Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಪತಿಗಳು,ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸಹಯೋಗದಲ್ಲಿ ಏ.೨೧ರ ಬೆಳಿಗ್ಗೆ ೧೧:೩೦ ಗಂಟೆಗೆ ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.ಕನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಗೌರವಾನ್ವಿತ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಗ್ರಾಸನ ವಹಿಸುವರು.ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಸಮಕುಲಪತಿಗಳಾದ ಡಾ.ಎಂ.ಸಿ ಸುಧಾಕರ್ ಉಪಸ್ಥಿತರಿರುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈನ(ಎಸ್.ಎನ್.ಡಿಟಿ) ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀಮತಿ ನಾಥಿಬಾಯಿ ದಾಮೋದರ್ ಠಾಕರ್ಸಿ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ವಿಜಯಾ ಬಿ. ಕೋರಿಶೆಟ್ಟಿ ಭಾಗವಹಿಸುವವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ ಜಿಲ್ಲಾ ಮಟ್ಟದ ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸಗೊಬ್ಬರ ಮಾರಾಟ ಸಂಬಂಧಿಸಿದಂತೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ, ಅಕ್ರಮ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿದರೆ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಎಚ್ಚರಿಕೆ ನೀಡಿದರು.ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲ ರಸಗೊಬ್ಬರಗಳನ್ನು ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದ ಮೂಲಕವೇ ಕಡ್ಡಾಯವಾಗಿ ಮಾರಾಟ ಮಾಡಿ ದಾಖಲಿಸಬೇಕು ಎಂದರು.ಯೂರಿಯಾ ರಸಗೊಬ್ಬರ ಮಾರಾಟ ಮಾಡುವಾಗ ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶದ ಮೂಲಕ ಫ್ರುಟ್ಸ್ ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಪ್ರಕಾರ, ಒಂದು ಎಕರೆಗೆ ಒಂದು ಚೀಲದಂತೆ ಮಾರಾಟ ಮಾಡಬೇಕು ಎಂದರು.ರಸಗೊಬ್ಬರ ಮಳಿಗೆಗಳಲ್ಲಿ ಪಿಒಎಸ್ ದಾಖಲಾತಿ ಮತ್ತು ಭೌತಿಕ ದಾಸ್ತಾನು ಹೊಂದಾಣಿಕೆ ಇರುವುದನ್ನು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಕೂಡಲೇ ಉದ್ಘಾಟನೆ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಹಾಗೂ ರೈತಸಂಘ ಪದಾಧಿಕಾರಿಗಳು ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ನಮ್ಮ ಕರ್ನಾಟಕ ಸೇನೆ ಹಾಗೂ ರೈತಸಂಘದ ಪದಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ಕುರಿತು ತಹಶೀಲ್ದಾರರ ಗಮನ ಸೆಳೆದರು.ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಯುವ ಸಂಚಾಲಕ ಸಿದ್ಧನಗೌಡ ಪಾಟೀಲ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಪೂರ್ಣಗೊಂಡು ೬ ತಿಂಗಳಾದರೂ ಶಾಸಕರಾಗಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಅದಾಗ್ಯೂ ಯಾವುದೇ ನಿರ್ಧಾರವಾಗಿಲ್ಲ. ಹೀಗೆ ಉದ್ಘಾಟನೆಗೆ ವಿಳಂಬ ಮಾಡಿದ್ದಲ್ಲಿ ಇದೇ ದಿ:೩೦ ರಿಂದ ತಹಶೀಲ್ದಾರ ಕಾರ್ಯಾಲಯದ ಮುಂದೆ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಘಟಕದ…

Read More

ನವದೆಹಲಿ ಎನ್.ಸಿ.ಐ.ಎಸ್.ಎಂ ಬೋರ್ಡ್ ಆಫ್ ಆಯುರ್ವೇದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡಾ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಯುರ್ವೇದದಲ್ಲಿ ಹೆಚ್ಚೆಚ್ಚು ಸಂಶೋಧನೆ ಕೈಗೊಳ್ಳುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಲು ಸಾಧ್ಯ ಎಂದು ನವದೆಹಲಿ ಎನ್.ಸಿ.ಐ.ಎಸ್.ಎಂ ಬೋರ್ಡ್ ಆಫ್ ಆಯುರ್ವೇದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡಾ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನದ ಕೇಂದ್ರದ ವತಿಯಿಂದ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣ ಅನುಸಂಧಾನ-11 ಉದ್ಘಾಟಿಸಿ ಅವರು ಮಾತನಾಡಿದರು.ಆಯುರ್ವೇದ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಈ ಮೂಲಕ ಜನರಿಗೆ ಆಯುರ್ವೇದ ಚಿಕಿತ್ಸೆಯ ಹೆಚ್ಚೆಚ್ಚು ಲಾಭ ದೊರೆಯುವಂತೆ ಮಾಡಬೇಕು ಎಂದು ಅವರು ಹೇಳಿದರು.ಬೆಳಗಾವಿ ಕೆ.ಎಲ್.ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಹಾಸಕುಮಾರ ಶೆಟ್ಟಿ, ಪುಣೆಯ ಭಾರತೀಯ ವಿದ್ಯಾಪೀಠದ ಪ್ರಾಚಾರ್ಯ ಡಾ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಜಯಪುರ ತಾಲೂಕಿನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಏ.೧೮ರಂದು ಮಧ್ಯಾಹ್ನ ೩.೩೦ಗಂಟೆಗೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ಕಛೇರಿಯಲ್ಲಿ ರೈತರು ಹಾಗೂ ಗ್ರಾಹಕರೊಂದಿಗೆ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ.ಹೆಸ್ಕಾಂ ಗ್ರಾಮೀಣ ಉಪ ವಿಭಾಗದ ಕಛೇರಿಗೆ ಒಳಪಡುವ ಗ್ರಾಮಗಳ ಗ್ರಾಹಕರು ಹಾಗೂ ಸಾರ್ವಜನಿಕರು ಸಂವಾದ ಸಭೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಜಯಪುರ ಗ್ರಾಮೀಣ ಉಪ ವಿಭಾಗದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಕ್ರಮ ಕಟ್ಟಡ ಆರೋಪ | ಹುಣಸೂರು ಎಸಿ ಕಾವ್ಯರಾಣಿ ಸೂಚನೆ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆ ಮಾರ್ಗ ಬರುವ ಮಗ್ಗೆ- ಮಳಲಿ ಗ್ರಾಮಗಳ ಮಧ್ಯೆ ನಿರ್ಮಾಣವಾಗುತ್ತಿರುವ ಹೋಟೆಲ್ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಹುಣಸೂರು ಉಪವಿಭಾಗಧಿಕಾರಿ ಕಾವ್ಯರಾಣಿ ತಾಕೀತು ಮಾಡಿದ್ದಾರೆ.ಸಾರ್ವಜನಿಕರಿಂದ ದೂರುಗಳ ಕೇಳಿಬಂದ ಹಿನ್ನೆಲೆ ಅಧಿಕಾರಿಗಳ ಜೊತೆ ಗುರುವಾರ ಸ್ಥಳಕ್ಕೆ ಬಂದ ಕಾವ್ಯರಾಣಿ. ಕಟ್ಟಡ ಕಾಮಗಾರಿ ಪರಿಶೀಲಿಸಿ, ಕೂಡಲೇ ಕಾಮಗಾರಿ ಸ್ಥಗಿತಕ್ಕೆ ಆದೇಶಿಸಿದರು. ಕಟ್ಟಡ ಮಾಲೀಕ ಲಕ್ಷ್ಮಿಪ್ರಸಾದ್ ಎಂಬುವರಿಗೆ ಕರೆಮಾಡಿ, ತತ್ ಕ್ಷಣವೇ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇದು ಸೂಕ್ಷ್ಮಪರಿಸರ ವಲಯ ವ್ಯಾಪ್ತಿಗೆ ಒಳಪಟ್ಟಿದ್ದು, ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಈ ಸಂಬಂಧ ಎರಡು ಬಾರಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಅಷ್ಟಾದರೂ ಕೂಡ ಕಾಮಗಾರಿ ಮುಂದುವರೆಸಿರುವುದು ಕಾನೂನು ಬಾಹಿರ. ಕಟ್ಟಡ ಕಾಮಗಾರಿ ಸಂಬಂಧ ದಾಖಲೆಗಳು ಇದ್ದರೆ ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಅನುಮತಿ ಪಡೆದು ಕಟ್ಟಡ ಕಾಮಗಾರಿ ಮುಂದುವರೆಸಿ ಎಂದು ಸೂಚನೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಮಿರಗಿ ಹಳ್ಳ ಮತ್ತು ಗೋಳಸಾರ ಗ್ರಾಮಕ್ಕೆ ಕೃಷ್ಣಾ ಕಾಲುವೆ ಮುಖಾಂತರ ನೀರು ಹರಿಸಿ ನೀರಿನ ತೊಂದರೆ ತಪ್ಪಿಸಬೇಕೆಂದು ಆಗ್ರಹಿಸಿ ಇಂದು ಗ್ರಾಮದ ರೈತರು ಆಡಳಿತ ಸೌಧ ಎದುರು ಪ್ರತಿಭಟನೆ ನಡೆಸಿದರು.ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಮಿರಗಿ ಹಳ್ಳಕ್ಕೆ ಕೃಷ್ಣಾ ಕಾಲುವೆ ನೀರು ಹರಿಸಿದರೆ ಮಿರಗಿ, ಗೋಳಸಾರ, ನಾದ ಸಂಗೋಗಿ, ಶಿರಶ್ಯಾಡ ಈ ಎಲ್ಲ ಗ್ರಾ.ಪಂ ಗಳಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ ಕಾರಣ ಕಾಲುವೆ ಮುಖಾಂತರ ಹಳ್ಳಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಶ್ರೀಶೈಲ ಮದರಿ ಮಾತನಾಡಿದರು.ಪ್ರತಿಭಟನೆಯಲ್ಲಿ ಬಸವರಾಜ ಖಸ್ಕಿ, ಭೀಮಣ್ಣ ಅವಟಿ, ಬಸವರಾಜ ಭಂಥನಾಳ, ಶಿವಲಿಂಗಪ್ಪ ರೋಡಗಿ, ಯಲ್ಲಪ್ಪ ಗಾಳಿ, ಶಿವಾನಂದ ಕಲಶೆಟ್ಟಿ, ರವಿಕಾಂತ ರೋಡಗಿ, ಭೀಮರಾಯ ಹಳ್ಳಿ, ಕಾಂತಪ್ಪ ಗಡೆಕರ, ಸುರೇಸ ಪಾಟೀಲ, ನಾಮದೇವ ಸಾಳುಂಕೆ, ಅಶೋಕ ಆನೂರ, ಶಿವಲಿಂಗಪ್ಪ ರೋಡಗಿ ಮತ್ತಿತರಿದ್ದರು.ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಉಪನೋಂದಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿ ಅಂಜಲಿ ಸಿ. ಅವರ ವರ್ತನೆಗೆ ಸಾರ್ವಜನಿಕರು ಬೇಸತ್ತಿದ್ದಾರೆ.ಸಾರ್ವಜನಿಕರು ತಮ್ಮ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಕಾರ್ಯಕ್ಕಾಗಿ ಉಪನೋಂದಣಾಧಿಕಾರಿಗಳ ಬಳಿ ಹೋದರೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಸಾಕಷ್ಟು ನಾಗರಿಕರು ಆರೋಪಿಸಿದ್ದಾರೆ.ಬುಧವಾರ ಸೊನಕನಳ್ಳಿ ಗ್ರಾಮದ ಭೀಮಾಶಂಕರ ವಿಲಾಸ ವಾಲೀಕಾರ ಎಂಬ ರೈತ ತಮ್ಮ ಜಮೀನಿನ ಪಹಣಿಯಲ್ಲಿ ಭೋಜಾ ದಾಖಲು ಮಾಡಿಸಲು ಆನ್‌ಲೈನ್ ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ಗ್ರಾಮದ ಹೆಸರು ಸೊನಕನಹಳ್ಳಿ ಬದಲಾಗಿ ಬೆನಕನಹಳ್ಳಿ ಎಂದು ದಾಖಲಾಗಿತ್ತು. ಅದನ್ನು ತಿದ್ದುಪಡಿ ಮಾಡಲು ಉಪನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿದ್ದ ಉಪನೋಂದಣಾಧಿಕಾರಿ ಅಂಜಲಿ ಸಿ ಅವರನ್ನು ಆನ್‌ಲೈನ್ ಹಾಕುವಾಗ ಈ ತಪ್ಪಾಗಿದೆ ಇದಕ್ಕೆ ತಿದ್ದುಪಡಿ ಹೇಗೆ ಮಾಡಬೇಕೆಂದು ಕೇಳಿದಾಗ ಆತನೊಂದಿಗೆ ಅಸಭ್ಯ, ಅಶ್ಲೀಲ ಪದಗಳಿಂದ ಮಾತನಾಡಿದ್ದಾರೆ. ಅಲ್ಲದೆ ಆನ್‌ಲೈನ್ ಅಪ್ಲಿಕೇಶನ್ ಹಾಕಿದ್ದು ಆನ್‌ಲೈನ್ ಅಂಗಡಿಯವನೂ ಸಹ ಕಚೇರಿಗೆ ತೆರಳಿ ಹೀಗೆ ತಪ್ಪಾಗಿದೆ ಮೇಡಂ ಅದನ್ನು ತಿದ್ದುಪಡಿ ಮಾಡಲು ನಿಮ್ಮಲ್ಲಿ ಅವಕಾಶವಿದೆ ಮಾಡಿಕೊಡಿ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂದು ಕೃಷಿ ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಇವರ ನೇತೃತ್ವದಲ್ಲಿ ಭೇಟಿ ನೀಡಿದರು.ಎ.ಸಿ.ಧನಶೆಟ್ಟಿ, ಶಾಂತು ಧನಶೆಟ್ಟಿ ಮತ್ತು ಪ್ರಕಾಸಗೌಡ ಬಿರಾದಾರ ಇವರ ಮಳಿಗೆಗಳಿಗೆ ಭೇಟಿ ನೀಡಿದರು.ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಸಂಗ್ರಹವಿದೆ. ಸರಿಯಾದ ದರಕ್ಕೆ ಗೊಬ್ಬರ ನೀಡಬೇಕು. ದರ ಪಟ್ಟಿ ಪ್ರಕಟಿಸಬೇಕು. ಅವಧಿ ಮುಗಿದ ಗೊಬ್ಬರ ನೀಡಬಾರದು. ಅಂತಹ ಪ್ರಕರಣ ರೈತರಿಂದ ಬಂದರೆ ಕ್ರಮ ಕೈಕೊಳ್ಳಲಾಗುವದು.ಸರಕಾರ ನಿಗದಿ ಪಡಿಸಿದ ದರಕ್ಕೆ ಕೃಷಿ ಪರಿಕರ ನೀಡಬೇಕು. ಸ್ಟಾಕು ಲಗ್ತಿಸಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನ್ನವರ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ಒಂದು ಟಿಎಂಸಿ ನೀರು ಹರಿಯ ಬಿಡಲಾಗಿದೆ ಎಂದು ಇಂಡಿಯ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.ವಿಭಾಗೀಯ ಆಯುಕ್ತರು ಕಲಬುರಗಿ ವಿಭಾಗ ಇವರು ಬೆಳಗಾವಿ ವಿಭಾಗೀಯ ಆಯುಕ್ತರ ಕೋರಿಯ ಮೇರೆಗೆ ನಾರಾಯಣ ಜಲಾಶಯದಿಂದ ಒಂದು ಟಿ.ಎಂ.ಸಿ ನೀರನ್ನು ಹರಿಸಿದ್ದಾರೆ.ಕೆಬಿಜೆಎನ್‌ಎಲ್ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಇವರ ಪ್ರಯತ್ನದಿಂದ ನೀರು ಪಡೆಯಲಾಗಿದೆ.ನೀರು ಈಗಾಗಲೇ ಏ. ೧೧ ರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುತ್ತಿದ್ದು ಒಂದು ಟಿಎಂಸಿ ಹೆಚ್ಚುವರಿ ನೀರಿನಿಂದ ಏ. ೨೩ ರ ವರೆಗೆ ನೀರು ಕಾಲುವೆಯಲ್ಲಿ ಹರಿಯುತ್ತದೆ ಮತ್ತು ಈ ನೀರು ಕೇವಲ ಕುಡಿಯಲು ಮತ್ತು ಜನ ಜಾನುವಾರುಗಳು ಮಾತ್ರ ಉಪಯೋಗಿಸಲು ತಿಳಿಸಿದ್ದಾರೆ.ಇಂದು ಕೃಷ್ಣಾ ಕಾಲುವೆ ಮೇಲೆ ಕಂದಾಯ ಉಪವಿಬಾಗಾಧಿಕಾರಿಗಳು ಬೇಟಿ ನೀಡಿ ಸಾಲೋಟಗಿಯಿಂದ ಮಾವಿನಹಳ್ಳಿಯ ವರೆಗೆ ಕಾಲುವೆಯನ್ನು ವಿಕ್ಷಿಸಿದರು.ಇಒ ಭೀಮಾಶಂಕರ ಕನ್ನೂರ ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಕೆಬಿಜೆಎನ್‌ಎಲ್ ಭೀರಪ್ಪ…

Read More