ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕು. ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕು ಎಂದು ಬಿಜೆಪಿ ನಗರಘಟಕ ಅಧ್ಯಕ್ಷ ಸಂದೀಪ್ ಪಾಟೀಲ ಝಳಕಿ ಆಗ್ರಹಿಸಿದ್ದಾರೆ.
ಬುಧವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶ್ವವೇ ಒಂದೆ ಕುಟುಂಬವೆಂಬ ದೃಢ ನಂಬಿಕೆಯಲ್ಲಿದ್ದು ಯಾವುದೇ ದೇಶ ಸಂಕಷ್ಟದಲದಲಿದ್ದರೂ ಅದಕ್ಕೆ ಸ್ಪಂದಿಸುವ ಭಾರತ ದೇಶದ ಹಿರಿಮೆಯಾದರೇ, ಅದೇ ದೇಶದ ಮೂಲನಿವಾಸಿಗಳು ವಿಭಜಿತ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ದೀಪು ಚಂದ್ರದಾಸ ಅವರ ಬರ್ಬರ ಹತ್ಯೆ ಖಂಡನೀಯ. ಅಪರಾಧಿಗಳನ್ನು ಬಂಧಿಸಿದರೇ ಸಾಲದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
