ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಯವರು ಪಾದಯಾತ್ರೆ, ದಾಸೋಹವೇ ಅವರ ನಿತ್ಯ ಕಾಯಕವಾಗಿತ್ತು. ಇವರು ಶತಾಯುಷಕ್ಕೆ ಸಮೀಪವಾಗಿದ್ದರೂ ಸಹ ಶರೀರ ಬಾಗಲಿಲ್ಲ. ಇವರ ಕಾಯಕ ಭಕ್ತರ ಅಂತರಾಳದಲ್ಲಿ ಸದಾ ಇರುವ ಮೂಲಕ ಅವರ ಕಾಯಕ ತತ್ವ ಅಳವಡಿಸಿಕೊಳ್ಳುವಂತಾಗಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಲಿಂಗೈಕ್ಯರಾದ ಚನ್ನಬಸವ ಸ್ವಾಮೀಜಿಯವರಿಗೆ ಶುಕ್ರವಾರ ಮಠದ ಆವರಣದಲ್ಲಿ ಜರುಗಿದ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಗ, ದ್ವೇಷಗಳಿಲ್ಲದ ಮಂದಹಾಸದ ಇಂಗಳೇಶ್ವರ ವಿರಕ್ತ ಮಠದ ಬಸವ ಶ್ರೀಗಳು ಆದಿಲ್ ಶಾಹಿ ಗೋಲಗುಂಬಜ ಕಟ್ಟಿದ ಮಾದರಿಯಲ್ಲಿ ವಚನ ಶಿಲಾ ಮಂಟಪ ನಿರ್ಮಿಸಿ ಸಮಾಜಕ್ಕೆ, ಮಠಾಧೀಶರಿಗೆ ಸಾರ್ವಕಾಲಿಕ ಮಾದರಿ ರೀತಿ ಬದುಕಿ ತೋರಿದ ಮಹಾನ್ ಚೇತನವಾಗಿದ್ದರು ಎಂದರು.
ಬಸವಾದಿ ಶರಣರ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಷಟಸ್ಥಲ ಮಂಟಪ ರೂಪಿಸುವ ಚನ್ನಬಸವ ಶ್ರೀಗಳ ಛಲವಾದ ಸಣ್ಣದೇನಲ್ಲ. ಶ್ರೀಗಳ ಸಂಕಲ್ಪವನ್ನು ಬಹುತೇಕರು ಅಸಾಧ್ಯದ ನಿರ್ಧಾರ ಎಂದಿದ್ದರು. ಭಕ್ತರ ಸಹಕಾರದಿಂದ ಎಲ್ಲವೂ ಸಾಧ್ಯವಿದೆ ಎಂದಿದ್ದ ಶ್ರೀಗಳು, ಸಂಕಲ್ಪ ಸಿದ್ಧ ಮಾಡಿಯೇ ಹೋದರು. ಇವರ ಕಾರ್ಯ ಸೂರ್ಯ-ಚಂದ್ರ ಇರುವವರೆಗೂ ಇರಲಿದೆ ಎಂದರು.
ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಇಂಗಳೇಶ್ವರ ವಿರಕ್ತ ಮಠದ ವಿಭೂತಿ ಪುರುಷರಾಗಿದ್ದು ಮಾತ್ರವಲ್ಲದೇ ಸಿದ್ಧಿಪುರುಷರಾಗಿದ್ದರು. ಸ್ವಯಂ ಅವರೊಬ್ಬ ಪವಾಡ ಪುರುಷರಾಗಿದ್ದನ್ನು ನನ್ನ ಅನುಭವದಿಂದಲೇ ಕಂಡಿದ್ದೇನೆ ಎಂದರು.
ಮೂರುಸಾವಿರಮಠದ ಶ್ರೀಗಳು, ನಿಡಸೋಸಿಯ ಜಗದ್ಗುರುಗಳು ಸೇರಿದಂತೆ ಅನೇಕ ಶ್ರೀಗಳು, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ,ಡಾ.ಸಿದ್ಧಲಿಂಗ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಯರನಾಳದ ಸಂಗನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸಿದ್ಧಲಿಂಗ ಸ್ವಾಮೀಜಿ ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಕಗ್ಗೋಡದ ಬಸಮ್ಮ ಮಾತೋಶ್ರೀ, ಹಿರೇಬೇವನೂರಿನ ರಮಾತಾ ಶರಣಮ್ಮ, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು ಸೇರಿದಂತೆ ಅನೇಕ ಶ್ರೀಗಳು ಶ್ರೀಗಳ ಕುರಿತು ಮಾತನಾಡಿದರು.
ಬಸವಪ್ರಭು ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಗುಂಡಕನಾಳ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ, ಜಗದೀಶ ಸ್ವಾಮೀಜಿ, ಪಡೆಕನೂರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಗುರುಮೂರ್ತಿ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ಅಕ್ಕಮಹಾದೇವಿ ಮಾತಾ, ಸಿದ್ಧಲಿಂಗ ಶಿವಾಚಾರ್ಯ, ವೀರೇಶ್ವರ ದೇವರು, ಆನಂದ ದೇವರು, ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಜಿ, ಗುಳೆದಗುಡ್ಡ ಶ್ರೀಗಳು, ಸೋಲಾಪುರ ಶ್ರೀಗಳು, ಕೊಕಟನೂರ ಶ್ರೀಗಳು, ಬನಹಟ್ಟಿ ಶ್ರೀಗಳು, ನಾಗಠಾಣಶ್ರೀಗಳು, ನಾವದಗಿ ಶ್ರೀಗಳು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಸ್ವಾಮೀಜಿಗಳು, ಶಾಸಕ ರಾಜುಗೌಡ ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಬಸನಗೌಡ ಹರನಾಳ,ಚಂದ್ರಶೇಖರಗೌಡ ಪಾಟೀಲ, ಬಾಬು ಮಹಾರಾಜ ಹೊನವಾಡ, ಈರಣ್ಣಪಟ್ಟಣಶೆಟ್ಟಿ,ನಿಂಗಪ್ಪ ಬೊಮ್ಮನಹಳ್ಳಿ, ಕಲ್ಲು ದೇಸಾಯಿ, ಸಂಗಮೇಶ ಓಲೇಕಾರ, ಡಾ. ಮಹಾಂತೇಶ ಬಿರಾದಾರ, ಡಾ.ಎಮ್. ಎಸ್. ಮದಭಾವಿ, ಈರಣ್ಣ ಬೆಕಿನಾಳ, ಡಾ.ಸೋಮನಾಥ ಯಾಳವಾರ, ಶಿವನಗೌಡ ಬಿರಾದಾರ, ಅಣ್ಣುಗೌಡ ಪಾಟೀಲ ಉಕ್ಕಲಿ, ಶಾಂತು ಬೈಚಬಾಳ, ರವೀಂದ್ರ ಕುಲಕರ್ಣಿ, ನಾನಾಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ. ಕೆ.ಆನಂದ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ಸೇರಿದಂತೆ ಇತರರು ಇದ್ದರು.

