ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಡಿ ೧೪ ರಿಂದ ೩೧ ರವರೆಗೆ ಪ್ರತೀದಿನ ಬೆಳಿಗ್ಗೆ ೬.೩೦ ರಿಂದ ೭.೩೦ ರ ವರೆಗೆ ಕಾತ್ರಾಳ ಬಾಲಗಾಂವ ಮಠದ ಪೀಠಾಧಿಪತಿ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾಗಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮೃತಾನಂದ ಶ್ರೀಗಳ ವಾಣಿಯನ್ನು ಆಲಿಸಿ ಪುನೀತರಾಗಬೇಕೆಂದು ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಗುರುವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದೆ.
ಈಗಾಗಲೇ ಕಾಲೇಜಿನ ಆವರಣ ಸ್ವಚ್ಛಗೊಳಿಸಿದ್ದು ಪ್ರತಿ ದಿನವೂ ಪ್ರವಚನ ಮುಗಿದ ನಂತರ ತಕ್ಷಣವೇ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಪ್ರಸಾದ ಸೇವನೆ ಮಾಡಿ ಆಧ್ಯಾತ್ಮಿಕ ಪ್ರವಚನದ ಸ್ಥಳ ಸ್ವಚ್ಛವಾಗಿಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು
ಕೊನೆಯ ದಿನ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಶ್ರೀಗಳ ೩ ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸಮಿತಿ ತಿಳಿಸಿದೆ. ಆಧ್ಯಾತ್ಮ ಪ್ರವಚನ ನೀಡಲಿರುವ ಅಮೃತಾನಂದ ಶ್ರೀಗಳು ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿ ಬಂಧು ಬಳಗ ಎಲ್ಲವನ್ನೂ ತ್ಯಜಿಸಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆಶ್ರಮದಲ್ಲಿದ್ದುಕೊಂಡು ಅವರ ಸೇವೆ ಮಾಡುತ್ತ ಅವರ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.
ಉಪನಿಷತ್ತುಗಳು, ಭಗವದ್ಗೀತೆ, ಭಾರತೀಯ ದರ್ಶನಗಳು, ವಸವನಶಾಸ್ತç ಮೊದಲಾದ ಗ್ರಂಥಗಳನ್ನು ಅಭ್ಯಾಸ ಮಾಡಿದ್ದು ಉತ್ತಮ ವಾಗ್ಮಿಗಳಾಗಿದ್ದಾರೆ. ಕಾರಣ ಇಂಡಿ ಹಾಗೂ ಸುತ್ತಮುತ್ತಲಿನ ಭಕ್ತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಮಿತಿ ವಿನಂತಿಸಿಕೊಂಡಿದೆ.
