಗು ಧರ್ಮ ರಕ್ಷಣೆಗಾಗಿ, ಇನ್ನೊಂದು ಮಗು ಸಮಾಜದ ರಕ್ಷಣೆಗಾಗಿ ಮತ್ತೊಂದು ಮಗು ನಿಮ್ಮ ರಕ್ಷಣೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಲ್ಕು ಕಾರ್ಮಿಕ ಕಾಯಿದೆಗಳ ವಿರುದ್ದ ೨೦೨೫ರ ಏಪ್ರಿಲ್ ಒಂದರಂದು ಕರಾಳ ದಿನ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಕ್ಷೇತ್ರೀಯ ಮಹಾಸಂಘಗಳು ಮತ್ತು ಸಂಘಗಳ ಜಂಟಿ ವೇದಿಕೆಯವರು ಕರೆ ನೀಡಿದರು.ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ವತಿಯಿಂದ ಕರಾಳ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಿಐಟಿಯು ಸಂಚಾಲಕರಾದ ಲಕ್ಷ್ಮಣ ಹಂದ್ರಾಳ ಮಾತನಾಡಿ, ಏಪ್ರಿಲ್ ಒಂದರಂದೇ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ವ್ಯವಹಾರ ಮಾಡಲು ಸುಲಭತೆ ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಅವನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಿವೆ. ೨೦೨೬ರ ಫೆಬ್ರವರಿ ೧೨ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ ಕೂಡಲೇ ಕಾರ್ಮಿಕ ಕಾಯ್ದೆಯನ್ನು ವಾಪಸ್ಸು…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ಧೆ ಬೀಳ್ಕೊಡುಗೆ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಹನೆ, ಕಠಿಣ ಪರಿಶ್ರಮ, ತ್ಯಾಗ ಹಾಗೂ ಸಮರ್ಪಣಾ ಮನೋಭಾವಗಳನ್ನು ಅಳವಡಿಸಿಕೊಂಡವರು ಉತ್ತಮ ಆಡಳಿತಗಾರರಾಗಲು ಸಾಧ್ಯ ಎಂದು ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ ಹೇಳಿದರು.ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಾರ್ಚ.೩೧ ರಂದು ಹಮ್ಮಿಕೊಳ್ಳಲಾಗಿದ್ದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮ ಆಡಳಿತಗಾರನ ಮೊದಲ ಗುಣ ಸಹನೆ. ಪ್ರೊಫೆಸರ್ ಆಗಬೇಕು, ಪ್ರಿನ್ಸಿಪಲ್ ಆಗಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಆದರೆ ಪ್ರಾಚಾರ್ಯ ಹುದ್ದೆ ನಿರ್ವಹಣೆ ಅಷ್ಟೊಂದು ಸುಲಭವಾದದ್ದಲ್ಲ. ನಾವು ಆಡಳಿತ ಮಾಡಿ ನಮ್ಮ ಹೆಜ್ಜೆ ಗುರುತುಗಳನ್ನು ಆ ಸಂಸ್ಥೆಯಲ್ಲಿ ಉಳಿಸಿಕೊಂಡು ಹೋಗಬೇಕಾದರೆ ಸಂಯಮ ಹಾಗೂ ವೃತ್ತಿ ಮೇಲಿನ ನಮ್ಮ ಶ್ರದ್ಧೆ ಬಹಳ ಮುಖ್ಯವಾಗುತ್ತವೆ. ಆ ನಿಟ್ಟಿನಲ್ಲಿ ಡಾ.ಆರ್.ಎಂ.ಮಿರ್ಧೆ ಅವರು ಉತ್ತಮವಾದ ಆಡಳಿತ ಮಾಡಿದ್ದಾರೆ. ಅತ್ಯಂತ ಜವಾಬ್ದಾರಿಯುತವಾಗಿ ಹುದ್ದೆಯ…

Read More

ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯ ಎಂದು ಗಂಭೀರ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರು: ನಂಬಿಕೆ ಮತ್ತು ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಮುಖ್ಯಮಂತ್ರಿಯಾದ ನಂತರ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಗಲು ದರೋಡೆ – ವರ್ಗಾವಣೆ, ಕಮಿಷನ್ ಮತ್ತು ಹಗರಣಗಳಲ್ಲಿ ನಿರತವಾಗಿದೆ ಮಾಜಿ ಸಿಎಂ ಬಿ,ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಇತಿಹಾಸದಲ್ಲಿ ಅತಿ ಭ್ರಷ್ಟ ಸರ್ಕಾರ ಇದಾಗಿದೆ. ಕಾಂಗ್ರೆಸ್ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳನ್ನು ನಡೆಸಿದೆ, ರಾಜ್ಯದಲ್ಲಿ ತೆರಿಗೆ ಭಯೋತ್ಪಾದನೆ ಶುರುವಾಗಿದೆ ಎಂದು ಆರೋಪಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ವರ್ಷದಲ್ಲಿ 5 ಲಕ್ಷ ಕೋಟಿ ಹೊಸ ಸಾಲ ಮಾಡಿ ದಾಖಲೆ ಬರೆದಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು. ಆಸ್ಪತ್ರೆ, ಸಚಿವರ ಕಚೇರಿ, ಮುಖ್ಯಮಂತ್ರಿ ಕಚೇರಿಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ವರ್ಗಾವಣೆ ಉದ್ಯಮವಾಗಿ ಮಾರ್ಪಾಡಾಗಿದೆ. ಯಾವುದೇ ಅಧಿಕಾರಿ ಎಷ್ಟೇ ದುಡ್ಡು ಕೊಟ್ಟು ಬಂದರೂ, ಎಷ್ಟು ದಿನ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಮೀಪದ ಕಾಖಂಡಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ರಾಜಶೇಖರಯ್ಯ ಮಳಯ್ಯ ಮಠಪತಿ ಅವರಿಗೆ ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಂದೇನವಾಜ್ ಗುರಾತೆ, ರಾಮನಗೌಡ ಪಾಟೀಲ್, ಉಮೇಶ್ ಸೊನ್ನದ, ಶಾಲೆಯ ಮುಖ್ಯ ಗುರುಮಾತೆ ಲಲಿತಾ ಕೋರಿ ಹಾಗೂ ಸಿಆರ್‌ಪಿ ಬಸವರಾಜ್ ಜಿಲ್ಲಿ, ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

Read More

ಚಡಚಣದಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಬೇಸಿಗೆಯ ತೀವ್ರತೆಗೆ ಮುನ್ನ ತಾಲೂಕಿನಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಸೂಚಿಸಿದರು.ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೊಳವೆಬಾವಿಗಳು ಸೇರಿದಂತೆ ನೀರಿನ ಮೂಲಗಳು ಬತ್ತಿಹೋಗುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಪ್ರತಿಯೊಂದು ಗ್ರಾಮದಲ್ಲೂ ಜನರು ಹಾಗೂ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪ್ರತಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಗಮನಹರಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಅವಧಿ ಮುಗಿದಿರುವ ಹಿನ್ನೆಲೆ ಆಡಳಿತಾಧಿಕಾರಿಗಳು ಮತ್ತು ಪಿಡಿಓಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಾರಕ್ಕೊಮ್ಮೆ ಸಭೆ…

Read More

ಕೊಲ್ಹಾರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಭಾರತೀಯ ಜನತಾ ಪಕ್ಷ ಸಾಮಾಜಿಕ ಕ್ಷೇತ್ರದಲ್ಲಿ ರಾಜಕೀಯ ಗುರುತಿಸಿಕೊಳ್ಳಬೇಕು ಎನ್ನುವ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಹೊಂದಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮಾಜ ಸೇವೆ ಮಾಡುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ನಾಗರಿಕ ಪ್ರಜ್ಞೆಯನ್ನು ಮೂಡಿಸಿ ಉತ್ತಮ ಸಂಸ್ಕಾರದೊಂದಿಗೆ ಸಂಘಟಣೆಯಲ್ಲಿ ತೊಡಗಿಕೊಳ್ಳಲು ಮುನ್ನುಗ್ಗುವ ಕಾರ್ಯಕರ್ತರಿಗಾಗಿ ಪ್ರ.ಶಿಕ್ಷಣದಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲಾ ಆವರಣದಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಮಂಡಲ ಬಿಜೆಪಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿರುವ ಪಂಡೀತ ದೀನದಯಾಳ ಉಪಾದ್ಯಾಯ ಪ್ರ.ಶಿಕ್ಷಣ ಮಹಾ ಅಭಿಯಾನ ಸಮಾರಂಭ ಮತ್ತು ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಾವೀರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಇಂದಿನ ಯುವ ಸಮೂಹದ ನಾಯಕರು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಅಧ್ಯಯನ ಮಾಡಿ…

Read More

ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಸಿಂದಗಿ -೫೮೬೧೨೮ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ 12ನೇ ಶತಮಾನವು ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಅವಿಸ್ಮರಣೀಯವಾದ ಸುವರ್ಣಯುಗವಾಗಿದೆ. ಈ ಕಾಲಘಟ್ಟದಲ್ಲಿ ಶರಣರು ತಮ್ಮ ಅನುಭವಗಳಿಂದ ಹೊರಹೊಮ್ಮಿದ ವಚನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಶ್ರೀಮಂತಿಕೆಯನ್ನು ತಂದಿದ್ದಾರೆ. ಈ ಶರಣ ಸಂಪ್ರದಾಯವು ಕೇವಲ ಧಾರ್ಮಿಕ ಚಳವಳಿಯಷ್ಟೇ ಅಲ್ಲ, ಅದು ಒಂದು ಸಾಮಾಜಿಕ ಕ್ರಾಂತಿ, ಒಂದು ಮೌಲ್ಯಾಧಾರಿತ ಜೀವನ ಪದ್ಧತಿ, ಮತ್ತು ಮಾನವೀಯತೆಯ ಮಹೋನ್ನತ ಸಂದೇಶವಾಗಿತ್ತು. “ಶರಣ” ಎಂದರೆ ತನ್ನನ್ನು ತಾನು ಅರಿತವನು, ತನ್ನ ಅಂತರಂಗವನ್ನು ಶುದ್ಧಗೊಳಿಸಿಕೊಂಡವನು, ಶಿವನನ್ನು ತನ್ನೊಳಗೆ ಕಂಡವನು. ಇವರು ಕೇವಲ ಭಕ್ತರಲ್ಲ, ಅವರು ಚಿಂತಕರು, ಕಾಯಕಯೋಗಿಗಳು, ಸಮಾಜ ಸುಧಾರಕರು ಮತ್ತು ಸತ್ಯದ ಸಾಧಕರು. ಶರಣರು ತಮ್ಮ ಜೀವನದಲ್ಲಿ “ಕಾಯಕವೇ ಕೈಲಾಸ” ಎಂಬ ತತ್ತ್ವವನ್ನು ಅಳವಡಿಸಿಕೊಂಡು, ಯಾವುದೇ ಕೆಲಸವನ್ನು ಹೀನ-ಮೇಲು ಎನ್ನದೆ, ಪ್ರಾಮಾಣಿಕವಾಗಿ ಮಾಡುವುದೇ ದೇವಾರಾಧನೆ ಎಂದು ಸಾರಿದರು. ಇವರು ಗುರುವಿಗೆ ತನವನ್ನು, ಲಿಂಗಕ್ಕೆ ಮನವನ್ನು, ಜಂಗಮಕ್ಕೆ ಧನವನ್ನು ಅರ್ಪಿಸಿದವರು. ಇವರ ನಡೆ-ನುಡಿಗಳು ಒಂದೇ ಆಗಿದ್ದು, ಜೀವನವೇ ಒಂದು ಸಾಧನೆಯಾಗಿತ್ತು.…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅಹಿಂಸಾ ಪರಮೋ ಧರ್ಮ ಎಂದು ಸಾರಿದ ಭಗವಾನ ಮಹಾವೀರರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ನಡೆದಂತಾಗುತ್ತದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿ ಹೇಳಿದರು.ಪಟ್ಟಣದ ಅರಿಹಂತ ಕಾಲೇಜಿನ ಆವರಣದಲ್ಲಿರುವ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದಲ್ಲಿ ೨೬೨೫ ನೇ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮದಲಲಿ ಅವರು ಮಾತನಾಡಿದರು.ಮಹಾವೀರ ಭಗವಾನರ ತತ್ವಗಳು ಇಂದಿನ ಮನಕುಲಕ್ಕೆ ಮಹಾವೀರ ಸ್ವಾಮಿಯ ದಿವ್ಯ ಸಂದೇಶಗಳಾದ ಅಹಿಂಸೆ, ಸತ್ಯ, ಆಸ್ತೆಯ, ಬ್ರಹ್ಮಚರ್ಯ ಅಪರಿಗ್ರಹ, ಅನೇಕಾಂತವಾದ, ಶಾಧ್ವಾದ ಮೂಲ ತತ್ವಗಳು ಅಹಿಂಸೆಯಿಂದ ಜೀವಿಗಳ ರಕ್ಷಣೆಯಾಗುತ್ತದೆ. ಮಹಾವೀರ ತತ್ವಗಳು ಲೋಕೋದ್ಧಾರಕ್ಕೆ ಮಾರ್ಗಗಳಾಗಿವೆ ಎಂದರು.ಪರಸ್ಪರ ಸಹಕಾರದಿಂದ ಪ್ರಗತಿ ಸಾಧ್ಯ. ಇನ್ನೊಬ್ಬರಿಗೆ ಕೇಡನ್ನು ಬಯಸುವದರಿಂದ ಕರ್ಮವು ಬಿಡದೆ ಬೆಂಬತ್ತಿ ಬರುವುದು, ತನಗಿಂತ ಕನಿಷ್ಟರಾದವರ ಬಗ್ಗೆ ಪಶು-ಪಕ್ಷಿ, ಪ್ರಾಣಿ ಸಸ್ಯ ಸಂಕುಲನದ ಬಗ್ಗೆ ಜೀವ ದಯೇ ಇರಲಿ, ಅನ್ನದಾನ, ಅಭಯದಾನ ಶಾಸ್ತçದಾನ, ವಿದ್ಯಾದಾನ ಶ್ರೇಷ್ಠದಾನಗಳು ಎಂದು ಭಗವಾನ್ ಮಹಾವೀರರು ಸಾರಿದ ಮಹಾನ್…

Read More