ವಿಜಯಪುರದಲ್ಲಿ ಹಿಂದೂ ಹೋರಾಟಗಾರ ರಾಘವ ಅಣ್ಣಿಗೇರಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಹಾಗೂ ಏಕ ರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ, ಉತ್ತರಾಖಂಡ, ಗುಜರಾತ್ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ್ದು, ಕರ್ನಾಟಕ ಮುಖ್ಯಮಂತ್ರಿಗಳು ಏಕೆ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುತ್ತಿಲ್ಲ ಎಂದು ಹಿಂದೂ ಹೋರಾಟಗಾರ ರಾಘವ ಅಣ್ಣಿಗೇರಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ರಕ್ಷಣೆ ಸುಲಭದ ಮಾತಲ್ಲ, ೨೦೨೫ ರ ಚೈನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ಅಗ್ರಸ್ಥಾನ ಪಡೆದಿದೆ, ೧೪೬ ಕೋಟಿಗೂ ಜನಸಂಖ್ಯೆ ಮಿಕ್ಕಿದೆ, ಇದನ್ನು ನಿಯಂತ್ರಿಸುವುದು ಹೇಗೆ? ಈ ಜನಸಂಖ್ಯೆಯನ್ನು ನಿಯಂತ್ರಿಸದೇ ಹೋದರೆ ಭಯೋತ್ಪಾದನೆ ನಿಯಂತ್ರಣ ಕಷ್ಟ ಸಾಧ್ಯವಾಗಲಿದೆ.
ಹಿಂದೂ-ಮುಸ್ಲಿಂರು ಎಲ್ಲರೂ ರಾಷ್ಟ್ರಭಕ್ತರು, ನಮ್ಮಲ್ಲಿ ದ್ವೇಷ ಬಿತ್ತುವವರ ವಿರುದ್ಧ ನನ್ನ ಸಮರ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ವಿಶೇಷ ಸಚಿವ ಸಂಪುಟ ಸಭೆ ಕರೆದು ಈ ಜನಸಂಖ್ಯೆ ನಿಯಂತ್ರಣ ಕಾಯ್ದೆ ಹಾಗೂ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದರು.
೧೫೦೦ ಕ್ಕೂ ಹೆಚ್ಚು ಭಯೋತ್ಪಾದನೆ ಸಂಘಟನೆ ಇದೆ, ಭಯೋತ್ಪಾದಕರನ್ನು ಮಟ್ಟ ಹಾಕುವ ಕೆಲಸ ನಡೆಯಬೇಕಿದೆ, ಎನ್‌ಕೌಂಟರ್‌ನಲ್ಲಿ ಉಗ್ರರನ್ನು ಹೊಡೆದು ಅವರ ಶವಗಳನ್ನು ಹೂತು ಅವರ ಮೇಲೆ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು, ಸೌಮ್ಯ ಸ್ವಭಾವದಿಂದ ಭಯೋತ್ಪಾದನೆ ನಿಯಂತ್ರಣ ಅಸಾಧ್ಯ, ರಾಕ್ಷಸ ಸ್ವರೂಪದ ಉಗ್ರರ ಶವ ಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಅವಶ್ಯಕತೆಯೇ ಇಲ್ಲ ಎಂದರು.
ಬಾಂಗ್ಲಾದೇಶದಲ್ಲಿ ಅಮೃತ ಮಂಡಲ್ ಸೇರಿದಂತೆ ಅನೇಕ ಯುವಕರನ್ನು ಅವರು ಹಿಂದೂ ಎಂಬ ಕಾರಣಕ್ಕೆ ಜಿಹಾದಿ ಮನಸ್ಥಿತಿಯವರು ಕೊಲೆ ಮಾಡಿರುವ ಘಟನೆ ನೋವಿನ ಸಂಗತಿ, ಜಿಹಾದಿ ಮನಸ್ಥಿತಿ ಇಲ್ಲಿಗೆ ನಿಲ್ಲುವುದಿಲ್ಲ, ಈ ಹಿಂದೆ ನಮ್ಮ ನೆಲದ ಕಾಶ್ಮೀರದ ಪೆಹಲ್ಗಾಮದಲ್ಲಿ ಧರ್ಮ ಪ್ರಶ್ನಿಸಿ ದಾರುಣವಾಗಿ ಹತ್ಯೆ ಮಾಡಿದ ಘಟನೆ ಇನ್ನೂ ನಡೆದಿಲ್ಲ, ಡಾಕ್ಟರ್ ಜಿಹಾದಿಗಳು ನವದೆಹಲಿಯಲ್ಲಿ ಅನೇಕರ ಪ್ರಾಣ ಕಸಿಯುವ ಪ್ರಯತ್ನ ಮಾಡುತ್ತಿದ್ದಾರೆ, ಈ ಎಲ್ಲ ನೋಡಿದರೆ ನಮ್ಮ ದೇಶ ಎಲ್ಲಿಗೆ ಸಾಗುತ್ತಿದೆ, ಈ ಎಲ್ಲ ನೋವಿನ ಘಟನೆಗಳಿಗೆ ಸಂಬಂಧಿಸಿದಂತೆಯೂ ಪ್ರಧಾನಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವೆ ಎಂದರು.
ಹಿಂದೂ ಹೋರಾಟಗಾರ ವಿವೇಕ ಸಜ್ಜನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನನಗೂ ಆತನ ಭಾಷೆಯಲ್ಲಿ ಮಾತನಾಡಲು ಬರುತ್ತದೆ
ಜವಾಬ್ದಾರಿ ಸ್ಥಾನದಲ್ಲಿರುವ ಖಾದ್ರಿ ಸಾಮಾನ್ಯ ಜ್ಞಾನವಿಲ್ಲದೇ ಮಾಧ್ಯಮಗಳ ಮುಂದೆ ಮಾತನಾಡಿದ್ದಾನೆ, ನನ್ನ ರಾಷ್ಟ್ರಭಕ್ತಿಯ ಬಗ್ಗೆ ಪ್ರಶ್ನಿಸಿರುವ ನಿನ್ನ ಭಾಷೆಯಲ್ಲಿಯೇ ನಾನು ಮಾತನಾಡಲು ಬರುತ್ತದೆ, ಆದರೆ ನಾನು ಸಂಸ್ಕೃತಿಯ ಆರಾಧಕ, ಹೀಗಾಗಿ ನಾನು ಆ ಭಾಷೆ ಮಾತನಾಡುವುದಿಲ್ಲ, ನನ್ನದು ನೈಜ ಹಿಂದೂತ್ವವಾಗಿದೆ, ನೀನು ಹೇಳಿದ ಸ್ಥಳದಲ್ಲಿಯೇ ಬಂದು ನಾನು ನಿನ್ನ ಜೊತೆ ಸವಾಲಿಗೆ ಸಿದ್ಧ, ಅಷ್ಟೂ ಮೀರಿ ನನಗೆ ಸವಾಲು ಹಾಕಲು ನೀನು ಯಾರು? ಎಂದು ಅಣ್ಣಿಗೇರಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ಔಚಿತ್ಯವೇ ಇಲ್ಲ, ನಾನು ಹಿಂದೂ ಆಗಿಯೇ ಹೋರಾಡುವೆ, ಹಿಂದೂ ಆಗಿಯೇ ಸಾಯುವೆ, ಇನ್ನೊಂದು ಧರ್ಮವನ್ನು ನಾನು ಎಂದೂ ತೆಗಳುವುದಿಲ್ಲ, ಸ್ವಾಮಿ ವಿವೇಕಾನಂದ ಹಾಗೂ ಡಾ.ಅಂಬೇಡ್ಕರ ಅವರ ತತ್ವ ಆಧರಿಸಿ ಹಿಂಧೂ ಧರ್ಮವನ್ನು ಪಾಲಿಸುವೆ ಎಂದರು.

