ಉದಯರಶ್ಮಿ ದಿನಪತ್ರಿಕೆ
ದಾವಣಗೆರೆಯಲ್ಲಿ ನಡೆದ ವಿಶ್ವ ದರ್ಶನ ಪತ್ರಿಕೆ ಹಾಗೂ ರಾಷ್ಟ್ರೀಯ ಐಕಾನ್ ಅವಾರ್ಡ್ ಪ್ರಶಸ್ತಿ ಸಮಾರಂಭದಲ್ಲಿ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ಇರ್ಫಾನ್ ಶ ಬೀಳಗಿ ಅವರಿಗೆ “ರಾಷ್ಟ್ರೀಯ ಮಾಧ್ಯಮ ಕಾಯಕ ಸೇವಾ ರತ್ನ” ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ದರ್ಶನ ಫೌಂಡೇಶನ್ ಅಧ್ಯಕ್ಷರು ಹಾಗೂ ವಿಶ್ವ ದರ್ಶನ್ ಪತ್ರಿಕೆಯ ಸಂಪಾದಕ ಎಸ್ ಎಸ್ ಪಾಟೀಲ್,
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ, ಮಠಾಧೀಶರು, ಸೂಫಿ-ಸಂತರು ಇದ್ದರು.

