ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ ಪ್ರತಿಭಾ ಅಕಾಡೆಮಿ (ರಿ), ವಿಜಯಪುರ ಇವರಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಿ. 21 ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 140 ಮಂದಿ ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಈ ಸಮಾರಂಭದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ವಿತರಿಸಲಾಗುವುದು ಎಂದು ಕರ್ನಾಟಕ ಪ್ರತಿಭಾ ಅಕಾಡೆಮಿ (ರಿ), ವಿಜಯಪುರ ಜಿಲ್ಲಾ ಸಂಚಾಲಕರಾದ ಚನ್ನು ಕಟ್ಟಿಮನಿ ಅವರು ಹೇಳಿದರು.
ಕಾರ್ಯಕ್ರಮವು ವೀರಶೈವ ಲಿಂಗಾಯತ ಮಹಾ ಸಭಾಭವನ, ಬಂಜಾರ ಕ್ರಾಸ್, ಸೋಲಾಪುರ ರಸ್ತೆ, ವಿಜಯಪುರದಲ್ಲಿ ನಡೆಯಲಿದೆ.ಮಾನವ ಬಂಧುತ್ವ ವೇದಿಕೆಯ ವಿಭಾಗಿಯ ಸಂಚಾಲಕರಾದ ಪ್ರಭುಗೌಡ ಪಾಟೀಲ ಅವರ ಸಹಯೋಗದೊಂದಿಗೆ ಮತ್ತು ಉಧ್ಘಾಟಕರಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಮತ್ತು ಬಸವ ಚಿಂತಕರು ಮತ್ತು ವಿಮರ್ಶಕರಾದ ಡಾ| ಜೆ.ಎಸ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರಗುವದು ಎಂದರು.
ಈ ಕಾರ್ಯಕ್ರಮಕ್ಕೆ ಚಡಚಣ ತಾಲೂಕಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಾದ ಸ್ಪೂರ್ತಿ ಶಂಕರ ಹಾವಿನಾಳ, ಲಾಲಸಾಬ ಇಮಾನಪೀರ ಮುಲ್ಲಾ, ಯಲ್ಲಪ್ಪ ಆಸಂಗಿಹಾಳ, ಪ್ರೇಮ ಉಮೇಶ ಹೂಗಾರ, ಸುಬ್ಬಲಕ್ಷ್ಮಿ ವಾಲಿಕಾರ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳಾದ ಪುಷ್ಪಾ ಮಾಳಪ್ಪ ಬಗಲಿ,ಸೌಜನ್ಯ ರೂಪಣ್ಣ ದೋಣಿ, ನಂದಿನಿ ರಮೇಶ ಶಿಂಧೆ, ಧರೆಪ್ಪಗೌಡ ಏಳಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಚಡಚಣ ತಾಲೂಕಿನ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಮಹಾದೇವ ಬನಸೋಡೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತಾಲೂಕಿನ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸನ್ಮಾನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪೋಷಕರು ಹಾಗೂ ಬಂಧು–ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಪ್ರತಿಭಾ ಅಕಾಡೆಮಿ ವಿಜಯಪುರ ಜಿಲ್ಲಾ ಸಂಚಾಲಕರಾದ ಚನ್ನು ಕಟ್ಟಿಮನಿ ಅವರು ಮನವಿ ಮಾಡಿದ್ದಾರೆ.
