Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಣಿ ಚನ್ನಮ್ಮಳ ಜೀವನವು ಧೈರ್ಯ ದೇಶಭಕ್ತಿಯ ಪ್ರತೀಕ.ಕಿತ್ತೂರು ರಾಣಿ ಚನ್ನಮ್ಮಳ ಜೀವನವು ಧೈರ್ಯ ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ಅವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದರು.ಅವರು ಇಂಡಿ ನಗರದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ 247 ನೇ ಜಯಂತಿ ಹಾಗೂ ವಿಜಯಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವಿ ಎಚ್ ಬಿರಾದಾರ, ನಿವೃತ್ತ ಪ್ರೌಢಶಾಲೆ ಸಹ ಶಿಕ್ಷಕ ಆರ್ ಬಿ ಬಿರಾದಾರ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಹಿಕ್ಕನಗುತ್ತಿ ಲಿಂಗಾಯತ ಮಾಹಾಮಠದ ಪ್ರಭುಲಿಂಗ ಶರಣರು ಮಾತನಾಡಿದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ದಂಡಾಧಿಕಾರಿ ಎಸ್ ಬಿ ಕಡಕಬಾವಿ, ಗ್ರೇಡ್ -2 ತಹಶೀಲ್ದಾರ ಧನಪಾಲ್ ಶೆಟ್ಟಿ ದೇವೂರ, ಮಾದೇವಪ್ಪ ಏವೂರ ಆರ್ ಬಿ ಗದ್ಯಾಳ ಇಂಡಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಪ್ ರಾಠೋಡ,…

Read More

ಇಂದು (೨೪ ಅಕ್ಟೋಬರ, ಶುಕ್ರವಾರ) ವಿಶ್ವಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ ಖೊದ್ನಾಪೂರ(ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಇಡೀ ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೊನೆಯ ಮಾತು ಹೀಗಿತ್ತು. “ನನ್ನನ್ನು ಮಣ್ಣು ಮಾಡುವಾಗ ನನ್ನ ಕೈಗಳನ್ನು ಮಾತ್ರ ಆಚೆ ಇರಿಸಿ ಮಣ್ಣು ಮಾಡಿ” ಎಂದು. ಈ ಮಾತಿನ ಅರ್ಥ ಈಷ್ಟೇ. ಅದರಿಂದ ಎಲ್ಲರೂ ತಿಳಿಯಲಿ ಪ್ರಲಂಚವೇ ಗೆದ್ದ ನನ್ನ ಕೈಯಲ್ಲಿ ಕೊನೆಗೆ ಏನೂ ಇರಲಿಲ್ಲವೆಂದು. ಅದಕ್ಕಂತಲೇ ಗೌತುಮ ಬುದ್ಧ ಅವರು, “ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ. ಇದು ನಿಜವಾದ ವಿಜಯವಾಗಿದೆ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯು ಒಂದು ಅಂತರ ಸರ್ಕಾರಿಯ ಸಂಘಟನೆಯಾಗಿದ್ದು, ಅದು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಶಾಂತಿ, ಸಹಕಾರ ಸುಭದ್ರತೆ, ಉತ್ತಮ ಅಂತರಾಷ್ಟ್ರೀಯ ಸಂಬಂಧಗಳು ಏರ್ಪಡುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ಇರುವ ಕೇಂದ್ರವಾಗಿದೆ. ವಿಶ್ವಸಂಸ್ಥೆಯ ಸ್ಥಾಪನೆಯ ಹಿನ್ನೆಲೆಎರಡನೇಯ ಜಾಗತಿಕ ಯುದ್ಧದ ನಂತರ ರಾಷ್ಟçಗಳ ಮಧ್ಯೆ ಮುಂದೆ…

Read More

ಲೇಖನ- ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಮಗೆ ಅತಿ ಬೇಕಾದವರೇ ಅವಮಾನದ ಕೋಟೆಯನ್ನೇರಿಸಿದಾಗ ಇದ್ದು ಪ್ರಯೋಜನವಿಲ್ಲ ಕೊನೆಯುಸಿರೆಳೆಯುವುದೇ ಒಳ್ಳೆಯದು ಎಂದೆನಿಸುವುದು ಸಹಜ. ಅವಮಾನದ ಬೆಟ್ಟ ಕರಗಿಸದೇ ಇದ್ದಿದ್ದರೆ, ಅವಮಾನದ ಕತ್ತಲಿನ ಜೊತೆ ಉಸಿರನ್ನು ಒಂದಾಗಿಸಿದ್ದರೆ ಅದೆಷ್ಟೋ ಮಹಾನ್ ಸಾಧಕರು ಇಂದು ಇತಿಹಾಸದ ಪುಟದಲ್ಲಿ ಮಿಂಚುತ್ತಿರಲಿಲ್ಲ. ನಮ್ಮ ಏಳ್ಗೆಯನ್ನು ಕಂಡು ತಮ್ಮಿಂದ ಅದು ಸಾಧ್ಯವಾಗದಿರುವುದಕ್ಕೆ ಕೊರಗಿ ನಮ್ಮ ಮುಂದೆ ಅವಮಾನವೆಂಬ ಹಗ್ಗವನ್ನು ಇಳಿಬಿಟ್ಟು ಕಟ್ಟಲು ನೋಡುತ್ತಾರೆ. ಇಳಿ ಬಿಟ್ಟ ಹಗ್ಗವನ್ನೇ ಹಿಡಿದು ಮೇಲೇರತೊಡಗಿದರೆ, ಆವಾಕ್ಕಾಗಿ ತುಸು ಹೊತ್ತಿನಲ್ಲೇ ನಮ್ಮಿಂದ ದೂರವಾಗಿ ತಾವೇ ಅವಮಾನದ ಕತ್ತಲಲ್ಲಿ ಕರಗಿ ಹೋಗುತ್ತಾರೆ.. ಅವಮಾನ ಯಾರಿಗಿಲ್ಲ ಹೇಳಿ?ಜಗದಲ್ಲಿ ಹುಟ್ಟಿದ ಮೇಲೆ ಎಲ್ಲರೂ ಒಂದಿಲ್ಲೊಂದು ದಿನ ಒಂದಿಲ್ಲೊಂದು ಸಂದರ್ಭದಲ್ಲಿ ಅವಮಾನ ಎದುರಿಸಲೇಬೇಕಾಗುತ್ತದೆ. ಮಹಾತ್ಮರೆನಿಸಿಕೊಂಡ ಗಾಂಧೀಜಿಯೂ ಅವಮಾನಿತರಾದವರೆ! ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಅವಮಾನಿತಗೊಂಡಿರಲಿಲ್ಲವೇ? ಗಾಂಧೀಜಿ ಹಾಗೂ ಚಾಣಕ್ಯ ಕಿವಿಗೆ ಬಿದ್ದ ಅವಮಾನಭರಿತ ಕಠೋರ ಮಾತುಗಳನ್ನು ಕ್ರೋಧಭರಿತ ಕಂಗಳಿಂದ, ಬಿಗಿ ಹಿಡಿದ ತುಟಿಗಳಿಂದ ಸಹಿಸಿದರು. ಮಡುಗಟ್ಟಿದ ಆತಂಕ ದುಗುಡಗಳನ್ನೆಲ್ಲ ಒಟ್ಟಾಗಿಸಿ ಆಕ್ರೋಶದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘದ ಸಹಯೋಗದಲ್ಲಿ ವಿಶ್ವ ಆಘಾತ ದಿನ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಮುಂದುವರೆದ ಆಘಾತ ಜೀವನ ಆಸರೆ(ATLS) ಮತ್ತು ಹೃದಯ ಶ್ವಾಸಕೋಷಗಳ ಪುನರುಜ್ಜೀವನ(CPR) ತರಬೇತಿ ಶಿಬಿರ ನಡೆಯಿತು.ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಈ ತರಬೇತಿ ಶಿಬಿರದಲ್ಲಿ ಜಿಲ್ಲಾ ಸಿವಿಲ್ ಮತ್ತು ಸಂಚಾರಿ ಪೊಲೀಸ್ ಸಿಬ್ಬಂದಿಗೆ ಜೀವರಕ್ಷಣೆ ಕುರಿತು ತರಬೇತಿ ನೀಡಲಾಯಿತು.ಈ ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹತ್ತಿ, ರಸ್ತೆ ಅಪಘಾತ ಮತ್ತೀತರ ತುರ್ತು ಸಂದರ್ಭಗಳಲ್ಲಿ ಪ್ರತ್ಯಕ್ಷದರ್ಶಿಗಳು ಆಪತ್ಭಾಂದವರಂತೆ ಪ್ರಥಮ ಚಿಕಿತ್ಸೆ ಕ್ರಮಗಳನ್ನು ಅನುಸರಿಸಿದರೆ ಗಾಯಾಳುಗಳ ಜೀವ ರಕ್ಷಿಸಬಹುದು. ಈ ನಿಟ್ಟಿನಲ್ಲಿ ಬಿ.ಎಲ್.ಡಿ.ಈ ಆಸ್ಪತ್ರೆಯ ವೈದ್ಯರ ತಂಡವು ಜಿಲ್ಲಾ ಪೊಲೀಸ್ ಸಿಬ್ಬಂದಿಗಾಗಿ ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ, ಡಾ. ಮಂಜುನಾಥ.ಕೋಟೆಣ್ಣವರ, ಜನಸಾಮಾನ್ಯರಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಧನೆಗೆ ಬಡತನ, ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಾರವು, ಸತತ ಓದಿನಿಂದ ಇಚ್ಚಿಸಿದ ಗುರಿಯನ್ನು ನಾವು ತಲುಪಬಹುದು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ‌‌ ಹೇಳಿದರು.ನಗರದ ಟಕ್ಕೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ಬಿಸಿಎಂ)‌ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ‌ ಹಿರಿಯ ವಿದ್ಯಾರ್ಥಿಗಳ ಸಹಯೋಗದಿಂದ ಆರನೇ ಹಾಸ್ಟೆಲ್ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಜೀವನದ ಕೆಲವು ಘಟನೆಗಳನ್ನು ಮೆಲಕು ಹಾಕುತ್ತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ ಮಾತನಾಡಿ ಹಾಸ್ಟೆಲ್ ಗಳು ಕೇವಲ ಅನ್ನವನ್ನು ಮಾತ್ರ ಕೊಡುವುದಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.ನಿವೃತ್ತ ನಿಲಯಪಾಲಕ ಎಂ. ಎಸ್. ಕಟಬು ಮಾತನಾಡಿ ಜನನಿ ಜನ್ಮಭೂಮಿ ಸ್ವರ್ಗಕಿಂತಲೂ ಮಿಗಿಲು ಎಂಬ ವಿಷಯವನ್ನು ಹೇಳಿದರು.ಹಲವು ಹಳೆಯ ವಿದ್ಯಾರ್ಥಿಗಳು ತಮ್ಮ ನೆನಪಿನಂಗಳದಲ್ಲಿ ಅಚ್ಚಳಿಯದಂತಿರುವ ಭಾವನೆಗಳ ಬುತ್ತಿಯನ್ನು ತಮ್ಮ ಅನಿಸಿಕೆಗಳ ಮೂಲಕ ತೆರೆದಿಟ್ಟರು. ಒಟ್ಟಾರೆಯಾಗಿ ಈ ವರ್ಷದ ಹಾಸ್ಟೆಲ್…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆ ಪೂಜೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಸೇರಿದಂತೆ ಪಟಾಕಿ, ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ಜರುಗಿತು.ಪಟ್ಟಣದಲ್ಲಿ ದೀಪಾವಳಿ ಅಮವಾಸ್ಯೆಯನ್ನು ಸೋಮವಾರ ಸಾಯಂಕಾಲ ನಂತರ ಹಾಗೂ ಮಂಗಳವಾರ ಎರಡು ದಿನಗಳಂದು ಆಚರಿಸಲಾಗುತ್ತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ, ಮಾರಾಟ ಮಳಿಗೆಗೆಳ ಲಕ್ಷ್ಮಿ ಪೂಜೆಗಾಗಿ ಬಾಳೇಗಿಡ, ಕಬ್ಬು, ತೆಂಗಿನ ಪರಕೆ, ಶೃಂಗಾರ ವಸ್ತಗಳ ಸಹಿತ ಖಾತೆಪುಸ್ತಕ, ಹೂಹಣ್ಣುಗಳನ್ನು ಮಂಗಳವಾರ ಬೆಳಿಗ್ಗೆಯೇ ಖರೀದಿಸಿದರು. ಪೂಜೆಗಾಗಿ ಸೋಮವಾರ ಹಾಗೂ ಮಂಗಳವಾರ ರಾತ್ರಿ ಅಂಗಡಿ ಮಳಿಗೆಗಳನ್ನು ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಸಿಂಗರಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಮನೆ ಮಂದಿಯೆಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ವಿಶೇಷವಾಗಿ ಮುತೈದಿಯರ ಪೂಜೆಯಲ್ಲಿ ನಿರತರಾಗಿದ್ದರೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಸಂಜೆ ಆರಂಭಗೊಂಡ ಪೂಜಾ ವಿಧಿವಿಧಾನಗಳು ತಡ ಮಧ್ಯರಾತ್ರಿಯವರೆಗೆ ಜರುಗಿದವು.ಮಂಗಳವಾರ ಸೂರ್ಯೋದಯದೊಂದಿಗೆ ಅಮವಾಸ್ಯೆ ಆರಂಭಗೊಂಡಿದ್ದು, ಮನೆಗಳಲ್ಲಿ ಲಕ್ಷ್ಮಿ ಪೂಜೆಯ ಅಂಗವಾಗಿ ಹೂ-ಹಾರಗಳನ್ನು ಖರೀದಿಸಲು ಜನ ಬೆಳಿಗ್ಗೆಯೇ ಆಗಮಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಜನಸಂದಣಿ ಕಂಡು ಬಂತು.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ನವಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಆರ್ಯುವೇದ ಕಾಲೇಜಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ಐದು ಪ್ರಶಸ್ತಿಗಳನ್ನು ಪಡೆಯುವದರೊಂದಿಗೆ ವೀರಾಗ್ರಣಿ (ಚಾಂಪಿಯನ್) ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿತು.ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳು ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಸುನೀಲಕುಮಾರ ತೋಂಟಾಪೂರ ಇವರ ಮಾರ್ಗದರ್ಶನದಲ್ಲಿ ತಯಾರಿಸಿದ ನವೀಕರಿಸಬಹುದಾದ ಶಕ್ತಿಯ ಸಾಧನವಾದ ವಿಂಡ್ ಎನರ್ಜಿ ಮಾದರಿ ಮತ್ತು ವಿಷಯ ಮಂಡನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಪುಷ್ಪಾ ಶಾಪೇಟಿ, ರೂಪಾ ಮಿರಗಿ, ವಾಣಿಶ್ರೀ ಸಾವಂತ, ಲಕ್ಷ್ಮಿ ಯಾದವಾಡ, ರಮೇಶ ಪಾರಗೊಂಡ, ಚೇತನ ಪತ್ತಾರ, ಪ್ರಜ್ವಲ ಬಬಲೇಶ್ವರ, ಆಸೀಫ್ ಭಾವಖಾನ ಮತ್ತು ರೋಹಿತ ಬೀಳಗಿ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ತೋರಿದರು.ಘೋಷಣೆ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ರುಕ್ಮೀಣಿ ಬಬಲಾದಕರ ಇವಳು ಘೋಷಣೆ ಬರಹದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.ಜಾನಪದ ನೃತ್ಯ…

Read More

ಪಟಾಕಿ ಸಿಡಿಸಿ ಸಂಭ್ರಮಿಸಿದ ಭಕ್ತರು | ಭಕ್ತಿ-ಭಂಡಾರದಲ್ಲಿ ಮಿಂದೆದ್ದ ಭಕ್ತರು ಉದಯರಶ್ಮಿ ದಿನಪತ್ರಿಕೆ ಚಡಚಣ: ರೇವತಗಾಂವ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಗ್ರಾಮದ ಮಲಕಾರಿಸಿದ್ಧ ಹಾಗೂ ಲಗಮವ್ವ ದೇವಿ ದೇವರ ಭೇಟಿ ಕಾರ್ಯಕ್ರಮವು ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗದಲ್ಲಿ ಭಂಡಾರದೊಂದಿಗೆ ಸೋಮವಾರದಂದು ಅದ್ಧೂರಿಯಾಗಿ ಜರುಗಿತು.ನಸುಕಿನ ಜಾವ ಮಲಕಾರಿಸಿದ್ದ ಹಾಗೂ ಲಗಮವ್ವದೇವಿ ದೇವರುಗಳಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಪೂಜೆ ಜರುಗಿತು. ನಂತರ ಭಕ್ತರಿಂದ ದಿಂಢ ನಮಸ್ಕಾರವು ನಡೆಯಿತು. ಮಧ್ಯಾಹ್ನ ೧ ಗಂಟೆಯಿಂದ ಸ್ಥಳೀಯ ಕಲಾವಿದರಿಂದ ಡೊಳ್ಳಿನ ಪದಗಳು ನೆರವೇರಿದವು. ಸಾಯಂಕಾಲ ೪ ಗಂಟೆಗೆ ಶ್ರೀ ಮಲಕಾರಿಸಿದ್ಧ ಹಾಗೂ ಲಗಮವ್ವದೇವಿ ದೇವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನಾನಾ ಕಲಾವಿದರಿಂದ ಡೊಳ್ಳಿನ ವಾಲಗ ಜರುಗಿತು. ನಂತರ ಪಲ್ಲಕ್ಕಿಗಳ ಮೇಲೆ ಭಕ್ತರು ಭಂಡಾರ ತೂರುವದರೊಂದಿಗೆ ಭೇಟಿ ಜರುಗಿತು.ಈ ಭೇಟಿ ಕಾರ್ಯಕ್ರಮವನ್ನು ನೋಡಲು ಮಹಾರಾಷ್ಟç ಸೇರಿದಂತೆ ಕರ್ನಾಟಕದ ಸಹಸ್ರಾರು ಭಕ್ತರು ಸೇರಿದ್ದರು. ಭಕ್ತವೃಂದ ದೇವರ ಪಲ್ಲಕ್ಕಿಗಳ…

Read More

ಹುಲಜಂತಿಯ ಮಾಳಿಂಗರಾಯನ ಮೇಲೆ ಸಾಕ್ಷಾತ್ ಶಿವ-ಪಾರ್ವತಿಯರು ಮುಂಡಾಸ್ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಹಾಲುಮತ ಸಮಾಜದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಸಮೀಪದ ಹುಲಜಂತಿ ಗ್ರಾಮದ ಶ್ರೀ ಮಾಳಿಂಗರಾಯ ಜಾತ್ರೆಯ ಮುಂಡಾಸ್ ಹಾಗೂ ದೇವರುಗಳ ಪಲ್ಲಕ್ಕಿಗಳ ಭೇಟಿಯನ್ನು ನೋಡಲು ಭಕ್ತರ ಮಹಾಪೂರವೇ ಹರಿದು ಬಂದಿದೆ.ರಾಜ್ಯದ ಗಡಿಯಲ್ಲಿರುವ ಮಂಗಳವೇಡಾ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನು ೧೪ನೇ ಶತಮಾನದಲ್ಲಿ ಬಾಳಿ ಬದುಕಿ, ಹಲವು ಪವಾಡಗಳನ್ನು ಮಾಡಿದ ಪವಾಡ ಪುರುಷ ಮಾಳಿಂಗರಾಯ. ಮಾಳಿಂಗರಾಯನ ಭಕ್ತಿಗೆ ಮೆಚ್ಚಿದ ಪರಶಿವನು ದೀಪಾವಳಿಯ ಅಮವಾಸ್ಯೆಯ ದಿನ ಬೀಜಗುಂತಿಯ ಹುತ್ತದ ಮೇಲೆ ಹತ್ತಿ ಬೀಜವನ್ನು ನಾಟಿ ಮಾಡಿ. ಅದು ಬೆಳದು ಹೂವಾಗಿ, ಕಾಯಾಗಿ, ಹತ್ತಿಯಾಗಿ ಒಡೆದು. ಆ ಹತ್ತಿಯನ್ನು ನೇಯ್ದು. ಮುಂಡಾಸವನ್ನು ತಯಾರು ಮಾಡಿ ಸಾಕ್ಷಾತ್ ಶಿವ-ಪಾರ್ವತಿಯರು ಕೈಲಾಸದಿಂದ ಧರೆಗಿಳಿದು ಬಂದು ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ.ಸೋಮವಾರದ ಮಧ್ಯರಾತ್ರಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಮಾಳಿಂಗರಾಯನ ಮುಂಡಾಸ್‌ನ್ನು ನೋಡಲು ಜನಸಾಗರ ಮಧ್ಯರಾತ್ರಿಯಲ್ಲಿಯೇ ದೇವಾಸ್ಥಾನದ ಸುತ್ತಮುತ್ತ ಊಳಿದುಕೊಂಡಿದ್ದರು. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅಕ್ಟೋಬರ್ ೨೩ರಂದು ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೯.೩೦ಗಂಟೆಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಯೂ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ವಿವಿಧ ಕಲಾ ತಂಡಗಳೊಂದಿಗೆ ಗಾಂಧಿ ಚೌಕ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಳ್ಳಲಿದ್ದು, ಅದೇ ದಿನ ಬೆಳಿಗ್ಗೆ ೧೦.೩೦ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿಯೇ ವೇದಿಕೆ ಕಾರ್ಯಕ್ರಮ ಜರುಗಲಿದೆ.ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಗೌರವ ಉಪಸ್ಥಿತರಿರಲಿದ್ದಾರೆ.ಶಾಸಕ ಬಸನಗೌಡ ಆರ್.ಪಾಟೀಲ (ಯತ್ನಾಳ) ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ…

Read More