ಉದಯರಶ್ಮಿ ದಿನಪತ್ರಿಕೆ
ಗೋಲಗೇರಿ: ಗ್ರಾಮದ ಗಾಂಧಿನಗರದ ಅಂಗನವಾಡಿ ಕೇಂದ್ರ ನಂ6 ಮಕ್ಕಳಿಗೆ ಗೋಲಗೇರಿ ಗ್ರಾಮದ ಯುವ ಮುಖಂಡರಾದ ಅಬುಬಕರ ಶಾಬಾದಿ ಅವರು ಉಚಿತ ಸಮವಸ್ತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋಲಗೇರಿ ಅಂಗನವಾಡಿ ವಲಯದ ಮೇಲ್ವಿಚಾರಕ ಬಾನುಬಿ ದಿಕ್ಕಸಂಗಿ ಮಾತನಾಡಿ, ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿದ ಅಬುಬಕರ ಶಾಬಾದಿ ಅವರ ಕಾರ್ಯ ಶ್ಲಾಘನೀಯವಾದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ BDSS ವಿಜಯಪುರ ಜಿಲ್ಲಾ ಕಾರ್ಯಾದ್ಯಕ್ಷ ಶ್ರೀಶೈಲ ಜಾಲವಾದಿ, ಯುವ ಮುಖಂಡ ಮಡಿವಾಳ ನಾಯ್ಕೋಡಿ, ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವರಾಧ್ಯ ಮಠ, ಮೈಬೂಬ.ಜೋಗುರ, ಸಾಸಾಬಾಳ ಶಾಲೆಯ SDMC ಅಧ್ಯಕ್ಷರಾದ ಕುತುಬುದ್ದೀನ್ ಕೋರಬು, ರಾಜು ಯಂಕಂಚಿ, ಪೈಗಂಬರ ನದಾಫ ಸೇರಿದಂತೆ ಗೋಲಗೇರಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಅಪ್ರೀನ್ ಶಾಬಾದಿ, ನಿರ್ಮಲಾ ಕರ್ನಾಳ, ಭಾರತಿ ಕರ್ನಾಳ, ಪುಷ್ಪವತಿ ಕೊಳಕುರ, ಮಲಕಮ್ಮ ಬಜಂತ್ರಿ, ಅಂಗನವಾಡಿ ಸಹಾಯಕಿಯರಾದ ಮಹಾದೇವಿ ಬಜಂತ್ರಿ ಉಪಸ್ಥಿತರಿದ್ದರು

