ಆಲಮೇಲದ ವಾಣಿಜ್ಯ ಮಳಿಗೆಗಳು ಗೌಪ್ಯವಾಗಿ ಹರಾಜು ಮಾಡಲು ಮುಂದು | ಪ.ಪಂ ಸದಸ್ಯ ಸಂಜೀವಕುಮಾರ ಎಂಟಮಾನ ಆರೋಪ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಬಸವೇಶ್ವರ ವೃತದಲ್ಲಿ ನಿರ್ಮಾಣಗೊಂಡ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳು ಗೌಪ್ಯವಾಗಿ ಹರಾಜು ಮಾಡಲು ಮುಂದಾಗಿರುವ ಮುಖ್ಯಾಧಿಕಾರಿ ಮತ್ತು ಅದ್ಯಕ್ಷರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ ಎಂದು 2ನೇ ವಾರ್ಡಿನ ಪ.ಪಂ. ಸದಸ್ಯ ಸಂಜೀವಕುಮಾರ ಎಂಟಮಾನ ಹೇಳಿದರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದ ಅವರು, ಪಂಚಾಯತಿಯ ವಾಣಿಜ್ಯ ಮಳಿಗೆಳ ಹಾರು ಪ್ರಕ್ರಿಯೆ ಕಾನೂನು ರೀತಿ ಮೀಸಲಾತಿ ಆದಾರದ ಮೇಲೆ ನಡೆಯಬೇಕು. ಮತ್ತು ಮುಂಚಿತವಾಗಿ ಪ್ರಚಲಿತ ವಿವಿದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಹರಾಜು ಮಾಡಬೇಕು ಎಂದು ಈ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ, ಅದು ಯಾವುದು ಪರಿಗಣನೆ ಮಾಡದೆ ಗೌಫ್ಯವಾಗಿ ಹರಾಜು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕೆಲ ವ್ಯಾಪರಸ್ಥರು ಪ.ಪಂ ಸಿ.ಓ ಹೆಸರಿನ ಮೇಲೆ ವಿವಿದ ಬ್ಯಾಂಕುಗಳಲ್ಲಿ ಡಿಡಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕುದ್ದಾಗಿ ಬೇಟಿ ನೀಡಿ ಪರಿಶಿಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿ ಕಛೆರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ವಾಣಿಜ್ಯ ಮಳಿಗೆಗಳ ಹರಾಜು ಮಾಡುವ ಬಗ್ಗೆ ಪ.ಪಂ ಸದಸ್ಯರ ಸಭೆ ಕರೆದು ಎಲ್ಲರ ಒಪ್ಪಿಗೆ ಪಡೆದುಕೊಂಡು ಕಾನೂನು ರೀತಿ ಸಾರ್ವಜನಿಕರಿಗೆ ಮಾಹಿತಿಗಾಗಿ ಪ್ರಚಲಿತ ದಿನ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸುವದು ಮತ್ತು ಕರ ಪತ್ರಗಳು ಹಂಚುವದು, ಡಂಗುರ ಸಾರುವ ಮೂಲಕ ಹರಾಜು ಮಾಡಬೇಕು ಎಂದು ಆಗ್ರಹಿಸಿದರು. ಒಟ್ಟು 21 ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡಬೇಕಿದ್ದು ಅದರಲ್ಲಿ 17 ಮಾತ್ರ ನಿರ್ಮಿಸಿದ್ದಾರೆ ಅದರ ಕಾಮಗಾರಿ ಇನ್ನು ಪೂರ್ಣಗೊಳಿಸದೆ ಆತುರದಲ್ಲಿ ಮಳಿಗೆಗಳು ಪ್ರಾರಂಬಿಸಲು ಮುಂದಾಗಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ಅದ್ಯಕ್ಷರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದು ಪಂಚಾಯಿತಿ ಎಲ್ಲ ವ್ಯವಹಾರಗಳು ಅವ್ಯವಹಾರ ನಡೆದಿದೆ. ಆಲಮೇಲದ ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಪ್ರತಿ ವರ್ಷ 7.45 ಲಕ್ಷ ತೆರಿಗೆ ಹಣ ಮತ್ತು ಪಟ್ಟಣದ ಕಾಯಿಪಲ್ಯ ಮಾರುಕಟ್ಟೆಯ ನಿಲಾವಿನ 5.40 ಲಕ್ಷ ಹಣ ಸೇರಿದಂತೆ ಪಂಚಾಯಿತಿಗೆ ಬರುವ ಆದಯವನ್ನು ಸಂಪೂರ್ಣವಾಗಿ ಅವ್ಯವಹಾರ ಮಾಡಲಾಗಿದೆ ಈ ಬಗ್ಗೆ ಸದಸ್ಯರು ಲೆಕ್ಕಪತ್ರ ಕೆಳಿದರೆ ಸರಿಯಾದ ಮಾಹಿತಿ ನಿಡುವದಿಲ್ಲ ಸದಸ್ಯರ ಗಮನಕ್ಕೆ ಬಾರದೆ ಅದ್ಯಕ್ಷ ಮತ್ತು ಮುಖ್ಯಾಧಿಕಾರಿ ಅವ್ಯವಹಾರ ಮಾಡಿದ್ದು ಈ ಬಗ್ಗೆ ಲೋಕಾಯುಕ್ತರು ಸ್ವಯಂ ಪ್ರೇರಣೆ ಯಿಂದ ತನಿಕೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಾಣಿಜ್ಯ ಮಳಿಗೆಗಳು ಕಾನೂನು ರೀತಿ ಮಿಸಲಾತಿ ಆದಾರದ ಮೇಲೆ ಹರಾಜು ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿರವ ಮತ್ತು ಕೆಪಿಆರ್ ತೆರಿಗೆ ತುಂಬಿರುವ ಮತ್ತು ತರಕಾರಿ ಮಾರುಕಟ್ಟೆಯ ಹರಾಜಿನಿಂದ ಬಂದ ಹಣದ ಕರಪತ್ರಗಳನ್ನು ಪ್ರದರ್ಶಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂತೋಷ ಜರಕರ ಇದ್ದರು.
“ವಾಣಿಜ್ಯ ಮಳಿಗಳ ಹರಾಜು ಪ್ರಕ್ರಿಯೆ ಕಾನೂನು ರೀತಿ ಮಾಡುತ್ತೆವೆ. ಅದಕ್ಕೆ ಸಂಬಂದಿಸಿದ ಬ್ಯಾಂಕಿನಲ್ಲಿ ಡಿಡಿ ಪಡೆದುಕೊಂಡಿರುವದು ನನಗೆ ಯಾವುದೆ ಮಾಹಿತಿ ಇಲ್ಲ. ಕಾನೂನು ರೀತಿಯಲ್ಲಿ ಹರಾಜು ಮಾಡಲಾಗುತ್ತೆ.
-ಸುರೇಶ ನಾಯಕ
ಪ.ಪಂ. ಸಿಒ ಆಲಮೇಲ

