Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆರ್‌ಬಿಐ ಅಧೀನದಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಪೈನಾನ್ಸ್ಗಳಲ್ಲಿ ಏ.೧೪ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವಂತೆ ಆದೇಶ ನೀಡಬೇಕು ಎಂದು ಭೀಮ ಸೇನೆ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಭೀಮ್ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಅನಿಲ ಹೊಸಮನಿ, ಸಮಾಜ ಹೋರಾಟಗಾರ ಹರ್ಷವರ್ಧನ ಪೂಜಾರಿ ಮಾತನಾಡಿ, ಸಿಂದಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಆರ್‌ಬಿಐ ಅಧೀನದಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಪೈನಾನ್ಸ್ಗಳಲ್ಲಿ ಏ.೧೪ ರಂದು ಕಡ್ಡಾಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸುವಂತೆ ಲಿಖಿತ ರೂಪದಲ್ಲಿ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡರು.ಮನವಿ ಸ್ವೀಕರಿಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಆರ್‌ಬಿಐ ಅಧೀನದಲ್ಲಿ ಬರುವ ಆರ್ಥಿಕ ವ್ಯವಹಾರ ಸಂಸ್ಥೆಗಳಲ್ಲಿ ಏ.೧೪ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆದೇಶ ಆಚರಿಸುವಂತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ತಾಲೂಕಾಧ್ಯಕ್ಷ ಪ್ರಜ್ವಲ್ ಮಲ್ಲಾರಿ, ದ್ಯಾವಪ್ಪ ಕುದರಗುಂಡ, ಲಕ್ಷ್ಮಣ ಓಲೇಕಾರ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಕುಮಾರಿ ನೀಲಮ್ಮ ನಿಂಗಪ್ಪ ಬಿಸನಾಳ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.ಅಸ್ಕಿ ಗ್ರಾಮದ ನಿಂಗಪ್ಪ ಬಿಸನಾಳ ಎಂಬ ಬಡ ರೈತರ ಮಗಳಾದ ಇವರು ಮೂಲತ ಕೃಷಿ ಕುಟುಂಬದಿಂದ ಬಂದಿದ್ದು ಇವರ ತಂದೆ ಪ್ರತಿದಿನವೂ ಕೂಲಿ ಮಾಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಗಳಿರಳು ಶ್ರಮಿಸುತ್ತಿದ್ದಾರೆ. ಇವರ ಮಗಳಾದ ಕುಮಾರಿ ನೀಲಮ್ಮ ಬೀಸನಾಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಕನ್ನಡ 98 ಇಂಗ್ಲೀಷ 86 ಇತಿಹಾಸ 97 ಅರ್ಥಶಾಸ್ತ್ರ 95 ಸಮಾಜಶಾಸ್ತ್ರ 93 ರಾಜ್ಯಶಾಸ್ತ್ರ 100ಕೆ 100 ಅಂಕಗಳೊಂದಿಗೆ ಶೇಕಡಾ 94.83 ರಷ್ಟು ಅಂಕಗಳನ್ನು ಗಳಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಹತ್ತಿರ ಟಂ ಟಂ ನಲ್ಲಿ ಸಾಗಿಸುತ್ತಿದ್ದ ೫೦ ಕೆಜಿ ಒಂದು ಚೀಲದ ೩೦ ಚೀಲಗಳನ್ನು ವಶ ಪಡಿಸಿಕೊಂಡಿದ್ದು ಅದರ ಅಂದಾಜು ಮೌಲ್ಯ ೪೨ ಸಾವಿರ ರೂ ಇದೆ ಆಹಾರ ನೀರಿಕ್ಷಕ ಪರಮಾನಂದ ಹೂಗಾರ ಜಪ್ತಿ ಮಾಡಿದ್ದಾರೆ.ಇಂಡಿಯ ತಹಸೀಲ್ದಾರರು ನೀಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದುಟಂ ಟಂ ನಲ್ಲಿ ಸಾಗಿಸುತ್ತಿದ್ದ ಅಕ್ಕಿ ಸಮೇತ ಸಾಬೀರ ಬಾಗವಾನ ಮತ್ತು ಯೂನುಶ ಚಾಂದ ಬಾಗವಾನ ಸೋಲಾಪುರದ ಮೂಳೇಗಾವದವರನ್ನು ಬಂಧಿಸಿ ಅಕ್ಕಿ ವಶ ಮಾಡಿಕೊಂಡಿದ್ದಾರೆ.ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಕ್ತದಾನದಿಂದ ರಕ್ತ ಕಳೆದುಕೊಂಡ ರೋಗಿಗಳಿಗೆ ಅನುಕೂಲವಾಗುವ ಜತೆಗೆ ರಕ್ತದಾನ ಮಾಡುವವರ ಆರೋಗ್ಯ ಉತ್ತಮ ವಾಗಲಿದೆ ಎಂದು ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ|| ಶಿವಾನಂದ ಸೋನಾವನೆ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ೨೦೧೪ ರಲ್ಲಿ ಸಾಲೋಟಗಿಯ ಶಿವಯೋಗೀಶ್ವರ ಮಾಧ್ಯಮಿಕ ಶಾಲೆಯಲ್ಲಿ ಓದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗ ಮತ್ತು ಶ್ರೀ ಶಿವಯೋಗೀಶ್ವರ ಜಾತ್ರಾ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ಪ್ರತಿಯೊಬ್ಬರು ರಕ್ತದಾನ ಮಾಡಬಹುದು. ಸಂಘಟನೆಗಳ ಮೂಲಕ ಯುವಕರು ರಕ್ತದಾನ ಮಾಡುವದರಿಂದ ರಕ್ತದ ಅಗತ್ಯ ಇರುವವರಿಗೆ ಅನುಕೂಲವಾಗಲಿದೆ. ರಕ್ತ ತಯಾರಿಸಲು ಸಾದ್ಯವಿಲ್ಲ, ಮನುಷ್ಯನಿಂದಲೇ ಇನ್ನೊಬ್ಬರಿಗೆ ರಕ್ತವನ್ನು ನೀಡಬೇಕಾಗಿದೆ ಎಂದರು.೨೧೦ ಜನರ ಆರೋಗ್ಯ ತಪಾಸಣೆ, ೪೨ ಜನರ ನೇತ್ರ ತಪಾಸಣೆ ಮತ್ತು ೪೫ ಜನರಿಂದ ರಕ್ತದಾನ ಮಾಡಲಾಯಿತು.ಆರೋಗ್ಯ ಇಲಾಖೆಯ ವೈ.ವಿ.ಪೂಜಾರಿ , ಡಾ.ಲಕ್ಷ್ಮೀಕಾಂತ ಮೇತ್ರಿ, ಎಸ್ಸೆಸ್ಸೆಲ್ಸಿ ಗೆಳೆಯರ ಬಳಗದ ಇಂದ್ರಕುಮಾರ ವಾಲಿಕಾರ, ಕೇದಾರನಾಥ ಅಕ್ಕಲಕೋಟ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸಿದ್ದಸಿರಿ ಸಹಕಾರಿ ಸೌಹಾರ್ಧ ರಾಜ್ಯದಲ್ಲಿ ಸೌಹಾರ್ಧದಲ್ಲಿ ಒಂದನೆಯ ಸ್ಥಾನದಲ್ಲಿದ್ದು ದೇಶದಲ್ಲಿ ಹತ್ತನೆಯ ಸ್ಥಾನದಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಸಿದ್ದಸಿರಿ ನಿಮ್ಮೆಲ್ಲರ ಸಹಕಾರದಿಂದ ದೇಶದಲ್ಲಿಯೇ ಒಂದನೆಯ ಸ್ಥಾನಕ್ಕೆ ಬರಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹೇಳಿದರು.ತಾಲೂಕಿನ ನಾದ ಗ್ರಾಮದಲ್ಲಿ ಸಿದ್ದಸಿರಿ ಸೌಹಾರ್ಧ ನೂತನ ಸಹಕಾರಿ ಸೌಹಾರ್ಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಸಾಲೋಟಗಿಯ ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಗುರುದೇವಾಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ ಇಂಡಿ ತಾಲೂಕಿನಲ್ಲಿ ಸಿದ್ದಸಿರಿ ಸಂಸ್ಥೆಯ ೧೫ ಶಾಖೆಗಳನ್ನು ಹೊಂದಿದ್ದು ನಾದ ತಾಂಬಾ ನೂತನ ಕಟ್ಟಡ ಸೇರಿ ೮ ಶಾಖೆಗಳಿಗೆ ಸ್ವಂತ ಕಟ್ಟಡಗಳಿವೆ. ಇಂಡಿ ತಾಲೂನಿನಲ್ಲಿನ ಶಾಖೆಗಳಲ್ಲಿ ೪೮೪ ಕೋಟಿ ೮೮ ಲಕ್ಷ ಠೇವಣಿ ಹೊಂದಿವೆ. ಅಲ್ಲದೆ ಸಿಧ್ಧಸಿರಿಯ ಎಲ್ಲ ಶಾಖೆಗಳನ್ನು ಒಳಗೊಂಡು ೫೨೨೦ ಕೋಟಿ ೨೫ ಲಕ್ಷ ರೂಪಾಯಿ ಠೇವಣಿ ಇದೆ. ರಾಜ್ಯಾದ್ಯಂತ ೨೧೨ ಶಾಖೆಗಳನ್ನು ಹೊಂದಿದ್ದು ೫ ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದ್ದು ಹೆಮ್ಮೆಯ ವಿಷಯ ಎಂದರು.ನಾದ ಕೆಡಿ ಸಂಸ್ಥಾನ ಮಠದ ಶಿವಾನಂದ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳೆಂದರೆ ಮೂಗುಮುರಿಯುವವರೇ ಜಾಸ್ತಿ ಆದರೆ ನಿಜವಾದ ಗುಣಾತ್ಮಕ ಬದಲಾವಣೆಗಳು ಇರುವುದು ಸರಕಾರಿ ಕಾಲೇಜುಗಳಲ್ಲಿ ಎಂಬುದನ್ನ ಸರಕಾರಿ ಪದವಿ ಪೂರ್ವ ಕಾಲೇಜು, ಕೂಡಗಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ ೨೦೨೫- ೨೬ ನೇ ಸಾಲಿನ ಪಿಯುಸಿ ದ್ವಿತೀಯ ಫಲಿತಾಂಶ ಶೇಕಡ ೯೫.೫೨ ರಷ್ಟಾಗಿದ್ದು ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮದ ಗುರು ಹಿರಿಯರು ಶುಭ ಹಾರೈಸಿದ್ದಾರೆ.ಇಡೀ ಕಾಲೇಜಿಗೆ ಲಕ್ಷ್ಮಿಹಂಗರಗಿ ೫೬೬, ಭಾಗ್ಯಶ್ರೀ ಮೋಡೆ ೫೪೯, ಶಿಲ್ಪಾ ಆಸಂಗಿ ೫೪೬, ರಕ್ಷಿತಾ ಇಬ್ರಾಹಿಂಪುರ್ ೫೪೫, ರೇಖಾ ಜಲದಿ ೫೨೯, ಶೃತಿ ಹಂಗರಗಿ ೫೧೩, ರಕ್ಷಿತಾ ತೋಳಮಟ್ಟಿ ೫೧೩, ಶಿವನಗೌಡ ಪಾಟೀಲ್ ೫೦೬ ಹಾಗೂ ಪ್ರೇರಣಾ ಹಿರೇಮಠ ೪೯೯, ಮನೋಜ ಸಾಲಹಳ್ಳಿ ೪೯೯ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.೬೭ ವಿದ್ಯಾರ್ಥಿ ಗಳಲ್ಲಿ ೬೫ ವಿದ್ಯಾರ್ಥಿಗಳು ಪಾಸಾಗೋದರ ಮೂಲಕ ಖುಷಿಪಟ್ಟಿದ್ದಾರೆ. ೦೭ ವಿದ್ಯಾರ್ಥಿಗಳು…

Read More

ಲೇಖನ- ಅವಿನಾಶ ಸೆರೆಮನಿಬೈಲಹೊಂಗಲ ಉದಯರಶ್ಮಿ ದಿನಪತ್ರಿಕೆ ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿಕಾತುರದಿಂದ ಕಾಯುತ್ತಿದ್ದಾರೆ. ಮೊದಲು ದ್ವಿತೀಯ ಪಿಯುಸಿ ನಂತರ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತದೆ.ಫಲಿತಾಂಶ ಎಂದಾಕ್ಷಣ ಬಹಳಷ್ಟು ವಿದ್ಯಾರ್ಥಿಗಳ ಎದೆಯಲಿ ಗುಡುಗು ಸಿಡಿಲಿನ ಮಿಂಚು, ಎದೆಯಲ್ಲಿ ಲಬ್ ಡಬ್ ಆರಂಭವಾಗಿರುತ್ತದೆ.ಪರೀಕ್ಷೆಗಳು ಒಂದು ಭಾಗ ಮಾತ್ರವಿದ್ಯಾರ್ಥಿಗಳೆ ನಮ್ಮ ಜೀವನದಲಿ ನೂರಾರು ಪರೀಕ್ಷೆಗಳು ಎದುರಾಗುತ್ತವೆ ಅದರಲ್ಲಿ ವಿದ್ಯಾರ್ಥಿ ಜೀವನದ ಪರೀಕ್ಷೆಗಳು ಒಂದು ಭಾಗ ಮಾತ್ರ. ಪರೀಕ್ಷೆ ಎಂಬುದು ನಮ್ಮೊಳಗಿನ ವಿಷಯದ ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸಾಧನ. ಪರೀಕ್ಷೆ ಎಂದರೆ ಬಹುತೇಕ ವಿದ್ಯಾರ್ಥಿಗಳಿಗೆ ಭಯ, ಒತ್ತಡ, ಆತಂಕವನ್ನುಂಟುಮಾಡುವ ಒಂದು ಪದ. ಆದರೆ ನಿಜವಾದ ಅರ್ಥದಲ್ಲಿ ಪರೀಕ್ಷೆ ಎಂದರೆ ಕೇವಲ ಅಂಕಗಳ ಅಳತೆಗೋಲು ಅಲ್ಲ; ಅದು ನಮ್ಮ ಜ್ಞಾನ, ಶ್ರಮ, ಶಿಸ್ತಿನ ಪ್ರತಿಬಿಂಬವಾಗಿದೆ. ಮರೀಕ್ಷೆ ಫಲಿತಾಂಶ ಜೀವನದ ಫಲಿತಾಂಶವಲ್ಲಇಂದಿನ ಸಮಾಜದಲ್ಲಿ ಪರೀಕ್ಷೆಯ ಫಲಿತಾಂಶಕ್ಕೆ ಅತಿಯಾದ ಮಹತ್ವ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ಮೌಲ್ಯವನ್ನೇ ಅಂಕಗಳ ಮೂಲಕ ಅಳೆಯಲು ಆರಂಭಿಸಿದ್ದಾರೆ. ಆದ್ದರಿಂದ…

Read More

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಬಸನಗೌಡ ಎಂ.ಪಾಟೀಲರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ ಜಿಲ್ಲೆಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸದಾ ನೆರವು ನೀಡುತ್ತ ಬಂದಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಬಸನಗೌಡ ಎಂ. ಪಾಟೀಲ ಹೇಳಿದ್ದಾರೆ.ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಎಸ್.ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಸಾನಿಕಾ ಮೆಟಗಾರ, ತೃತೀಯ ಸ್ಥಾನ ಪಡೆದ ಅಕ್ಷತಾ ಚವ್ಹಾಣ ಮತ್ತು ಬರಡೋಲ ಸರಕಾರಿ ಪಿ.ಯು ಕಾಲೇಜಿನ ಲಕ್ಷ್ಮಿ ಶ್ರೀಕಾಂತ ನಂದೂರ ಹಾಗೂ ನಾಲ್ಕನೇ ಸ್ಥಾನ ಪಡೆದೆ ಎಸ್.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಯುವರಾಜ ಬಗಲಿ ಅವರನ್ನು ಸನ್ಮಾನಿಸಿ ಮತ್ತು ಆರ್ಥಿಕ ನೆರವು ನೀಡಿ ಅವರು ಮಾತನಾಡಿದರು.ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ 29ನೇ ಸ್ಥಾನದಲ್ಲಿತ್ತು ಈ ಹಿನ್ನಲೆಯಲ್ಲಿ ಬೋಧನೆ ಗುಣಮಟ್ಟ ಸುಧಾರಿಸಿ, ಪರೀಕ್ಷೆಗೆ ಸಾಕಷ್ಟು…

Read More

ನಿವರಗಿಯ ಸರ್ಕಾರಿ ಹಾಸ್ಟೇಲ್‌ನಲ್ಲಿ ದಾರುಣ ಘಟನೆ | ಡೆತ್‌ನೋಟ್ ಬರೆದು ಸಾವಿಗೆ ಶರಣು ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ನಿವರಗಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹೆಡ್ ಕುಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ವಸತಿ ನಿಲಯದ ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಹಾಸ್ಟೇಲ್ ವಾರ್ಡನ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಭಗವಾನಸಿಂಗ್ ಕಿಶನಸಿಂಗ್ ಪರದೇಶಿ (58) ಎಂದು ಗುರುತಿಸಲಾಗಿದೆ. ಇವರು ಸುಮಾರು 23 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಹೆಡ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದೊಂದಿಗೆ ನಿವರಗಿಯಲ್ಲಿ ವಾಸವಾಗಿದ್ದು, ಪತ್ನಿ ಅನಿತಾ ಹಾಗೂ ಮಗ ಕಿಶನಸಿಂಗ್ ಕೂಡ ಇದೇ ಹಾಸ್ಟೇಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.ಮೃತರ ಪತ್ನಿ ಅನಿತಾ ಪರದೇಶಿ…

Read More