ಬಾಗಲಕೋಟ ವಿಶ್ವವಿದ್ಯಾಲಯ ಕುಲಸಚಿವ ಡಾ. ಜೌದ್ರಾಮ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳಿಗೆ ಬರೀ ಅಂಕಗಳು ಮುಖ್ಯ ಅಲ್ಲ, ಸರ್ವತೋಮುಖ ಅಭಿವೃದ್ಧಿಗೆ ನೈಜ ಜ್ಞಾನ ಅವಶ್ಯ ಎಂದು ಬಾಗಲಕೋಟ ವಿಶ್ವವಿದ್ಯಾಲಯ ಕುಲಸಚಿವ ಡಾ. ಜೌದ್ರಾಮ ಹೇಳಿದ್ದಾರೆ.
ಮಂಗಳವಾರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ನಿರ್ವಹಣೆ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಪ್ರಥಮ ವರ್ಷದ ಎಂ.ಬಿ.ಎ. ವಿದ್ಯಾರ್ಥಿಗಳಿಗಾಗಿ ನಡೆದ ಪರಿಚಯಾತ್ಮಕ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯ ಅಧ್ಯಯನ, ಫಲಿತಾಂಶಕ್ಕೆ ಗಮನ ನೀಡದೇ ಸಾಮಾನ್ಯ ಜ್ಞಾನ, ವ್ಯವಹಾರ ಜ್ಞಾನಕ್ಕೂ ಪ್ರಾಶಸ್ತ್ಯ ನೀಡಬೇಕು. ಜ್ಞಾನದಿಂದ ಮಾತ್ರ ಎಲ್ಲವನ್ನು ಗೆಲ್ಲಬಹುದು ಎಂದು ಅವರು ಹೇಳಿದರು.
ಪ್ರಾಚಾರ್ಯ ಡಾ. ಎಸ್. ಬಿ. ಕಮತಿ ಮಾತನಾಡಿ, ನಮ್ಮಲ್ಲಿರುವ ಜ್ಞಾನದಿಂದ ಬದುಕು ಸುಂದರವಾಗಲು ಬುದ್ಧಿವಂತಿಕೆ ಬೇಕು. ಸಂದರ್ಭಾನುಸಾರ ಜ್ಞಾನವನ್ನು ಬಳಸಿದಾಗ ಕಾರ್ಯ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಅಶ್ವಿನಿ ಯರನಾಳ, ಡಾ. ಗೌರಿ ಕಲಗೊಂಡ, ಪ್ರೊ. ಲಕ್ಷ್ಮಣ ಪವಾರ, ಪ್ರೊ. ಗಂಗಾಧರ ಮಮದಾಪುರ, ಪ್ರೊ. ರವಿ ಚವ್ಹಾಣ, ಪವಿತ್ರಾ ಜಾಧವ ಹಾಗೂ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರಾವಣಿ ಹಳ್ಳಿ ಪ್ರಾರ್ಥಿಸಿದರು, ಪ್ರಭಾರಿ ನಿರ್ದೇಶಕ ಪ್ರೊ. ಮುರುಗೇಶ ವೈ. ಪಟ್ಟಣಶೆಟ್ಟಿ ಸ್ವಾಗತಿಸಿದರು. ನೇಮಕಾತಿ ವಿಭಾಗದ ಅಧಿಕಾರಿ ಡಾ. ಮಹಾಂತೇಶ ಕನಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಗಣಿ ವಂದಿಸಿದರು.

