ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಕೃಷ್ಣಾ ಪ್ಯಾಲೇಸ್ ದಲ್ಲಿ ಸೋಮವಾರ ನಸುಕಿನಜಾವ ಆಕಸ್ಮಿಕ ಬೆಂಕಿ ಹೊತ್ತಿಕೊಂಡು, ಕಟ್ಟಡ ಸುಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವ ಹಿನ್ನೆಲೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಭೇಟಿ ನೀಡಿ ಪ್ಯಾಲೇಸ್ ಮಾಲೀಕರಿಗೆ ಸಾಂತ್ವನ ಹೇಳಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಹೊಟೇಲು, ಅಂಗಡಿ ಮಾಲೀಕರು ಅಗ್ನಿ ಸುರಕ್ಷತೆ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿ, ಅಗ್ನಿ ನಂದಿಸುವ ಉಪಕರಣಗಳು, ತುರ್ತು ನಿರ್ಗಮನ ಬಾಗಿಲುಗಳು ಹಾಗೂ ಈ ರೀತಿ ಅವಘಡಗಳು ಆದಾಗ ಆರ್ಥಿಕವಾಗಿ ಹೊರೆಯಾಗದಿರಲು ವಿಮೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

