Author: editor.udayarashmi@gmail.com

ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ) ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೇವಲ ಒಂದು ದಶಕದ ಹಿಂದೆ ಎಲ್ಲರ ಬಳಿ ಮೊಬೈಲ್ ಫೋನ್ ಇರಲಿಲ್ಲ. ಆಗ ಇಂಟರ್ನೆಟ್ ಸೌಲಭ್ಯ ಕೂಡ ಅಷ್ಟೇನೂ ಸುಲಭವಾಗಿ ದೊರೆಯುತ್ತಿರಲಿಲ್ಲವಾದ ಕಾರಣ ವಿವಿಧ ಗ್ಯಾಜೆಟ್ಗಳನ್ನು ಮಕ್ಕಳು ಬಳಸುವುದು ದೂರವಾಗುತ್ತಿತ್ತು. ಆದರೆ ಕೇವಲ ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಸೌಲಭ್ಯ ಮನೆಮನೆಯ ಬಾಗಿಲು ತಟ್ಟಿದ್ದು ಎಲ್ಲರ ಕೈಯಲ್ಲೂ ವಿವಿಧ ಬಗೆಯ ಮೊಬೈಲ್ ಸೆಟ್ಟುಗಳು ಇದ್ದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಹತ್ತು ಹಲವಾರು ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇಂದಿನ ಯುವಶಕ್ತಿಯಲ್ಲಿರುವ ಚೈತನ್ಯ ಕುಗ್ಗುತ್ತಿದೆ.ಶಿಕ್ಷಣ ಮಕ್ಕಳಲ್ಲಿ ಅತ್ಯವಶ್ಯಕವಾಗಿ ಹೊಂದಲೇಬೇಕಾದದ್ದು. ಒಂದು ಉತ್ತಮ ಬದುಕನ್ನು ಸಾಧಿಸಲು ಪದವಿಯವರೆಗಿನ ಓದು ಅನಿವಾರ್ಯವಷ್ಟೇ ಅಲ್ಲ ಅವಶ್ಯಕತೆಯೂ ಹೌದು.ಓದಿನ ಜೊತೆ ಜೊತೆಗೆ ಉದ್ಯೋಗ ಮಾಡಲು ಅವಶ್ಯಕವಾದ ಕೌಶಲ್ಯ ತರಬೇತಿಯು ಇಂದಿನ ಮಕ್ಕಳಿಗೆ ಬೇಕೇ ಬೇಕು. ಅಂತರ್ಜಾಲದ ನೆರವಿನಿಂದ ಸಾಮಾಜಿಕ ಜಾಲತಾಣಗಳ ಒಳಹೊಕ್ಕು ತಾಂತ್ರಿಕ…

Read More

ಸಚಿವ ಡಾ. ಎಂ.ಬಿ.ಪಾಟೀಲ ರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿವಿಮಾತು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಚಿವ ಡಾ.ಎಂ.ಬಿ. ಪಾಟೀಲರು ಮುಖ್ಯಮಂತ್ರಿಯಾಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ತಾವು ಮುಖ್ಯಮಂತ್ರಿಯಾಗಲು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ಈ ಹಿಂದೆಯೂ ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ವಿಷಯ ಮುನ್ನೆಲೆಗೆ ತಂದು ಕೈ ಸುಟ್ಟುಕೊಂಡಿದ್ದೀರಿ, ಈಗ ಪುನಃ ಧರ್ಮ ಒಡೆದು ಮುಖ್ಯಮಂತ್ರಿಯಾಗುವ ಕೆಲಸ ಬೇಡ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗುವ ಇರಾದೆಯಲಿರುವ ಸಚಿವ ಪಾಟೀಲರು ಈ ಧರ್ಮ ವಿಭಜನೆಯಲ್ಲಿ ತೊಡಗಿದ್ದಾರೆ,೨೦೨೮ ರಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಾಣಬೇಡಿ, ನವ್ಹೆಂಬರ್ ಕ್ರಾಂತಿಯಲ್ಲಿಯೇ ನೀವು ಮುಖ್ಯಮಂತ್ರಿ ಆಗಬೇಕು ಹೊರತು ಮುಂದೆ ನಾನು ಮುಖ್ಯಮಂತ್ರಿ ಆಗುವೆ ಎಂಬ ಕನಸು ಕಾಣಲು ಹೋಗಬೇಡಿ, ಮುಂದೆ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು.ಕನೇರಿ ಶ್ರೀಗಳ ಮನಸ್ಸಿಗೆ ನೋವು ಮಾಡುವ ಕೆಲಸ ನಡೆದಿದೆ,…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾವಿನಾಳ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವಿಕೆಯ ಪೂಜಾ ಕಾರ್ಯಕ್ರಮವನ್ನು ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಹಂತ, ವಿದ್ವಾಂಸ ಶ್ಯಾಮಸುಂದರ ಶಾಸ್ತ್ರಿ ಮಹಾರಾಜರ ಕಂಪನಿಯ ಸಂಚಾಲಕ ಚೇತನ ಜಯಕುಮಾರ ಧಾರು ಅವರು ಬುಧವಾರ ನೆರವೇರಿಸಿದರು.ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಮಾತನಾಡಿ, ಈ ಹಂಗಾಮಿನಲ್ಲಿ 7 ಲಕ್ಷ ಮೆ.ಟನ್ ಕಬ್ಬು ನುರಿಸುವಿಕೆಯ ಉದ್ದಿಷ್ಟ ಇಟ್ಟಕೊಳ್ಳಲಾಗಿದೆ. ಇದರ ಸಲುವಾಗಿ ಈ ಭಾಗದ ಕಬ್ಬು ಬೆಳಗಾರ ರೈತರು ತಮ್ಮ ಎಲ್ಲ ಕಬ್ಬು ನುರಿಸಲು ನಮ್ಮ ಸಕ್ಕರೆ ಕಾರ್ಖಾನೆಗೆ ಕಳುಹಿಸುವಂತೆ ಅವ್ಹಾನ ನೀಡಿದರು. ಇದಕ್ಕೆ ಬೇಕಾಗಿರುವ ಕಬ್ಬು ಕಟಾವು ಮತ್ತು ಸಾಗಾಣಿಕೆಯ ಯಂತ್ರಣಗಳು ಕರಾರ ಮಾಡಿ ತುಂಬಲಾಗಿದೆ. ಅದರಂತೆ ರೈತರ ಕಬ್ಬು ಸರಿಯಾದ ವೇಳೆಗೆ ಕಾರ್ಖಾನೆಗೆ ನುರಿಸಲು ತರುವ ಸಲುವಾಗಿ 10 ಕಬ್ಬು ಕಟಾವು ಮಶಿನಗಳನ್ನು ಖರೀದಿ ಮಾಡಲಾಗಿದೆ. ನುರಿಸಲು ಬರುವ ಕಬ್ಬಿನ ಬಿಲ್ಲು ರೈತರ ಬ್ಯಾಂಕ ಖಾತೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಬರಟಗಿ ಗ್ರಾಮದಲ್ಲಿ ಅಕ್ಟೋಬರ್ 25 ರಂದು ಶನಿವಾರ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ನಾನಾ ವಿಭಾಗಗಳ ನುರಿತ ತಜ್ಞರ ವೈದ್ಯರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಅಲ್ಲದೇ, ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿಗಳ ವಿತರಣೆ ನಡೆಯಲಿದೆ. ಅಲ್ಲದೇ, ಪ್ರಾಥಮಿಕ ರಕ್ತ ಮೂತ್ರ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದರೆ, ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಸಾಮಾನ್ಯ ವಾರ್ಡಗಳಿಗೆ ದಾಖಲಾದರೆ ಅಂಥ ರೋಗಿಗಳಿಗೆ ಶೇಕಡಾ 59ರ ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುವದು. ಅಲ್ಲದೇ, ಚಿಕಿತ್ಸೆಗೆ ಬೇಕಾಗುವ ಔಷಧಿಗಳ ವೆಚ್ಚವನ್ನು ರೋಗಿಗಳೇ ಭರಿಸಬೇಕಾಗುತ್ತದೆ.ಬರಟಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಎಲ್ಲ ನಿವಾಸಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯಕೀಯ…

Read More

ಕೊಲ್ಹಾರದಲ್ಲಿ ತಹಶೀಲ್ದಾರ ಸಂತೋಷ ಮ್ಯಾಗೇರಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಯುದ್ಧ ಮಾಡಿ ದೇಶದಲ್ಲಿ ಸ್ವಾತಂತ್ರದ ಕಿಚ್ಚನ್ನು ಮೊಟ್ಟಮೊದಲಿಗೆ ಹಚ್ಚಿದವರು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಮೊದಲಿಗರು ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ಕೊಲ್ಹಾರ ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜದ ಸಹ ಯೋಗದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯ ಕಾರ್ಯಕ್ರಮದಲ್ಲಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರೊಂದಿಗೆ ಕಪ್ಪು ಕಾಣಿಕೆ ವಿಚಾರ ಬಂದಾಗ ಯುದ್ಧ ಮಾಡಿ ಬ್ರಿಟಿಷರಿಗೆ ಸೋಲಿನ ರುಚಿಯನ್ನು ತೋರಿಸಿದರು.  ಇವಳ ಶೌರ್ಯ, ತ್ಯಾಗ ಸಾಹಸವನ್ನು ಕಂಡು ಬ್ರಿಟಿಷರು ಬೆಚ್ಚಿದ್ದರು. ಕಿತ್ತೂರು ಒಂದು ಚಿಕ್ಕ ಸಂಸ್ಥಾನವಾದರೂ ಕೂಡ ಅದನ್ನು ಉಳಿಸಿಕೊಳ್ಳಲು ದೊಡ್ಡ ಹೋರಾಟವನ್ನು ಮಾಡಿದರು. ಚೆನ್ನಮ್ಮನ ಆಚಾರ ವಿಚಾರ ನಡೆ-ನುಡಿಗಳನ್ನು ಇಂದಿನ ಯುವಕರಿಗೆ ತಿಳಿಸಬೇಕಾಗಿದೆ. ಚೆನ್ನಮ್ಮ ಹಾಕಿ ಕೊಟ್ಟಂತ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದ ಜಾತ್ರೆಗಳು ವಿಶೇಷತೆಯಿಂದ ಕೂಡಿರುತ್ತವೆ. ದೀಪಾವಳಿ ಹಬ್ಬದ ನಿಮಿತ್ತ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಭೀರದೇವರ ಹಾಗೂ ಶ್ರೀ ಪರಮಾನಂದ ದೇವರ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿಭಾವದಲ್ಲಿ ಮಿಂದೇಳುವ ದೃಶ್ಯ ಮನಮೋಹಕವಾಗಿತ್ತು. ಇದು ಭಂಡಾರದೊಡೆಯನ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ.ದೀಪಾವಳಿ ಅಮವಾಸ್ಯೆ ದಿನ ಭೀರದೇವರ ಹಾಗೂ ಪಾಡ್ಯ ದಿನ ಪರಮಾನಂದ ದೇವರ ಶೃಂಗಾರ ಚೌಕಿಯೊಂದಿಗೆ ಸಾರವಾಡ ಗೊಂಬೆ ಕುಣಿತ,ಕರಡಿ ಮಜಲು, ಡೊಳ್ಳು ವಾದ್ಯದೊಂದಿಗೆ ಭಕ್ತರ ಮನೆಗೆ ದರ್ಶನ ಕೊಡುತ್ತಾ, ಗಂಗೆ ಸೀತಾಳದಲ್ಲಿ ಪೂಜೆ ಮುಗಿಸಿ, ಬಜಾರಕ್ಕೆ ಆಗಮನವಾಗಿ, ಅಲ್ಲಿ ಭಕ್ತರಿಗೆ ದರ್ಶನ ಕೊಟ್ಟು ನಂತರ ಗುಡಿಗೆ ಬರುವ ಸಂದರ್ಭದಲ್ಲಿ ಭಕ್ತರು ಚೌಕಿ ಮತ್ತು ಪಲ್ಲಕ್ಕಿಗಳ ಮೇಲೆ ರಾಶಿ ರಾಶಿಗಟ್ಟಲೆ ಭಂಡಾರ, ಖಾರಿಕ, ಕುರಿ ಉಣ್ಣೆಯನ್ನು ಹಾರಿಸುವುದು ವಾಡಿಕೆ ಎನ್ನುತ್ತಾರೆ ಜಾತ್ರಾ ಕಮೀಟಿಯ ಅಧ್ಯಕ್ಷ ಪ್ರಭುಲಿಂಗ ಹಂಡಿ.ಈ ಜಾತ್ರೆಯಲ್ಲಿ ಡೊಳ್ಳಿನ ಹಾಡಿಕೆ, ಭಾರ ಎತ್ತುವದು,…

Read More

ಅಖಿಲ ಭಾರತ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭವಗೋಷ್ಠಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವಕ್ಕೆ ರಾಮಾಯಣ ಮಹಾಕಾವ್ಯದ ಮೂಲಕ ಭಾರತೀಯ ಸಾಂಸ್ಕೃತಿಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾಕವಿ ಮಹರ್ಷಿ ವಾಲ್ಮೀಕಿಯವರಾಗಿದ್ದಾರೆ ಎಂದು ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಹೇಳಿದರು.ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣದಲ್ಲಿ ಸರ್ವಕಾಲಿಕ ಮೌಲ್ಯಗಳು, ಜನಪರ ನಿಲವುಗಳು, ಪೂರ್ಣಪ್ರಜ್ಞೆ ವಾಸ್ತವತೆಯ ಪ್ರತಿರೂಪ ಮೌಲ್ಯಗಳ ವಿವಿಧ ಸಂಸ್ಕೃತಿಗಳ ಸಮನ್ವಯತೆ ತಿಳುವಳಿಕೆಯ ವಿಶ್ವಕೋಶವಿದೆ. ರಾಮಾಯಣದ ತತ್ವ ಆದರ್ಶಗಳನ್ನು ಅದರಂತೆ ಮೂಲ ಅಂಶಗಳು ಬೆಳಕಿಗೆ ಬರಬೇಕಾಗಿದೆ. ಮೂಲಕಾವ್ಯದ ಪಾತ್ರಗಳ ಮೂಲಕ ಜವಾಬ್ದಾರಿ ಮತ್ತು ಕರ್ತವ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದರು.ಮಹಾಸಭೆಯ ಕೋಶಾಧ್ಯಕ್ಷ ಮ.ಗು. ಯಾದವಾಡ ಮಾತನಾಡಿ, ಇತಿಹಾಸವನ್ನು ತಿಳಿದುಕೊಂಡು ಸಮಾಜದ ಜನರನ್ನು ಜಾಗೃತಿ ಮಾಡಬೇಕು. ರಾಷ್ಟ್ರೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದರು.ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ…

Read More

ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸ್ ಕೋ.ಆಪರೇಟಿವ್ ಸೊಸೈಟಿ ಲಿಮಿಟೆಡ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸ್ ಕೋ.ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಕೇಂದ್ರ ಕಚೇರಿ ಆವರಣದಲ್ಲಿ ಶ್ರೀ ಸಿದ್ದರಾಮೇಶ್ವರ ಹಾಗೂ ಶ್ರೀ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೂತನ ನಾಮಫಲಕವನ್ನು ಸೊಸಾಯಿಟಿ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ಅನಾವರಣಗೊಳಿಸಿದರು.ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷವಾದ ಪ್ರಗತಿಯನ್ನು ಸಾಧಿಸಿ, ಸಿದ್ಧಸಿರಿ ಸೌಹಾರ್ದ್ ಸಹಕಾರಿ ಸಂಘವು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಂಡು, ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸ್ ಕೋ.ಆಪರೇಟಿವ್ ಸೊಸೈಟಿ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದೆ.ಈ ಸಂದರ್ಭದಲ್ಲಿ ಸೊಸಾಯಿಟಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ ಚವ್ಹಾಣ, ಅಶೋಕಗೌಡ ತೊರವಿ, ಸೋಮಶೇಖರ ಬಂಡಿ, ಬಸನಗೌಡ ಪಾಟೀಲ ನಾಗರಾಳಹುಲಿ, ಸಿದ್ದೇಶ್ವರ ಸಂಸ್ಥೆ ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ, ನಿರ್ದೇಶಕರಾದ ಎಸ್.ಎಚ್.ನಾಡಗೌಡ, ಬಸವರಾಜ ಗಣಿ,…

Read More

ನಿವರಗಿ ಗ್ರಾಮದಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚಿನ ಪಟಾಕಿಗಳ ಸದ್ದು ಉದಯರಶ್ಮಿ ದಿನಪತ್ರಿಕೆ ರೇವತಗಾಂವ: ಚಡಚಣ ತಾಲೂಕಿನ ನಿವರಗಿ ಗ್ರಾಮದಲ್ಲಿ ದೀಪಾವಳಿ ಪಾಡ್ಯದ ನಿಮಿತ್ತ ಬುಧವಾರದಂದು ಶ್ರೀ ಸಂಗಮೇಶ್ವರ ಹಾಗೂ ಶ್ರೀ ಮಹಾಲಕ್ಷ್ಮಿ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಬಹು ಅದ್ಧೂರಿಯಾಗಿ ನೆರವೇರಿತು.ಗ್ರಾಮದಲ್ಲಿ ನಸುಕಿನ ಜಾವ ೫ ಗಂಟೆಗೆ ಶ್ರೀ ಸಂಗಮೇಶ್ವರ ಹಾಗೂ ಮಹಾಲಕ್ಷ್ಮಿದೇವಿಗೆ ಪೂಜೆ, ಮಹಾಮಂಗಳಾರತಿ, ರುದ್ರಾಭಿಷೇಕ, ಉಡಿ ತುಂಬುವ, ಸಬೀನ್ ತಿರುಗುವ ಹಾಗೂ ನೈವೇದ್ಯ ಕಾರ್ಯಕ್ರಮ ನಡೆಯಿತು. ನಂತರ ಡೋಳ್ಳಿನ ಪದಗಳು ಜರುಗಿದವು.ಸಾಯಂಕಾಲ ೫ ಗಂಟೆಗೆ ಆಕರ್ಷಕ ಗೊಂಬೆ ಕುಣಿತಗಳೊಂದಿಗೆ, ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ಮಹಾಲಕ್ಷ್ಮಿ ದೇವರ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ದೊಡ್ಡ ಹಳ್ಳದ ವಿಶಾಲವಾದ ಮೈದಾನ ತಲುಪಿತು. ಈ ವೇಳೆ ಭೀಮಾ ನದಿಯ ದಂಡದ ಮೇಲೆ ನೆಲೆ ನಿಂತಿರುವ ಶ್ರೀ ಸಂಗಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಕೂಡಾ ಹಳ್ಳದ ವಿಶಾಲವಾದ ತಲುಪಿತು. ಸಾಯಂಕಾಲ ೬ ಗಂಟೆಯ ಸುಮಾರಿಗೆ ಅಣ್ಣ ತಂಗಿಯ ಭೇಟಿ ಕಾರ್ಯಕ್ರಮವು…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಅವಕಾಶಗಳ ಕೊರತೆಯಿಂದ ಇಂದು ಹಲವಾರು ಕಲಾವಿದರು ಎಲೆ ಮರೆಯ ಕಾಯಿಯಂತೆ ಬದುಕುತಿದ್ದು ಅವರಿಗೆ ಸ್ಥಳೀಯರೆ ಅವಕಾಶ ನೀಡಿ ಪ್ರೊತ್ಸಾಹಿಸಿದಲ್ಲಿ ಅವರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.ಗ್ರಾಮದ ದಸರಾ ದೀಪಾವಳಿ ಹಾಗೂ ಶ್ರೀ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರಾ ಮಹೋತ್ಸವದ ನಿಮಿತ್ಯ ಹಾಗೂ ಯಂಗ್ ಸ್ಟಾರ್ ಕಮೀಟಿ ಆಶ್ರಯದಲ್ಲಿ ಹಮ್ಮಿ ಕೊಳ್ಳಲಾಗಿದ್ದ “ಸಂಗೀತ ಸಂಭ್ರಮ-೨೦೨೫” ರಸಮಂಜರಿ ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಅವಕಾಶಗಳ ಸದುಪಯೋಗ ಮಾಡಿಕೊಂಡ ಹಲವಾರು ಸ್ಥಳೀಯ ಪ್ರತಿಭೆಗಳು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈ ದಿಸೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಪಕ್ಷಬೇಧ, ಜಾತಿಬೇಧ ಮಾಡದೆ ವರ್ಷಕ್ಕೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುವ ಚಿಮ್ಮಡ ಗ್ರಾಮಸ್ಥರ ಕಾರ್ಯ ಶ್ಲಾಘನೀಯವೆಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಂಕರ ಬಟಕುರ್ಕಿ, ಪಂಡಿತ ಭೋಸಲೆ ಮಾತನಾಡಿದರು.ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಓಂಕಾರ ಮಹಾರಾಜರು ಸಾನಿಧ್ಯ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶಿವಪ್ಪಾ…

Read More