Author: editor.udayarashmi@gmail.com

ಕನ್ಹೇರಿ ಶ್ರೀ ಹೇಳಿಕೆಗೆ ಅಮರ ಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖ ಮಠ ಚಿಕ್ಕಹೆಸರೂರು ತೀವ್ರ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿನ್ನೆ ಬಬಲೇಶ್ವರದಲ್ಲಿ ನಡೆದ ಹಿಂದುತ್ವವಾದಿಗಳ ಸಮ್ಮೇಳನದಲ್ಲಿ ಮಾತನಾಡುತ್ತಾ, ಬಸವಾದಿ ಶರಣರನ್ನು ಹಿಂದೂಗಳೆಂದು, ವೇದಪ್ರಿಯರೆಂದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಕರನ್ನು ಬುಡುಬುಡಿಕೆಗಳೆಂದು, ಲಿಂಗಾಯತವನ್ನು ಸಮರ್ಥಿಸುವವರು ಕಾವಿ ವಿಭೂತಿ ರುದ್ರಾಕ್ಷಿ ಹಾಗೂ ಮಠ ತೊರೆದು ಬಿಡಲಿ ಎಂದು ಕರೆ ನೀಡಿದ ಕಾಡಸಿದ್ದೇಶ್ವರ ಮಠದ ಕನೇರಿ ಸ್ವಾಮಿ ಹೇಳಿಕೆಯನ್ನು ಅಮರ ಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖ ಮಠ ಚಿಕ್ಕಹೆಸರೂರು ತೀವ್ರವಾಗಿ ಖಂಡಿಸಿದೆ.ಈ ಕುರಿತು ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಈ ತಲೆ ತಿರುಕ ಅಸ್ವಾಮಿ ತನ್ನ ವಿಷ ಪೂರಿತ ಹೇಳಿಕೆಯ ಮೂಲಕ ಮಹಾನ್ ಶರಣ ಚಳುವಳಿಗೆ ಮತ್ತದರ ನಾಯಕ ಬಸವಣ್ಣನವರಿಗೆ ಹಾಗೂ ಸಮಸ್ತ ಲಿಂಗಾಯತರಿಗೆ ಮತ್ತು ಲಿಂಗಾಯತ ಮಠಗಳಿಗೆ ಅವಮಾನ ಮಾಡಿದ್ದಾನೆ. ಹಾಗಾಗಿ ರಾಜ್ಯ ಸರ್ಕಾರ, ಕೂಡಲೇ ಈ ಸ್ವಾಮೀಜಿ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಉದ್ದೇಶದಿಂದ ಏರ್ಪಡಿಸಿದ್ದ ಸಮಾವೇಶ ವಿಫಲಗೊಂಡಿದೆ ಎಂದು ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.ಸೋಮವಾರ ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಬಲೇಶ್ವರ ಗುರುಪಾದೇಶ್ವರ ಮಹಾಸ್ವಾಮಿಜಿಗಳು, ಶಾಂತವೀರ ಅಪ್ಪಗಳವರ ಪುಣ್ಯಕ್ಷೇತ್ರವಾಗಿರುವ ಬಬಲೇಶ್ವರದಲ್ಲಿ ಬಸವಾದಿ ಶರಣರ ಆಶಯದಂತೆ ಎಲ್ಲ ಜಾತಿ ಜನಾಂಗದವರು ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡು ಪ್ರೀತಿಯಿಂದ ಬಾಳುವ ಇವರ ಮಧ್ಯೆ ಧರ್ಮದ ಹೆಸರಿನಲ್ಲಿ ಕಿಡಿ ಹಚ್ಚಿ, ರಾಜಕಾರಣದ ಮೂಲಕ ತಮ್ಮ ಬೆಳೆ ಬೆಯಿಸಲು ಕನ್ಹೇರಿ ಶ್ರೀಗಳು ಮಾಡಿದ ಬಯಲಾಟ ಪ್ರೇಕ್ಷರಿಲ್ಲದೆ ನಿಂತುಹೋಗಿದೆ ಎಂದರು.ಬಿಜೆಪಿಯಿಂದ ಉಚ್ಚಾಟಿತರು, ಪರಾಜೀತ ಅಭ್ಯರ್ಥಿಗಳು, ಟಿಕೆಟ್ ವಂಚಿತರು, ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಒಂದಡೆ ಸೇರಿಸಿ, ಸಮಾವೇಶವನ್ನು ಮಾಡುವ ಮೂಲಕ ಈ ಸ್ವಾಮೀಗಳು ಅಧೀಕೃತವಾಗಿ ಬಿಜೆಪಿ ನಿರಾಶ್ರಿತರ ಗುಂಪಿನಲ್ಲಿ ಸೇರಿಕೊಂಡಿದ್ದಾರೆ. ಜಿಲ್ಲೆಯ ಮತ್ತು ರಾಜ್ಯದಲ್ಲಿ ಮಠ-ಮಂದಿರಗಳನ್ನು ಕಟ್ಟಿದ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ಸಮಾಜಮುಖಿ ಕಾಯಕ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರಿಗೆ ಆರ್ಯುರ್ವೇದ ವಿಶ್ವ ರತ್ನ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಶುಕ್ರವಾರ ನಡೆದ ಎರಡನೇಯ ಆಯುರ್ವೇದ ವಿಶ್ವಸಮ್ಮೇಳನದಲ್ಲಿಡಾ. ಅಶೋಕ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿಶ್ವ ಆಯುರ್ವೇದ ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಶಾಂತಿ ಆಯುರ್ವೇದ ಕೇಂದ್ರದ ಖ್ಯಾತ ವೈದ್ಯ ಡಾ. ಗಿರಿಧರ ಕಜೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಇತರೆ ಆಯುರ್ವೇದ ಸಾಧಕ ವೈದ್ಯರಿಗೂ ಪ್ರಶಸ್ತಿ ಕೊಡಮಾಡಲಾಯಿತು.19 ವರ್ಷಗಳಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಿರುವ ಅವರು ಅನೇಕ ಸಂಶೋಧನೆಗಳನ್ನು ಕೈಗೊಂಡು 35ಕ್ಕೂ ಹೆಚ್ಚು ಪ್ರಭಂದಗಳನ್ನು ಮಂಡಿಸಿದ್ದಾರೆ. ಅಲ್ಲದೇ, ನಾನಾ ಆರೋಗ್ಯ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಸಂಶೋಧನ ಪರಿಣಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪಿ.ಎಚ್.ಡಿ ಪದವಿದರರಿಗೆ ಮಾರ್ಗದರ್ಶಕರಾಗಿಯೂ ಅನುಭವ ಹೊಂದಿದ್ದಾರೆ.ಡಾ. ಅಶೋಕ ಪಾಟೀಲ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಎಂ. ಬಿ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಿಜಯಪುರ ನಗರ, ತಾಲೂಕಾ ಮಟ್ಟದ ಹಾಗೂ ಹೋಬಳಿ ಮಟ್ಟದ ನಗರಗಳಲ್ಲಿ 2026 ರ – ಹೊಸ ವರ್ಷ ಆಚರಣೆ ಮಾಡುವ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತೆ ವಹಿಸಿ, ಜಿಲ್ಲೆಯ ಎಲ್ಲ ಹೋಟೆಲ್, ಲಾಡ್ಜ್, ರೆಸ್ಟೋರೆಂಟ್ ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಂಬ0ಧಪಟ್ಟ ಮಾಲೀಕರು, ಮ್ಯಾನೇಜರುಗಳ ಸಭೆ ಕೈಕೊಂಡಿದ್ದು, ಸಭೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ವಹಿಸುವ ಕುರಿತು ಸೂಚಿಸಿದ್ದಲ್ಲದೇ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲು, ಸಿಸಿಟಿವ್ಹಿ ಅಳವಡಿಸಿ – ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮ ಕೈಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಈ ಕುರಿತು ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಜಯಪುರ ಜಿಲ್ಲೆಯಾದ್ಯಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ 165 ಕಡೆಗಳಲ್ಲಿ ಬ್ಯಾರಿಕೆಡಿಂಗ್ ವ್ಯವಸ್ಥೆ, 39 ಕಡೆಗಳಲ್ಲಿ ಚೆಕ್…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಕುವೆಂಪು ಅವರು ಮಾನವಕುಲಕ್ಕೆ ನೀಡಿದ ಮಾರ್ಗದರ್ಶನ ಹಾಗೂ ಆದರ್ಶಗಳು ಸಾರ್ವಕಾಲಿಕವಾಗಿದ್ದು, ಅವರ ವಿಶ್ವಮಾನವ ಸಂದೇಶದ ಚಿಂತನೆಗಳು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರವಾಗಿವೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ–2 ಮರಡಿ ಶಾಲೆಯಲ್ಲಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ‘ವಿಶ್ವಮಾನವ ದಿನಾಚರಣೆ’ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಶ್ವಮಾನವ ಸಂದೇಶವು ಮನುಜಕುಲ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಮೌಲ್ಯಗಳ ಮೇಲೆ ನಿಂತಿದ್ದು, ಯಾವುದೇ ವ್ಯಕ್ತಿ ಜಾತಿಯಿಂದಲ್ಲ, ನೈತಿಕ ವ್ಯಕ್ತಿತ್ವದಿಂದ ಮುಖ್ಯವಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದ್ದಾಗಿತ್ತು. ನಾವೆಲ್ಲರೂ ಅವರ ಆಶಯದಂತೆ ಬದುಕಬೇಕು ಎಂದು ಹೇಳಿದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿದರು.ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಾದ ಮೌನೇಶ್ ವಿಭೂತಿ, ಗಗನ ಶಂಖು, ಶ್ರುತಿ ಕ್ಷತ್ರಿ, ಅಂಜಲಿ ಇಟಗಾರ, ಶ್ರಾವಣಿ ಕೋಳಿ, ಅನಿತಾ ಕೋಳಿ, ದೀಕ್ಷಿತಾ ಗಾಡಿವಡ್ಡರ, ರಕ್ಷಿತಾ ನಾಟಿಕಾರ, ನೇತ್ರಾ ಕರ್ಜಗಿ, ಯಶೋದಾ ಸಾವಳೆ, ನದೀಮ್ ಕಾಜಿ ಅವರು ತಮ್ಮ ಅಭಿಪ್ರಾಯಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸಿದ ಸರಗಳ್ಳತನದ ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಅಪಹರಿಸಿದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.ಇಲ್ಲಿನ ಸ್ಟೇಷನ್ ರಸ್ತೆಯ ದಿವಟಗೇರಿಯಲ್ಲಿ ಕಳೆದ ಶುಕ್ರವಾರ ಸಂಜೆ ಪಾದಚಾರಿ ಮಹಿಳೆ ಮೇಲೆ ಆರೋಪಿಗಳು ದಾಳಿ ನಡೆಸಿ ಚಿನ್ನಾಭರಣ ದೋಚಿದ್ದರು. ಅಲ್ಲದೆ, ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಈ ಕುರಿತು ಗೋಲಗುಂಬಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಗೋಲ್ ಗುಂಬಜ್ ಠಾಣೆಯ ಪೊಲೀಸರು, ಆರೋಪಿಗಳಾದ ಆಸೀಫ ಮೈಬೂಬ ಜಮಾದಾರ ಹಾಗೂ ದಿವಟಗೇರಿಯ ನಿವಾಸಿ ರಿಯಾನ ಸಯ್ಯದ ರಿಹಾನ ಅಮಿನ ಸಲಾವುದ್ದಿನ ಮನಿಯಾರ ಎಂಬುವವರನ್ನು ಬಂಧಿಸಿ ಹೆಡೆಮುರಿ ಕಟ್ಟಿ ತಂದಿದ್ದಾರೆ.ಸದರಿ ಆರೋಪಿಗಳಿಂದ ಒಟ್ಟು 44,000 ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಡಿಎಸ್‌ಪಿ ಡಾ. ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಸಿಪಿಐ ಸಂಜೀವ ಬಳಿಗಾರ ನೇತೃತ್ವದಲ್ಲಿ ಗೋಲಗುಂಬಜ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಎಂ.ಡಿ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸುಕ್ಷೇತ್ರ ಶೇಗುಣಸಿಯಲ್ಲಿರುವ ಹರಳಯ್ಯನಗುಂಡದಲ್ಲಿ ಮಹಾಶಿವಶರಣ ಹರಳಯ್ಯ ಹಾಗೂ ಮಾತೋಶ್ರೀ ಕಲ್ಯಾಣಮ್ಮನವರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.ಸಮಾರಂಭವನ್ನು ಉದ್ಘಾಟಿಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹರಳಯ್ಯ ಸಮಾಜ ಕಾಯಕವನ್ನೇ ನಂಬಿದ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ ಸಮಾಜ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಹರಳಯ್ಯ ಸಮಾಜದ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ಈ ಎಲ್ಲ ಸಮುದಾಯಗಳಿಗೆ ಹೋರಾಡುವ ಶಕ್ತಿ ಇಲ್ಲ, ಸರ್ಕಾರವೇ ಸ್ವಯಂ ಪ್ರೇರಿತವಾಗಿ ಈ ಸಣ್ಣ ಸಮುದಾಯಗಳ ಧ್ವನಿಯಾಗಬೇಕು, ಈ ಎಲ್ಲ ಸಮಾಜಗಳಿಗೆ ಹೆಚ್ಚಿನ ಮೀಸಲಾತಿ, ವಿವಿಧ ಸ್ವಯಂ ಉದ್ಯೋಗ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಶಿವಶರಣ ಹರಳಯ್ಯನವರ ಕಾಯಕನಿಷ್ಠೆ, ಅವರ ಶ್ರೇಷ್ಠ ಸಂದೇಶಗಳು ಪ್ರತಿಯೊಬ್ಬರಿಗೂ ಮಾದರಿ, ಅಣ್ಣ ಬಸವಣ್ಣನವರ ಮಾನವೀಯತೆ, ಡಾ.ಅಂಬೇಡ್ಕರ ಅವರು ಸಾರಿದ ಸಮಾನತೆಯ ಬಲದಿಂದ ಇಂದು ದೇಶ ಸಮೃದ್ಧವಾಗಿದೆ, ಭಾರತೀಯ ಸಂವಿಧಾನ ಫಲವಾಗಿ ಪ್ರತಿಯೊಬ್ಬರು ಘನತೆಯಿಂದ ಬದುಕುವಂತಾಗಿದೆ, ಈ ಎಲ್ಲ ರಾಷ್ಟ್ರಭಕ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು…

Read More

ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಗ್ರಾಮದ ಗಾಂಧಿನಗರದ ಅಂಗನವಾಡಿ ಕೇಂದ್ರ ನಂ6 ಮಕ್ಕಳಿಗೆ ಗೋಲಗೇರಿ ಗ್ರಾಮದ ಯುವ ಮುಖಂಡರಾದ ಅಬುಬಕರ ಶಾಬಾದಿ ಅವರು ಉಚಿತ ಸಮವಸ್ತ್ರ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಗೋಲಗೇರಿ ಅಂಗನವಾಡಿ ವಲಯದ ಮೇಲ್ವಿಚಾರಕ ಬಾನುಬಿ ದಿಕ್ಕಸಂಗಿ ಮಾತನಾಡಿ, ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿದ ಅಬುಬಕರ ಶಾಬಾದಿ ಅವರ ಕಾರ್ಯ ಶ್ಲಾಘನೀಯವಾದ್ದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ BDSS ವಿಜಯಪುರ ಜಿಲ್ಲಾ ಕಾರ್ಯಾದ್ಯಕ್ಷ ಶ್ರೀಶೈಲ ಜಾಲವಾದಿ, ಯುವ ಮುಖಂಡ ಮಡಿವಾಳ ನಾಯ್ಕೋಡಿ, ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವರಾಧ್ಯ ಮಠ, ಮೈಬೂಬ.ಜೋಗುರ, ಸಾಸಾಬಾಳ ಶಾಲೆಯ SDMC ಅಧ್ಯಕ್ಷರಾದ ಕುತುಬುದ್ದೀನ್ ಕೋರಬು, ರಾಜು ಯಂಕಂಚಿ, ಪೈಗಂಬರ ನದಾಫ ಸೇರಿದಂತೆ ಗೋಲಗೇರಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಅಪ್ರೀನ್ ಶಾಬಾದಿ, ನಿರ್ಮಲಾ ಕರ್ನಾಳ, ಭಾರತಿ ಕರ್ನಾಳ, ಪುಷ್ಪವತಿ ಕೊಳಕುರ, ಮಲಕಮ್ಮ ಬಜಂತ್ರಿ, ಅಂಗನವಾಡಿ ಸಹಾಯಕಿಯರಾದ ಮಹಾದೇವಿ ಬಜಂತ್ರಿ ಉಪಸ್ಥಿತರಿದ್ದರು

Read More

ಕೆರುಟಗಿಯಲ್ಲಿ ಹಳೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ | ಅದ್ಧೂರಿ ಮೆರವಣಿಗೆ | ಪುಷ್ಪವೃಷ್ಟಿ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ರಾಜು ಕೆರುಟಗಿವಿಜಯಪುರ: ಅಲ್ಲಿ ಹಳೆಯ ನೆನಪುಗಳ ಕಲರವ. ತಾವು ಒಂದು ಕಾಲದಲ್ಲಿ ಕಲಿತ ಶಾಲೆ, ಕಲಿಸಿದ ಗುರುವೃಂದ, ಆ ವಾತಾವರಣದಲ್ಲಿ ಶಿಷ್ಯರು ಅಂದು ನಿಜಕ್ಕೂ ಕಳೆದುಹೋಗಿದ್ದರು. ಮೊಗೆದಷ್ಟೂ ಬರುತ್ತಿದ್ದ ನೆನಪುಗಳು ಅವರ ಸಂಭ್ರಮವನ್ನು ಹೆಚ್ಚಿಸುತ್ತಿದ್ದವು. ಅಂದಿನ ಗುರು-ಶಿಷ್ಯರ ಸಾರ್ಥಕ ಮಿಲನ ಕಂಡು ಆ ಪರಿಸರದ ಗಿಡ-ಮರಗಳು ತಲೆದೂಗುತ್ತಿದ್ದವು.ಈ ಎಲ್ಲ ಘಟನೆ ಕಂಡದ್ದುಜಿಲ್ಲೆಯ ಕೆರೂಟಗಿ ಗ್ರಾಮದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ತಮಗೆ ವಿದ್ಯಾದಾನ ಮಾಡಿದ ಗುರು ವೃಂದಕ್ಕೆ ಅಭಿನಂದನೆ ಸಲ್ಲಿಸಲು ಅಂದು ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಶ್ರೀ ಸಿದ್ದರಾಮೇಶ್ವರ ಮಠದಿಂದ ಶಾಲೆಯವರೆಗೂ ಎಲ್ಲ ಶಿಕ್ಷಕರನ್ನು ಭಾಜ-ಭಜಂತ್ರಿ, ಡೊಳ್ಳುವಾದ್ಯಗಳ ನಿನಾದದಲ್ಲಿ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.ವೇದಿಕೆಯಲ್ಲಿ ಶಿಷ್ಯರು ತಮ್ಮ ನೆಚ್ಚಿನ ಶಿಕ್ಷಕರೊಂದಿಗಿನ ತಮ್ಮ ವಿದ್ಯಾರ್ಥಿ ಜೀವನದ ಘಟನೆಗಳನ್ನು…

Read More

ಜಮಖಂಡಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 50ಲಕ್ಷ ರೂ. ಅನುದಾನ ನೀಡಲಾಗುವದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ನಗರದ ಹೊರವಲಯದ ಕುಂಚನೂರ ಆರ್‌ಸಿಯಲ್ಲಿನ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದ ಆವರಣದಲ್ಲಿ ವೇಮ ವಿಕಾಸ ವೇದಿಕೆಯ ಆಶ್ರಯದಲ್ಲಿ ನಡೆದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲ ವಾಗುತ್ತಿದೆ ಅದರ ಹಾಗೆ ದೇವಸ್ಥಾನ ಎಲ್ಲ ಸಮುದಾಯಕ್ಕೂ ಅನುಕೂಲವಾಗಬೇಕು ಎಂದರು.ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ವೈಯಕ್ತಿಕವಾಗಿ ರೂ.2 ಲಕ್ಷ ಹಾಗೂ ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನ ನೀಡುಲಾಗುವದು ಎಂದು ಹೇಳಿದರು. ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ನಡೆಯುವ ವಿವಾಹಗಳ ನೂತನ ದಂಪತಿಗೆ ನಮಸ್ಕರಿಸಲು ದೇವಾಲಯ ಅತ್ಯವಶ್ಯಕವಾಗಿತ್ತು. ಈಗ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಿಸುತ್ತಿರುವುದು ಒಳ್ಳೆಯ ಸಂಗತಿ…

Read More