ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸಮೀಪದ ಕರಡಕಲ್ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ದೇವಿಂದ್ರಪ್ಪ ಕುಂಭಾರ ಹಾಗೂ ಉಪಾದ್ಯಕ್ಷರಾಗಿ ಪಾರ್ವತಿ ವಿನಾಯಕ ದೊಡ್ಡಮನಿ ಅವಿರೋದವಾಗಿ ಆಯ್ಕೆಯಾದರು. 10 ಸದ್ಯಸರನ್ನು ಹೊಂದಿರುವ ಕರಡಕಲ್ ಗ್ರಾಮಪಂಚಾಯಿತಿಯಲ್ಲಿ 6 ಸದ್ಯಸರು ಕಾಂಗ್ರೇಸ್ ಪಕ್ಷದ ಬೆಂಬಲಿತರಾಗಿದ್ದು ಕಾಂಗ್ರೇಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದಂತಾಗಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ ಚುನಾವಣಾಧಿಕಾರಿಯಾಗಿ ಕರಡಕಲ್ ಗ್ರಾಪಂ ಅಧ್ಯಕ್ಷ ಚುನಾವಣೆ ಸುಸೋತ್ರವಾಗಿ ನಡೆಸಿಕೊಟ್ಟರು. ಚುನಾವಣೆ ಮುಗಿಯುತ್ತಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ, ಸಿಹಿ ಹಂಚಿ ಸಂಭ್ರಮಿಸಿದರು.
ಪ್ರಮುಖರಾದ ಮಾಜಿ ಮಂಡಲ ಪ್ರಧಾನ ಸಂಗನಗೌಡ ಮರಡ್ಡಿ, ಮಾಜಿ ಜಿಪಂ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಚಿಂಚೋಳಿ, ಬಾಪುಗೌಡ ಪಾಟೀಲ, ಬೀಮಣ್ಣ ಯಲಗೋಡ, ಬಾಪುಗೌಡ ಪೋ ಪಾಟೀಲ, ಸಿದ್ದನಗೌಡ ಮಾಲಹಳ್ಳಿ, ಮಾನಸಣ್ಣ ಘಂಟಿ, ಹಣಮಂತ್ರಾಯ ದೊಡ್ಡಮನಿ, ರಾಜಾವೆಂಕಟಪ್ಪ ನಾಯಕ ಜಾಗಿರದಾರ, ಭೀಮಣ್ಣ ನಾರಾಯಣಪೂರ, ಶಿವನಗೌಡ ಪಾಟೀಲ, ಬಸನಗೌಡ ಮರಡ್ಡಿ, ನಿಂಗನಗೌಡ ಮರಡಿ, ವಿರುಪಾಕ್ಷಿ ಗುಡಿಮನಿ, ಪಿಡಿಒ ಮಲ್ಲಪ್ಪ ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು, ಮುಂಜಾಗ್ರತಾ ಕ್ರಮವಾಗಿ ಪೋಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು.

