ಕನ್ಹೇರಿ ಶ್ರೀ ಹೇಳಿಕೆಗೆ ಅಮರ ಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖ ಮಠ ಚಿಕ್ಕಹೆಸರೂರು ತೀವ್ರ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಿನ್ನೆ ಬಬಲೇಶ್ವರದಲ್ಲಿ ನಡೆದ ಹಿಂದುತ್ವವಾದಿಗಳ ಸಮ್ಮೇಳನದಲ್ಲಿ ಮಾತನಾಡುತ್ತಾ, ಬಸವಾದಿ ಶರಣರನ್ನು ಹಿಂದೂಗಳೆಂದು, ವೇದಪ್ರಿಯರೆಂದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಕರನ್ನು ಬುಡುಬುಡಿಕೆಗಳೆಂದು, ಲಿಂಗಾಯತವನ್ನು ಸಮರ್ಥಿಸುವವರು ಕಾವಿ ವಿಭೂತಿ ರುದ್ರಾಕ್ಷಿ ಹಾಗೂ ಮಠ ತೊರೆದು ಬಿಡಲಿ ಎಂದು ಕರೆ ನೀಡಿದ ಕಾಡಸಿದ್ದೇಶ್ವರ ಮಠದ ಕನೇರಿ ಸ್ವಾಮಿ ಹೇಳಿಕೆಯನ್ನು ಅಮರ ಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖ ಮಠ ಚಿಕ್ಕಹೆಸರೂರು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಈ ತಲೆ ತಿರುಕ ಅಸ್ವಾಮಿ ತನ್ನ ವಿಷ ಪೂರಿತ ಹೇಳಿಕೆಯ ಮೂಲಕ ಮಹಾನ್ ಶರಣ ಚಳುವಳಿಗೆ ಮತ್ತದರ ನಾಯಕ ಬಸವಣ್ಣನವರಿಗೆ ಹಾಗೂ ಸಮಸ್ತ ಲಿಂಗಾಯತರಿಗೆ ಮತ್ತು ಲಿಂಗಾಯತ ಮಠಗಳಿಗೆ ಅವಮಾನ ಮಾಡಿದ್ದಾನೆ. ಹಾಗಾಗಿ ರಾಜ್ಯ ಸರ್ಕಾರ, ಕೂಡಲೇ ಈ ಸ್ವಾಮೀಜಿ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಅವಮಾನವನ್ನು ಮತ್ತು ಶರಣ ನಿಂದನೆಯನ್ನು ಈ ನಾಡಿನ ಸಮಸ್ತ ಶರಣಸಂಕುಲ ಸಹಿಸಿದ್ದೇ ಆದಲ್ಲಿ, ಕನ್ಯೆರಿ ಸ್ವಾಮಿ ಜೊತೆ ನಾವೂ ಬಸವದ್ರೋಹಿಗಳಾಗಿ ಹೋಗುತ್ತೇವೆ ಎಂದು ಭಾವಿಸಬೇಕಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ, ಮತ್ತವರ ಸಮಾನತ ಚಳುವಳಿಯ ರಕ್ಷಣೆಗಾಗಿ ಎಲ್ಲಾ ವಿಧದ ಲಿಂಗಾಯ(ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ )ತರು ನಾಡಿನ ಉದ್ದಗಲಕ್ಕು ಎದ್ದು ನಿಲ್ಲಬೇಕೆಂದು ಪ್ರಾರ್ಥಿಸಿದ್ದಾರೆ.
ಜೊತೆಗೆ, ಶರಣರನ್ನು ಜಾತಿವಾದಿ, ವರ್ಣವಾದಿಗಳೆಂದು ಕೀಳು ಮಟ್ಟಕ್ಕೆ ಇಳಿಸುವ, ವಿಷವನ್ನು ಅಮೃತ ಎಂದು ಕುಡಿಸುವ ಕನೇರಿ ಮತ್ತವರ ಶರಣನಿಂದೆ ಹಿಂದೂ ಸಮ್ಮೇಳನಗಳನ್ನು ಬಸವ ಪ್ರಿಯರು ವ್ಯವಸ್ಥಿತವಾಗಿ ತಡೆಯ ಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೆ, ಸಾಧ್ಯವಾದರೆ ಈ ಕನ್ಯೆರಿ ಸ್ವಾಮಿಗೆ ಸಿಕ್ಕ ಸಿಕ್ಕಲ್ಲಿ ಸಮಗಾರ ಭೀಮವ್ವನ ಪಾದರಕ್ಷೆಯ ಪೂಜೆ ಮಾಡಬೇಕೆಂದು, ಆ ಮೂಲಕ ಆತನ ಮೂಲ ಲಿಂಗಾಯತ ಕಾಡುಸಿದ್ದೇಶ್ವರ ಪರಂಪರೆಗೆ ಹಿಂದಿರುಗಿಸಲು ಸಹಾಯ ಮಾಡಬೇಕೆಂದು ಅಮರಜ್ಞಾನ ಪೀಠದ ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖಾ ಮಠ
ಚಿಕ್ಕಹೆಸರೂರು ಅಧ್ಯಕ್ಷ ಆರ್.ಮಾನಸಯ್ಯ ಬಸವ ಭಕ್ತರಲ್ಲಿ ಕೇಳಿಕೊಂಡಿದ್ದಾರೆ.
