ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: 2025 ರಿಂದ 2028 ರ ಅವಧಿಗೆ ನಡೆದ ಕೊಲ್ಹಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಪತ್ರಕರ್ತ ಅರುಣಕುಮಾರ ಬ ಔರಸಂಗ ಅವರು ನೂತನ ತಾಲ್ಲೂಕಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಗಳಾದ ರಾಜ್ಯ ಕಾರ್ಯಕಾರಿ ಸದಸ್ಯ ಪ್ರಕಾಶ ಬೆಣ್ಣೂರ ಹಾಗೂ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಪಟ್ಟಣದ ಯುಕೆಪಿ ಬಳಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾ ನಿ ಪ ಸಂಘ ಹಾಗೂ ಕೊಲ್ಹಾರ ತಾಲೂಕು ಘಟಕದ ಸಹಯೋಗದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ ಪ್ರಕ್ರಿಯೆ ಜರುಗಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ಐದು ಪದಾಧಿಕಾರಿಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ತಾಲೂಕು ಅಧ್ಯಕ್ಷರಾಗಿ ಅರುಣಕುಮಾರ ಬ ಔರಸಂಗ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಬ ಗಣಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ತುಪ್ಪದ, ಕಾರ್ಯದರ್ಶಿಯಾಗಿ ಸಿದ್ದಪ್ಪ ಗಣಿ, ಖಜಾಂಚಿಯಾಗಿ ಹಣಮಂತ ಛಬ್ಬಿ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಪ್ರಕಾಶ ಬೆನ್ನೂರ, ಉಸ್ತುವಾರಿ ಬಸವರಾಜ ಉಳ್ಳಾಗಡ್ಡಿ ಆದೇಶ ಪತ್ರ ನೀಡಿ ಅಭಿನಂದಿಸಿದರು.
ಈ ವೇಳೆ ತಾಲೂಕು ಘಟಕದ ಕಾನಿಪ ಸದಸ್ಯರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಮಶಾಕ ಬಳಗಾರ, ಮಲ್ಲಿಕಾರ್ಜುನ ಕುಬಕಡ್ಡಿ, ಮಂಜುನಾಥ ಮಟ್ಯಾಳ, ಶರಣು ಮಾದರ, ಪೃಥ್ವಿರಾಜ ಬಾರಸ್ಕಳ, ಪರಶುರಾಮ ಕಾಖಂಡಕಿ, ಶ್ರೀಧರ ಏಳಗಂಟಿ, ಕಾಂತು ಹಡಪದ, ನಾಗರಾಜ ಕುಂಬಾರ, ಶಂಕರ ತೆಗ್ಗಿ ಉಪಸ್ಥಿತರಿದ್ದು ಶುಭ ಕೋರಿದರು.


