ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ತಾಯಿ ಭುವನೇಶ್ವರಿಗೆ ನಮಿಸುತ್ತಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕೇಂದ್ರ ಸಮನ್ವಯ ಕನ್ನಡ ಸಂಘ ಬಾಗಲಕೋಟೆ ವಿಭಾಗದ ಜಮಖಂಡಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕ್ರಿಸ್ಮಸ್ ಅಂಗವಾಗಿ ಯೇಸುಕ್ರಿಸ್ತನ ಜನ್ಮದಿನಾಚರಣೆ ಸಮಾರಂಭವನ್ನು ಜಮಖಂಡಿಯಲ್ಲಿ ಭವ್ಯವಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಬಿ.ವ್ಹಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಅಶೋಕ ಬಜಂತ್ರಿ, ತಿರುಪತಿ ಪತ್ತಾರ, ಸಿ.ವ್ಹಿ. ಶಿಕ್ಕೇರಿ, ಕೇಂದ್ರ ಸಮನ್ವಯ ಕನ್ನಡ ಸಂಘ ಬೆಂಗಳೂರು ರಾಜ್ಯ ಕಾರ್ಯದರ್ಶಿ ಪ್ರಭು ಬಿದರಿ, ಬಾಗಲಕೋಟೆ ವಿಭಾಗದ ಅಧ್ಯಕ್ಷ ಸಿ.ಕೆ. ನಾಡದಾಳ, ಕಾರ್ಯಾಧ್ಯಕ್ಷ ಪ್ರಕಾಶ ಆಸಂಗಿ, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಟಿ. ವಜ್ರಮಟ್ಟಿ, ಖಜಾಂಚಿ ಸುಭಾಷ್ ಸುರಗೊಂಡ ಹಾಗೂ ಕಾರ್ಮಿಕ ಮುಖಂಡರು ಕುಂದೇನಾಯಕ, ಶರಣು, ಬಡ್ಡಿ, ಮುಧೋಳ ಹಾಜರಿದ್ದರು.
ಜಮಖಂಡಿ ಘಟಕದ ಚಾಲಕರು, ನಿರ್ವಾಹಕರು ಹಾಗೂ ಆಡಳಿತ ಸಿಬ್ಬಂದಿಗಳು ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.
ರಾಜ್ಯ ಕಾರ್ಯದರ್ಶಿ ಪ್ರಭು ಬಿದರಿ ಅವರು, “ಜಮಖಂಡಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕ್ರಿಸ್ಮಸ್ ಆಚರಣೆ ಸಮಾರಂಭವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ತಿಳಿಸಿದರು.
ಹೊಸ ಪದಾಧಿಕಾರಿಗಳಾಗಿ ಆಯ್ಕೆ
ಗೌರವಾಧ್ಯಕ್ಷ ಕೆ.ಎಸ್. ನಾವ್ಹಿˌಗೌರವ ಸಲಹೆಗಾರˌ ಬಾಬುರಾವ್ ಸುಳ್ಳದˌ ಅಧ್ಯಕ್ಷ ಆನಂದ ಕರಾತˌ ಕಾರ್ಯಾಧ್ಯಕ್ಷ ಎಮ್.ಬಿ. ದಬಾಸಿˌ ಪ್ರಧಾನ ಕಾರ್ಯದರ್ಶಿ ಮಹಾದೇವ ಪೋತರಾಜˌ ಪ್ರಚಾರ ಸಮಿತಿ ಅಧ್ಯಕ್ಷ ವೈ.ಆರ್. ಡಾಲಿನವರˌ ಖಜಾಂಚಿ ಎಮ್.ಎಸ್. ಕುಮಸಗಿˌ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಶಂಕರ ಬಜಂತ್ರಿˌ ಮಹಿಳಾ ಪದಾಧಿಕಾರಿಗಳು ಮೀನಾಕ್ಷಿ ಗುಣಕಿ, ಸವಿತಾ ಸುರಗೊಂಡ
ಇನ್ನು ಅನೇಕರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದು, ಎಲ್ಲರ ಸಹಭಾಗಿತ್ವದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

