ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮನೆಯಲ್ಲಿ ಕುಳಿತು ಇ-ಖಾತಾ ಪಡೆಯುವ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲ ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿದರು.
ಪಟ್ಟಣದಲ್ಲಿ ಬುಧವಾರ ಮನೆಯಲ್ಲೇ ಕುಳಿತು ಇ-ಖಾತಾವನ್ನು ಪಡೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ ಮುಖ್ಯಾಧಿಕಾರಿ ಮಾತನಾಡಿ, ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಮಾಹಿತಿಗಳನ್ನು ನೇರವಾಗಿ ವೀಕ್ಷಿಸಬಹುದು. ಸದರಿ ಮಾಹಿತಿಗಳ ಬಗ್ಗೆ ತಕರಾರು ಇದ್ದಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದು. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಿ, ಅನಮೋದಿಸಲಾಗುಗುವುದು. ಅಂತಿಮ ಇ- ಖಾತಾವನ್ನು ತಮ್ಮ ಮನೆಗಳಲ್ಲೇ ಕುಳಿತು ಪಡೆಯಬಹುದಾಗಿದೆ.
ಇ-ಖಾತಾಗಾಗಿ ಮಾಲೀಕರ ಭಾವಚಿತ್ರ ಮತ್ತು ಆಧಾರ, ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ ಸಂಖ್ಯೆ, ಸ್ವತ್ತಿನ ಕ್ರಯ ಅಥವಾ ನೋಂದಾಯಿತ ಪತ್ರ ಸಂಖ್ಯೆ, ವಿದ್ಯುತ್ ಆರ್.ಆರ್.ಸಂಖ್ಯೆ, ಸ್ವತ್ತಿನ ಛಾಯಾಚಿತ್ರ, ಇಸಿ ನಮೂನೆ ೧೫/೧೬, ಸ್ವತ್ತಿಗೆ ಸಂಬAಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು ಅಗತ್ಯವಾಗಿವೆ ಎಂದು ಮಾಹಿತಿ ನೀಡಿದರು.
ಸಿಬ್ಬಂದಿ ಮುತ್ತುರಾಜ ಹಿರೇಮಠ, ಸೋಮು ಭೋವಿ, ಬಂದಗಿಸಾಬ್ ಮಂಡೆ, ಶ್ರೀಧರ ಘತ್ತರಗಿ, ಪ್ರವೀಣ ಹಿರೇಮಠ, ಅಕ್ಷಯ ಹಿರೇಮಠ, ಅಂಬರೀಷ ನಾಲತವಾಡ ಇದ್ದರು.

