Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ವಿಶ್ವಕ್ಕೆ ಆಧ್ಯಾತ್ಮದ ಮೂಲಕ ಜ್ಞಾನದ ಬೆಳಕನ್ನು ಹರಡಿಸಿದ ಪೂಜ್ಯ ಸಿದ್ದೇಶ್ವರ ಶ್ರೀಗಳ ಜನ್ಮ ಸ್ಥಳ ಬಿಜ್ಜರಗಿ ಗ್ರಾಮವು ದುಶ್ಚಟಗಳಿಂದ ದೂರವಿರಬೇಕು ಎಂದು ಬೀಳೂರ ವಿರಕ್ತಮಠದ ಚನ್ನಬಸವ ಗುರುಬಸವ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಬುಧವಾರ ಸಂಜೆ ನಡೆದ ಸಿದ್ದೇಶ್ವರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮವು ಸಾರಾಯಿ ಮತ್ತು ಮಾಂಸ ಮುಕ್ತವಾಗಬೇಕೆಂದು ಆಶಯ ವ್ಯಕ್ತಪಡಿಸಿದರು.ಸಿದ್ಧೇಶ್ವರ ಶ್ರೀಗಳ ಜಯಂತ್ಯುತ್ಸವದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕನಮಡಿ, ಜ್ಞಾನಯೋಗ ಲಯನ್ಸ್ ಕ್ಲಬ್ ಬೆಂಗಳೂರು ಮತ್ತು ಶಿವಾನುಭವ ಸೇವಾ ಸಮಿತಿ ಬಿಜ್ಜರಗಿ ಇವರ ಸಹಯೋಗದೊಂದಿಗೆ ಉಚಿತ ರಕ್ತದಾನ ಮತ್ತುಶ್ರ ತಪಾಸಣಾ ಶಿಬಿರವು ಮುಗಳಖೋಡ ಶ್ರೀಗಳಿಂದ ಉದ್ಘಾಟನೆಗೊಂಡಿತು.ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳವರ ಹಾಗೂ ಪೂಜ್ಯ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಗಳನ್ನು ಹೊತ್ತ ಎತ್ತಿನ ಬಂಡಿಗಳ ಮೆರವಣಿಗೆ ಸಕಲ ವಾದ್ಯಮೇಳ ಹಾಗೂ ಸದ್ಭಕ್ತರೊಂದಿಗೆ ಪೂಜ್ಯ ಸಿದ್ಧೇಶ್ವರ ಶ್ರೀಗಳ ಪೂರ್ವಾಶ್ರಮದ ಮನೆಯಿಂದ ಹೊರಟು ಊರಿನ ಪ್ರಮುಖ…

Read More

ಜಿ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಶಿಸಿ ಹೊಗುತ್ತಿರುವ ದೇಶಿ ಕ್ರೀಡೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಜಿ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.ಅವರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ೩ ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಸಿಂದಗಿ ನಗರದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಒಬ್ಬ ಕ್ರೀಡಾಪಟುವಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂದಿನ ಯುವಜನಾಂಗ ಗ್ರಾಮೀಣ ಮಟ್ಟದ ಕ್ರೀಡೆಗಳ ಕಡೆಗೆ ಒಲವು ಕಡಿಮೆಯಾಗುತ್ತಿದೆ. ಇಂದರಿಂದ ಅವುಗಳ ಅಸ್ಥಿತ್ವ ನಸಿಸಿ ಹೋಗುತ್ತದೆ. ಮೋಬೈಲ್‌ಗೀಳನ್ನು ಬಿಡಬೇಕು ಇಂತಹ ಕ್ರೀಡೆಗಳ ಕಡೆ ಹೆಚ್ಚು ಆಸಕ್ತಿ ತೋರಬೇಕು ಎಂದರು.ಈ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಸಿ.ಕೆ.ಹೊಸಮನಿ ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕ ವಿಜಯಪುರ ಅಕ್ಟೋಬರ್ 25/2025 ಶನಿವಾರ ಮಧ್ಯಾಹ್ನ 3 ಗಂಟೆವರೆಗೆ ವಿವಿಧ 25 ಸ್ಥಾನಗಳಿಗೆ ಒಟ್ಟು ಏಳು ನಾಮಪತ್ರ ಸಲ್ಲಿಕೆಯಾಗಿದ್ದು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಎರಡು, ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಒಂದು, ಜಿಲ್ಲಾ ಕಾರ್ಯಕಾರಿಣಿ ಸ್ಥಾನಕ್ಕೆ ನಾಲ್ಕು ಹೀಗೆ ಒಟ್ಟು ಏಳು ನಾಮಪತ್ರ ಸಲ್ಲಿಕೆಯಾಗಿವೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ತಿಳಿಸಿದ್ದಾರೆ.ನಾಮಪತ್ರ ಸಲ್ಲಿಸಲು ಅಕ್ಟೋಬರ್ 27 ಮಧ್ಯಾಹ್ನ 3 ಗಂಟೆವರಿಗೆ ಮಾತ್ರ ಕಾಲಾವಕಾಶ, 28 ರಂದು ನಾಮಪತ್ರ ಪರಿಶೀಲನೆ 30/10/2025 ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇದೆ. ನವೆಂಬರ್ 9 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ವರಿಗೆ ಮತದಾನ ಅಂದೆ ಮಧ್ಯಾಹ್ನ 3/30 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಡಾ.ಪುರುಷೋತ್ತಮಾನಂದಪುರಿ ಶ್ರೀ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯವಾಗಿದ್ದು, ಜಲಸಂಪನ್ಮೂಲ ಸಚಿವರಾಗಿ ಅವರು ಮಾಡಿದ ಕೆಲಸಗಳಿಂದಾಗಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಉಪ್ಪಾರ ಸಮಾಜ ಸೇವಾ ಸಂಘ ಆಯೋಜಿಸಿದ್ದ ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಬಸವಾದಿ ಶರಣರ ಆಶಯವಾಗಿತ್ತು. ಅನುಭವ ಮಂಟಪದ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಲಾಗಿತ್ತು. ಸಚಿವರು ಈ ತತ್ಚಗಳಡಿ ಕಾಯಕ ಮಾಡುತ್ತಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೇರಿ ಚುಕ್ಕಾಣಿ ಹಿಡಿಯಲಿ ಎಂದು‌‌ ಆಶೀರ್ವದಿಸಿದರುಬಸವನಾಡಿನಲ್ಲಿ ಜನರು ಜಾತಿಯ ಬದಲು ನೀತಿಯನ್ನು ನೋಡುತ್ತಾರೆ. ಸ್ವಾಮೀಜಿಗಳಿಂದ ಜ್ಞಾನ ಸವಿಯುತ್ತಾರೆ. ಫಲಾಪೇಕ್ಷೆಯಿಲ್ಲದೇ ಗುರುಗಳನ್ನು ಗೌರವಿಸುತ್ತಾರೆ.…

Read More

ಕ್ಷಮೆ ಕೋರಿದರೆ ಕನೇರಿ ಶ್ರೀಗಳು ದೊಡ್ಡವರಾಗುತ್ತಿದ್ದರು | ಶ್ರೀಗಳ ಪ್ರವೇಶ ನಿಷೇಧದ ಹಿಂದೆ ನನ್ನ ಯಾವ ಪಾತ್ರವೂ ಇಲ್ಲ | ಸಚಿವ ಡಾ.ಎಂ.ಬಿ. ಪಾಟೀಲ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನೇರಿ ಶ್ರೀಗಳು ತಾವು ಆಡಿರುವ ಮಾತಿಗೆ ಕ್ಷಮೆ ಕೋರಿದರೆ ನಾನೇ ಅವರ ಪಾದ ಮುಟ್ಟಿ ವಿಜಯಪುರಕ್ಕೆ ಕರೆ ತರುವೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷಮೆ ಕೋರಿದರೆ ಕನೇರಿ ಶ್ರೀಗಳು ದೊಡ್ಡವರಾಗುತ್ತಿದ್ದರು, ಈಗಲೂ ಅವರು ಕ್ಷಮೆ ಕೋರಿದರೆ ನಾನೇ ಅವರಿಗೆ ನಮಸ್ಕರಿಸಿ ಪಾದ ಮುಟ್ಟಿ ಅವರನ್ನು ವಿಜಯಪುರಕ್ಕೆ ಕರೆ ತರುವೆ, ಕನೇರಿ ಶ್ರೀಗಳು ನನಗೂ ಆತ್ಮೀಯರು, ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಶಿಷ್ಯರು, ನಾನು ಸಹ ಶ್ರೀಗಳ ಶಿಷ್ಯನೇ ಎಂದರು.ಆಡುಮಾತಿನಲ್ಲಿ ಅವರು ಪದಪ್ರಯೋಗ ಮಾಡಿದ್ದಾರೆ ಎನ್ನುವ ವಾದರಲ್ಲಿ ಹುರುಳಿಲ್ಲ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಅನೇಕ ದಶಕಗಳಿಂದ ಆಡುಭಾಷೆಯಲ್ಲಿಯೇ ಪ್ರವಚನ ಮಾಡಿದವರು, ಅವರು ಎಂದೂ ಈ ರೀತಿಯ ಪದ ಪ್ರಯೋಗ ಒಂದೆಡೆ ಇರಲಿ ಅದರ…

Read More

ಬಿಜೆಪಿ ನಾಯಕರಿಗೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಸವಾಲು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಂಗ್ರೆಸ್ ಪಕ್ಷ ಹಿಂದೂ ಧರ್ಮವನ್ನು ಒಡೆದಿದೆ ಎಂದು ಬಾಯಿಗೆ ಬಂದoತೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಇದನ್ನು ಸಾಬೀತುಪಡಿಸಲಿ ನೋಡೋಣ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಸವಾಲು ಹಾಕಿದರು.ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಧರ್ಮ ಒಡೆಯುತ್ತಿದೆ ಎಂದು ಆರೋಪಿಸಿದ್ದಾರೆ, ಕಾಂಗ್ರೆಸ್ ನಾಯಕರು ಹಿಂದು ಧರ್ಮ ಎಲ್ಲಿ ಹೇಗೆ ಒಡೆಯುತ್ತಿದ್ದಾರೆ ಎಂದು ಸಾಬೀತುಪಡಿಸಿ ಎಂದು ಸವಾಲು ಹಾಕಿದರು.ಕಾಂಗ್ರೆಸ್ ಸರ್ಕಾರ ಬ್ರಿಟಿಷ್ ಮಾದರಿ ಆಡಳಿತ ಅಳವಡಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸಂವಿಧಾನದ ಮೇಲೆ ನಂಬಿಕೆ ಇರಿಸಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಸರ್ಕಾರ ನಡೆಸುತ್ತಿದೆ. ಮನುವಾದಿ ಪ್ರಕಾರ ರಾಷ್ಟ್ರ ನಡೆಯಬೇಕೆಂಬ ಬಿಜೆಪಿಗರ ಉದ್ದೇಶ ನಡೆಯಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯ ಇರಿಸಿಕೊಂಡು ಕಾಂಗ್ರೆಸ್ ನಡೆಸುತ್ತಿದೆ, ಮನುವಾದಿ ಆಧರಿಸಿ ಸರ್ಕಾರ ನಡೆಸಬೇಕು ಎಂಬುದು ಬಿಜೆಪಿಗರ ನಿಲುವು, ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ್ಯತ್ನಾಳ್ ಹಲಾಲ್ ಪ್ರಮಾಣ ಪತ್ರ ಹೊಂದಿರುವ ಸಂಸ್ಥೆಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಸವಿವರವಾಗಿ ಪತ್ರ ಬರೆದಿದ್ದಾರೆ.ಉತ್ತರ ಪ್ರದೇಶದಲ್ಲಿ ಈಗಾಗಲೇ ಹಲಾಲ್ ಉತ್ಪನ್ನಗಳನ್ನು ನಿಷೇದಿಸಲಾಗಿದೆ, ಇದೆ ರೀತಿ ದೇಶಾದ್ಯಂತ ಹಲಾಲ್ ಉತ್ಪನ್ನಗಳು ಹಾಗೂ ಅದನ್ನು ಪ್ರಮಾಣೀಕರಿಸುವ ಸಂಸ್ಥೆಗಳು ನಿಷೇದವಾಗಬೇಕೆಂದು ಮಾನ್ಯ ಗೃಹ ಸಚಿವರಲ್ಲಿ ಆಗ್ರಹಿಸುತ್ತೇನೆ ಎಂದು ಪತ್ರ ಬರೆಯುವ ಮೂಲಕ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಚ್ಛ ಭಾರತ ಮಿಷನ್-2.0ರ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ವತಿಯಿಂದ ಅಕ್ಟೋಬರ್ 26 ರಂದು ಸೈಕ್ಲೊಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.ಸೈಕ್ಲೊಥಾನ್ ಕಾರ್ಯಕ್ರಮವು ಅಂದು ಬೆಳಿಗ್ಗೆ 6.30 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭಗೊಂಡು, ಗೋಲಗುಮ್ಮಟ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಶ್ರೀ ಬಿ.ಎಮ್.ಪಾಟೀಲ ವೃತ್ತ, ಬಿ.ಎಲ್.ಡಿ.ಇ.ಕ್ಯಾಂಪಸ್ ಲಿಂಗದ ಗುಡಿ, ಶ್ರೀ ಸಿದ್ದೇಶ್ವರ ದೇವಸ್ಥಾನ, ಮಹಾತ್ಮಾ ಗಾಂಧಿ ವೃತ್ತದಿಂದ ಸಂಚರಿಸಿ. ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ.ನಗರದ ಯುವ ಸಮೂಹ, ಸಾರ್ವಜನಿಕರು ಈ ಸೈಕ್ಲೋಥಾನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಇಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಪಠ್ಯದ ಲೇಖಕರೊಂದಿಗೆ ಸಂವಾದ’ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಇಂಡಿ: ಕನ್ನಡ ನೆಲದ ಆಸ್ಮಿತೆಯನ್ನು ಗಡಿಭಾಗದ ಶಾಲಾಕಾಲೇಜುಗಳು ನಿರ್ವಹಿಸುತ್ತಿರುವುದು ಅತ್ಯಂತ ಸಮಾಧಾನಕರ ಸಂಗತಿ, ಕನ್ನಡತನ ಮರೆತು ಹೋಗುವ ವಿಷಾಧದ ದಿನಗಳಿವು ಎಂದು ಬೆಂಗಳೂರು ಜೈನ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ರಾಜಕುಮಾರ ಬಡಿಗೇರ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ” ಪಠ್ಯದ ಲೇಖಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಓದು ಮತ್ತು ಬರಹವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ನಡೆಯಬೇಕಾದ ಸಂಗತಿಯಾಗಿದ್ದು, ಲೇಖಕರೊಂದಿಗೆ ವಿದ್ಯಾರ್ಥಿಗಳು ಬೆರೆಯುವ ಮತ್ತು ಪಠ್ಯದ ಜೊತೆಗೆ ಸಾಂಸ್ಕೃತಿಕ ಮುಖಾಮುಖಿಯಾಗುವ ಕೆಲಸ ಇಲ್ಲಿ ನಡೆಯುತ್ತಿರುವುದು ಮಾದರಿಯಾಗಿ ನಾಡಿನ ಶೈಕ್ಷಣಿಕ ವಲಯಗಳಲ್ಲಿ ಅನುಸರಿಸಬೇಕಾದ ಮಹತ್ವದ ಕಾರ್ಯವೆಂದು ಬಣ್ಣಿಸಿದರು.ಪಠ್ಯದ ಲೇಖಕ ಡಾ.ಪ್ರಕಾಶ ಖಾಡೆ ಮಾತನಾಡಿ ‘ ಪಠ್ಯ ಮತ್ತು ಕವಿ’ ಸಮಪಾತಳಿಯ ಭಿನ್ನ ಆಲೋಚನೆಯ ಭಾಗವಾಗಿರುತ್ತಾನೆ, ಸದಾ ಪಠ್ಯದ ಒಂದು ಭಾಗವಾಗಿ ನೆಲೆಯೂರಿರುತ್ತಾನೆ ಎಂದರು.ಇನ್ನೊಬ್ಬ ಕತೆಗಾರ, ಬಿಎ…

Read More

ಪ್ರೇಮ ಬರಹ ಕೋಟಿ ತರಹ(ಪ್ರಣಯ ಪಕ್ಷಿಗಳ ಮೋಹಕ ಪದಗಳ ಗುಚ್ಛ) ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಳೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮಿಂಚು ಕಂಗಳ ಚೆಲುವೆನೀನು ಕಣ್ಣಿಗೆ ಬಿದ್ದಾಗಲಿಂದ ಮನಸ್ಸು ಹಿಡಿತಕೆ ಸಿಗುತಿಲ್ಲ. ಹೊತ್ತು ಗೊತ್ತು ಗೊತ್ತಿಲ್ಲದೇ ಜೀವ ತಿಂತಿದೆ. ಕನಸಿನ ಮುತ್ತುಗಳನು ಪೋಣಿಸುತಿದೆ. ಜಗತ್ತಿನ ಗತ್ತು ಗೊತ್ತಿರದ ಹರೆಯದ ಹೃದಯಕೆ ನಿನ್ನ ಒಡನಾಟವೇ ಬೇಕಂತೆ. ಕಿರು ಬೆರಳಿನಲ್ಲೇ ಜೇನಿನ ಜಾತ್ರೆಗೆ ಕರೆಯುವ ಅಂದಗಾತಿಯ ಮೋಹಕೆ ಸೋತಿದೆ ಈ ಹೃದಯ. ಕಣ್ಣಲ್ಲೇ ಕಚಗುಳಿ ಇಡುವ ನಿನಗಾಗಿಯೇ ರಾಶಿ ರಾಶಿ ಕನಸುಗಳ ಗುಡ್ಡೆ ಹಾಕಿರುವೆ. ನಿನ್ನ ಒಲವಿನ ಪೂಜೆಗೆ ಹೃದಯ ವೇದಿಕೆ ಸಿದ್ಧಗೊಳಿಸಿರುವೆ. ನೂರಾರು ಬಯಕೆಗಳನು ಮನಸ್ಸಿನಲ್ಲಿ ಬೆಚ್ಚಗೆ ಸಾಕುತಿರುವೆ ಕಣೆ. ಕೆಂಪಾದ ಕೆನ್ನೆಗೆ ಗಾಯ ಮಾಡಲು ಕಾದಿರುವೆ. ಅಲೆದಾಡುವ ಮನಸ್ಸಿಗೆ ಮತ್ತಷ್ಟು ಅಲೆದಾಟ ಹಚ್ಚಿರುವ ಚೆಲುವಿ ನೀನು. ಮರುಳಾದ ಹೃದಯಕೆ ನಿನ್ನ ಕೆಂದುಟಿಯ ರಂಗು ಬೇಕಂತೆ. ಮಳೆ ಚಳಿ ಬಿಸಿಲು ಯಾವುದೇ ಇರಲಿ ಅಂತರಂಗ ನಿನ್ನ ಚೆಲುವಿನ ಆಹ್ವಾನಕೆ ಹಂಬಲಿಸುತಿದೆ. ಕಾಮನ ಬಿಲ್ಲಿನ…

Read More