ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಗೆ ಇ ಟೆಕ್ಸ್ ಬ್ರೇನ್ ಫೀಡ್ ಮ್ಯಾಗಝಿನ್ ಅಕಾಡೆಮಿಯವರು ಪ್ರತಿ ವರ್ಷ ಕೊಡುವ ಬೆಸ್ಟ್ ಅಕಾಡೆಮಿಕ್ ಎಕ್ಸ್ ಲೆನ್ಸ್ 2025-26 ವಿಭಾಗದ ಸ್ಕೂಲ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ಸ್ಟೆಮ್/ಸ್ಟೀಮ್ (STEM/STEAM ) ಇಂಪ್ಲಿಮೆಂಟೇಶನ್ ಮತ್ತು ಇನ್ನೋವೇಟಿವ್ ಕಲಿಕಾ ಅನುಷ್ಠಾನದ ಮಾನದಂಡ, ಅಲ್ಲದೇ, ಈ ಶಾಲೆಯಲ್ಲಿ ಅಳವಡಿಸಲಾದ ಎಟಿಎಲ್ ಲ್ಯಾಬ್, ಲಾಂಗ್ವೇಜ್ ಲ್ಯಾಬ್ ಮತ್ತು ತರಗತಿಗಳಲ್ಲಿ ಕಂಟ್ರೋಲ್ ಪ್ಯಾನಲ್ ಬೋರ್ಡಗಳನ್ನು ಅಳವಡಿಸಿ ಮಕ್ಕಳಿಗೆ ಅತ್ಯಾಧುನಿಕ ರೀತಿಯಲ್ಲಿ ಉನ್ನತಮಟ್ಟದ ಶಿಕ್ಷಣ ನೀಡುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತೆಲಂಗಾಣ ರಾಜ್ಯದ ಹೈದರಾಬಾದಿನಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದದಲ್ಲಿ ಅಕಾಡೆಮಿದ ಅಧಿಕಾರಿಗಳು ಶಾಲೆಯ ಪ್ರಾಚಾರ್ಯ ಡಾ. ಶೈಜೂ ಕೆ. ನಾಯರ ಪ್ರಶಸ್ತಿ ಸ್ವೀಕರಿಸಿದರು.
ಶಾಲೆಗೆ ಪ್ರಶಸ್ತಿ ಲಭಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಆಡಳಿತಾಧಿಕಾರಿ ಡಾ. ಅಶೋಕ ಎಂ. ಲಿಮಕರ, ಶಾಲಾ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

