Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು

ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು

ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸ್ಪರ್ಧಾತ್ಮಕ & ಸೌಹಾರ್ದಯುತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು
(ರಾಜ್ಯ ) ಜಿಲ್ಲೆ

ಸ್ಪರ್ಧಾತ್ಮಕ & ಸೌಹಾರ್ದಯುತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟಿಸಿದ ಎಂಎಲ್ಸಿ ಸುನೀಲಗೌಡ ಪಾಟೀಲ ಸಲಹೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕ್ರಿಕೆಟ್ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸ್ಪೂರ್ತಿ ನೀಡುತ್ತದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಮಂಗಳವಾರ ಮುಸ್ಸಂಜೆ ಬಬಲೇಶ್ವರ ಪಟ್ಟಣದದಲ್ಲಿ ದಿ. ಶ್ರೀ ಬಿ. ಎಂ. ಪಾಟೀಲ ಸ್ಮರಣಾರ್ಥ ಆಯೋಜಿಸಲಾಗಿರುವ ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಟೂರ್ನಾಮೆಂಟ್ ನ್ನು ಬ್ಯಾಟ್ ಮಾಡುವ ಮೂಲಕ ಉದ್ಗಾಟಿಸಿದ ಅವರು ಬಳಿಕ ಸಸಿಗೆ ನೀರುಣಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ತಂದೆ ದಿ. ಬಿ. ಎಂ. ಪಾಟೀಲ ಅವರ ಹೆಸರಿನಲ್ಲಿ ಈ ಟೂರ್ನಾಮೆಂಟ್ ಆಯೋಜನೆ ಮಾಡಿರುವುದು ಸಂತಸದ ವಿಷಯವಾಗಿದೆ. ಬಿ. ಎಂ. ಪಾಟೀಲರು ಶಿಕ್ಷಣ ಪ್ರೇಮಿಯಾಗಿದ್ದರು. ಯುವಕರು ಹೆಚ್ಚಿನ ಶಿಕ್ಷಣಕ್ಕಾಗಿ ಬೇರೆ ಊರೂಗಳಿಗೆ ಅಲೆದಾಡುವುದು ಮತ್ತು ಬಡವರು ಶಿಕ್ಷಣವನ್ನು ಮೊಟಕುಗೊಳಿಸುವುದನ್ನು ತಡೆಯಲು ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಶಾಲೆ, ಕಾಲೇಜುಗಳನ್ನು ಮತ್ತು ಕೋರ್ಸುಗಳನ್ನು ಪ್ರಾರಂಭಿಸುವ ಮೂಲಕ ಪ್ರೋತ್ಸಾಹ ನೀಡಿದರು. ಬೇರೆಯವರ ಸಂಸ್ಥೆಗಳ ಅಭಿವೃದ್ಧಿಗೂ ನೆರವು ನೀಡಿದರು. ಕೊನೆಯ ಉಸಿರಿರುವವರೆಗೂ ಶಿಕ್ಷಣ ಮತ್ತು ಜನಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಈಗ ನನ್ನ ಸಹೋದರ ಮತ್ತು ಸಚಿವ ಎಂ. ಬಿ. ಪಾಟೀಲರು ಅವರು ಜಲಕ್ರಾಂತಿಯ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಈಗ ಕೆಜಿ ಯಿಂದ ಪಿಜಿ ವರೆಗೆಯ ಇಲ್ಲಿಯೆ ಶಿಕ್ಷಣ ಸಿಗುತ್ತಿದೆ ಎಂದು ಶಾಸಕರು ತಿಳಿಸಿದರು.
ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮಲ್ಲಿರುವ ಕೌಶಲ್ಯ ಹೊರಹಾಕಲು ಉತ್ತಮ ಅವಕಾಶ ಒದಗಿಸುತ್ತವೆ. ಒಗ್ಗಟ್ಟಿನಿಂದ ಹೋರಾಡಿ ಗೆಲುವು ಸಾಧಿಸಲು ಪ್ರೇರಣೆ ನೀಡುತ್ತದೆ. ಎಲ್ಲರೂ ಸ್ಪರ್ಧಾತ್ಮಕವಾಗಿ ಮತ್ತು ಸೌಹಾರ್ದಯುತವಾಗಿ ಕ್ರೀಡೆಗಳಲ್ಲಿ ಪಾಲ್ಗೋಳ್ಳಬೇಕು. ಬಿ. ಎಲ್. ಡಿ. ಇ ಸಂಸ್ಥೆ ವತಿಯಿಂದ ಶ್ರೀ ಬಿ. ಎಂ. ಪಾಟೀಲ ಸ್ಪೂರ್ಟ್ಸ್ ಅಕಾಡೆಮಿ ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾರ್ಥಿ ದಿಸೆಯಿಂದಲೇ ಕ್ರಿಕೆಟ್, ಫುಟಬಾಲ್, ವಾಲಿಬಾಲ್, ಟೆನಿಕಾಯ್ಟ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ಬಿಜಾಪುರ ಬುಲ್ ತಂಡವನ್ನು ಪ್ರತಿನಿಧಿಸಿರುವ ಯುವ ಕ್ರಿಕೆಟರ್ ಅಕ್ಷಯ ಬಿರಾದಾರ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಶಾಂತಯ್ಯ ಕರೆಗೊಳ ಸಾನಿಧ್ಯ ವಹಿಸಿದ್ದರು.
ಪಿ.ಎಸ್.ಐ ಬಸನಗೌಡ ಬಿ. ಎಂ. ಮುಖಂಡರಾದ ಪ್ರಕಾಶ ಜಾಲಗೇರಿ, ಮಹೇಶ ಮಾಳಿ, ಸಿದ್ದು ಬಿಳೂರ, ಬಾಪುರಾಯ ಜಂಗಮಶೆಟ್ಟಿ, ಮಹಾಂತೇಶ ಕೊಣ್ಣೂರ, ಜಾಫರ್ ನೀಡೋಣಿ, ರಾಣಪ್ಪ ಹೊಸಮನಿ, ಹನಮಂತ ಬಡಚಿ, ಬಸವರಾಜ ಲೋಕುರಿ, ವಸಂತ ವಿಧಾತೆ, ರಾಜಗುರು ಉಳ್ಳಾಗಡ್ಡಿ‌ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು

ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು

ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ

ದೇಶದ ಸೈನಿಕರಿಂದ ಸ್ವಾತಂತ್ರ್ಯ ರಕ್ಷಣೆ :ಮೇಜರ್ ಗಿರಿಮಲ್ಲೇಶ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು
    In (ರಾಜ್ಯ ) ಜಿಲ್ಲೆ
  • ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ
    In (ರಾಜ್ಯ ) ಜಿಲ್ಲೆ
  • ದೇಶದ ಸೈನಿಕರಿಂದ ಸ್ವಾತಂತ್ರ್ಯ ರಕ್ಷಣೆ :ಮೇಜರ್ ಗಿರಿಮಲ್ಲೇಶ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ್ಯ ಫಲಪ್ರದದಿಂದ ನಮಗೆ ನೆಮ್ಮದಿ ಜೀವನ :ಹೂಗಾರ
    In (ರಾಜ್ಯ ) ಜಿಲ್ಲೆ
  • ​ಗಾಂಧಿ ಭವನದಲ್ಲಿ ಡಿಸಿ ಡಾ.ಆನಂದ.ಕೆ ರಿಂದ ಧ್ವಜಾರೋಹಣ
    In (ರಾಜ್ಯ ) ಜಿಲ್ಲೆ
  • “ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಸಂಕಲ್ಪ ಮಾಡಬೇಕು
    In (ರಾಜ್ಯ ) ಜಿಲ್ಲೆ
  • ಉರ್ದು ಶಾಲಾ ಶಿಕ್ಷಕರ ನೇಮಕಕ್ಕೆ ಉರ್ದು ಶಿಕ್ಷಕರ ಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ್ಯದ ಹಿಂದೆ ಸಾವಿರಾರು ವೀರರ ತ್ಯಾಗವಿದೆ :ಕಟಕಧೋಂಡ
    In (ರಾಜ್ಯ ) ಜಿಲ್ಲೆ
  • ಆ.17ರಿಂದ ಗುರುದೇವ ಆಶ್ರಮದಲ್ಲಿ ಆಧ್ಯಾತ್ಮಿಕ ಪ್ರವಚನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.