ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡದ ದೀಕ್ಷಾ ಭದ್ದ ಸಂಘಟನೆಯಾದ ಕದಂಬ ಸೈನ್ಯ ಹಾಗೂ ಸಂಘಟನೆಯ ಮುಖವಾಣಿಯಾದ ಕದಂಬವಾಣಿ ದಿನಪತ್ರಿಕೆಯ ವಾರ್ಷಿಕೋತ್ಸವದ ಸಮಾರಂಭವು ಶ್ರೀರಂಗಪಟ್ಟಣದ ತಾಲೂಕಿನ ಶ್ರೀ ಕ್ಷೇತ್ರ ಚಂದ್ರವನದಲ್ಲಿ ಪ್ರತಿ ವರ್ಷದಂತೆ ಕದಂಬ ಸೈನ್ಯ ಸಂಘಟನೆ ಕೊಡ ಮಾಡುವ ಕದಂಬ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದೊಂದಿಗೆ ನೆರವೇರಿತು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರು, ಪೂಜ್ಯ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮಾ ಹಾಗೂ ಚೆನ್ನವೀರ ಮಹಾಸ್ವಾಮಿಗಳು ವಹಿಸಿದ್ದು, ಅಧ್ಯಕ್ಷತೆಯನ್ನು ಕದಂಬ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ವಹಿಸಿದ್ದು, ಇವರೆಲ್ಲರ ಸಮ್ಮುಖದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರು ಎಂ ಸಿ ಕಾಂಬಳೆ ಹಾಗೂ ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ್ ಅವರ ಸಮ್ಮತಿಯ ಮೇರೆಗೆ ವಿಜಯಪುರ ಜಿಲ್ಲೆಯ ಕನ್ನಡ ಪರ ಹೋರಾಟಗಾರರು ಪತ್ರಕರ್ತರು ಆದ ಇರ್ಫಾನ್ ಎಸ್ ಬೀಳಗಿ ಅವರಿಗೆ ಕದಂಬ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

