Author: editor.udayarashmi@gmail.com

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ರಷಿಯನ್ ತತ್ವಜ್ಞಾನಿ ಹಾಗೂ ಹೋರಾಟಗಾರ ಸ್ಟಾಲಿನ್ ರವರು ಹೇಳಿರುವಂತೆ, “ಜೀವನ-ಬದುಕು ಎಂಬುದು ನಿಮಗೆ ನೇರವಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ನಮ್ಮಲ್ಲಿರುವ ಶಕ್ತಿ-ಸಾಮರ್ಥವನ್ನು ಸಮರ್ಥವಾಗಿ ಬಳಸಿಕೊಂಡು ಅವುಗಳನ್ನು ಯಶಸ್ಸನ್ನಾಗಿ ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ” ಎಂದು ಹೇಳಿದ್ದಾರೆ.ಕಠಿಣ ಪರಿಶ್ರಮ ಮತ್ತು ಛಲಗಾರಿಕೆ ಇದ್ದರೆ ಎಂತಹ ಗ್ರಾಮೀಣ ಪ್ರತಿಭೆಯು ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ ತೋರಬಹುದು. ರಾಜಸ್ಥಾನದ ಸಾಂಪ್ರದಾಯಿಕ ಸಾಮಾಜಿಕ ಪದ್ಧತಿ ‘ಆತಾ-ಸಾತಾ’ ಹೆಸರಿನಲ್ಲಿ ಕುಟುಂಬಗಳು ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ವಿನಿಮಯ (ಬೇರೆ ಮನೆಗೆ ಹೆಣ್ಣು ಕೊಟ್ಟು ತೆಗೆದುಕೊಳ್ಳುವ ಪದ್ಧತಿ) ಮಾಡಿಕೊಳ್ಳುವ ಪದ್ದತಿಯಡಿಯಲ್ಲಿ ಕೇವಲ ೧೦ ವರ್ಷದವಳಿದ್ದಾಗಲೇ ತಂದೆ ಸಂಬಂಧಿಗೆ ವಿವಾಹ ಮಾಡಿಕೊಟ್ಟಿದ್ದರು. ಸಾಮಾಜಿಕ ಕಟ್ಟಳೆ, ಸಾಂಪ್ರದಾಯಿಕ ಅಡೆತಡೆ ಮತ್ತು ಸವಾಲುಗಳನ್ನು ಮೀರಿ, ಹಠಮಾರಿ ಹೆಣ್ಣಾಗಿ ಬೆಳೆದು ಇಡೀ ದೇಶವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿ ತೋರಿದ ಗ್ರಾಮೀಣ ಹುಡುಗಿ ಅವಳು.ಇವರು ಯಾರ ಬಗ್ಗೆ ಹೇಳೋಕ ಹೊರಟಿದ್ದಾರೆ ಅಂದುಕೊಂಡೀರಾ?…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಇ.ಡಿ ಸೆಲ್(ED Cell)ವತಿಯಿಂದ, ಆಯುರ್ವೇದ ವೈದ್ಯಕೀಯ ಪದ್ಧತಿಯ ತತ್ವಗಳನ್ನು ನವೀಕರಿಸುವ ಹೊಸ ತರ್ಕ ಮಂಡನೆಯ ಕುರಿತು ವಿದ್ಯಾರ್ಥೀಗಳಿಗೆ ಆಯುರ್ಥಿಂಕ್ ಫೆಸ್ಟ-2026 ವಿಷಯ ಕುರಿತು ತರ್ಕ ಸಂಗ್ರಹಣೆ ಕಾರ್ಯಕ್ರಮ ಶನಿವಾರ ನಡೆಯಿತು.ಈ ಕಾರ್ಯಕ್ರಮವನ್ನು ಉದ್ಘಾಟಸಿದ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಡಾ.ಬಿ.ಶ್ರೀನಿವಾಸ ಪ್ರಸಾದ, ಇಂದಿನ ದಿನಗಳಲ್ಲಿ ಆಯುರ್ವೇದ ಪದ್ಧತಿಯನ್ನು ವೈಜ್ಞಾನಿಕರಣ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರದ ಸಿಬ್ಬಂದಿ ಸಂಯೋಜಕ ಡಾ.ನಿರ್ಮಲಾ, ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ವೈದ್ಯರಾದ ಡಾ.ವಿಜಯಲಕ್ಷ್ಮಿ ಪೂಜಾರಿ, ಡಾ. ಕಾಶೀನಾಥ ಹದಿಮೂರ ಮುಂತಾದವರು ಉಪಸ್ಥಿತರಿದ್ದರು.ಆಯುರ್ವೇದ, ಎಂಜನಿಯರಿಂಗ್ ಹಾಗೂ ಬೇರೆ ಬೇರೆ ಕಾಲೇಜುಗಳಿಂದ ಸುಮಾರು 80 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದದಲ್ಲಿ ಅಧಿಕ ರಕ್ತದೊತ್ತಡ (High blood pressure) ತಲೆನೋವು, ತಲೆ ತಿರುಗುವಿಕೆ, ಹೃದಯವು ವೇಗವಾಗಿ ಬಡಿದುಕೊಳ್ಳುವ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏಪ್ರಿಲ್ 20 ರಿಂದ ಏಪ್ರಿಲ್ 25ರ ವರೆಗೆ ನಡೆಯಲಿದೆ.ಬಿ.ಎಲ್.ಡಿ.ಇ ಆಯುರ್ವೇದ ಆಸ್ಪತ್ರೆಯಲ್ಲಿ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಆರು ದಿನಗಳ ಕಾಲ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಮೇಲಿನ ಸಮಸ್ಯೆಗಳನ್ನು ಎದುರಿಸುತ್ತಿರುವ 18 ರಿಂದ 79 ವರ್ಷದವರೆಗಿನ ಸಾರ್ವಜನಿಕರು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9513397413 ಸಂಪರ್ಕಿಸಬಹುದಾಗಿದೆ.

Read More

ವಿಜಯಪುರದಲ್ಲಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಿಂದ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ವಿಜಯಪುರದಲ್ಲಿ ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ. ಹಿರಿಯ ಮತ್ತು ಯುವ ಕಲಾವಿದರ ಕಲಾಕೃತಿಗಳು ಒಂದೆಡೆ ನೋಡಲು ಸಿಗುವುದು ಅಪರೂಪದ ಸಂಗತಿ. ಇಂಥ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಲು ಸಂತೋಷವೆನಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಬೋವಿ ಹೇಳಿದರು. ಇಲಾಖೆಯಿಂದ ನೀಡುವ ಅನುದಾನವನ್ನು ಕಲಾವಿದರು ಸಂಘ ಸಂಸ್ಥೆಗಳು ಸರಿಯಾಗಿ ಉಪಯೋಗ ಮಾಡಿ ಸಮಾಜಕ್ಕೆ ಮಾದರಿಯಾಗುವ ಕೆಲಸ ಕಲಾವಿದರಿಂದ ಆಗಲಿ ಎಂದರು.ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ್ ಯಡಳ್ಳಿ ಅವರು ಮಾತನಾಡುತ್ತಾ, ಇವತ್ತಿನ ಆಧುನಿಕ ಯುಗದಲ್ಲಿ ಎಐ ಜಗತ್ತಿನಲ್ಲಿ ಎಲ್ಲರೂ ಕ್ಷಣಿಕ ಸಂತಸಕ್ಕಾಗಿ ಆಧುನಿಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಧರ್ಮಗಳು ಹೃದಯದಲ್ಲಿ ಪ್ರೀತಿ ಹುಟ್ಟಿಸಬೇಕು, ಮನುಷ್ಯರನ್ನು ಒಡೆಯದೇ ಕೂಡಿಸಬೇಕು ಎಂದು ಶಿರೂರಿನ ವಿಜಯಮಹಾಂತ ತೀರ್ಥ ಮಠದ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.ಆಲಮಟ್ಟಿ ಡ್ಯಾಂಸೈಟ್‌ನಲ್ಲಿ ಗುರುವಾರ ನಡೆದ ನವೀಕರಣಗೊಂಡ ಜಾಮೀಯಾ ಮಸೀದಿಯ ಉದ್ಘಾಟನೆ, ಮಸೀದಿ ದರ್ಶನ ಹಾಗೂ ಸೌಹಾರ್ದತಾ ಸಮಾರಂಭದಲ್ಲಿ ಅವರು ಮಾತನಾಡಿದರು.“ಮುಸ್ಲಿಂರ ಏಕದೇವೋಪಾಸನೆ ಹಾಗೂ ಶರಣರ ಲಿಂಗ ಪೂಜೆ ಎರಡೂ ಒಂದೇ. ಒಬ್ಬ ಸಚ್ಚರಿತ ಮುಸಲ್ಮಾನನು ನಿಜವಾದ ಶರಣನಾಗಬಲ್ಲ. ಹಾಗೆಯೇ ಒಬ್ಬ ಸಚ್ಚರಿತ ಶರಣನು ಇಸ್ಲಾಂನ ಶಾಂತಿ ಮಂತ್ರವನ್ನು ಪಾಲಿಸುವವನಾಗಬಲ್ಲ” ಎಂದು ಸ್ವಾಮೀಜಿ ಹೇಳಿದರು.ಬೀಳಗಿಯ ಹಜರತ್ ಮೌಲಾನಾ ಕಾಬತೆ ಅಬ್ದುಲ್ ವಹಾಬ್ ಸಾಬ್ ಮಾತನಾಡಿ, “ಅಲ್ಲಾ ಎಂದರೆ ಕೇವಲ ಆಕಾಶದಲ್ಲಿರುವ ಶಕ್ತಿ ಮಾತ್ರವಲ್ಲ, ಪ್ರೀತಿ, ದಯೆ ಮತ್ತು ನ್ಯಾಯದ ರೂಪದಲ್ಲಿ ಮನುಷ್ಯನ ಅಂತರಂಗದಲ್ಲಿ ನೆಲೆಸಿರುವ ಚೈತನ್ಯ. ಅಜಾನ್ ಮನುಷ್ಯನನ್ನು ಲೌಕಿಕ ಜಗತ್ತಿನಿಂದ ಪಾರಮಾರ್ಥಿಕ ಕಡೆಗೆ ಕರೆಯುವ ದನಿ. ಅಲ್ಲಾಹ್ ಎಂದರೆ ಒಂದೇ ಧರ್ಮಕ್ಕೆ ಸೀಮಿತವಲ್ಲ, ಅವನು ಜಗದೀಶ್ವರ” ಎಂದರು.ಬಸವನಬಾಗೇವಾಡಿಯ ಮಫ್ತಿ ಅಬ್ದುಲ್ ಅಜೀಜ್ ನಂದವಾಡಗಿ, ನಿಡಗುಂದಿಯ ಮೌಲಾನಾ ಆಸೀಫ್…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕರ್ನಾಟಕದಲ್ಲಿ 2026ರ ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆಪಟ್ಟಿ ಮತ್ತು ವಸತಿ ಗಣತಿ (Census) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೊದಲ ಮೂರು ದಿನ ಗ್ರಾಮದ ನಕ್ಷೆಯ ಜೊತೆಗೆ ಗಣತಿದಾರರಿಗೆ ಬಂದಂತಹ ಪ್ರದೇಶದಲ್ಲಿ ಲಭ್ಯವಿರುವ ಮನೆಗಳ, ರಸ್ತೆ, ಹಳ್ಳ, ಕೆರೆ, ಸಮುದಾಯ ಭವನ, ದೇವಸ್ಥಾನ ಸೇರಿದಂತೆ ಮನೆಪಟ್ಟಿ ತಯಾರಿಸಲು ಶಿಕ್ಷಕರು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ತಾಲ್ಲೂಕಿನ ಘೋಣಸಗಿ ಗ್ರಾಮ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಬಿರು ಬಿಸಿಲಿನ ನಡುವೆಯೂ ರಜೆ ದಿನಗಳಲ್ಲಿ ಶಿಕ್ಷಕರು ಜನಗಣತಿ ಕಾರ್ಯ ಮಾಡುತ್ತಿದ್ದಾರೆ. ಆರಂಭದಲ್ಲಿ ಹಲವು ಶಿಕ್ಷಕರ ಮೊಬೈಲ್ ಲಾಗಿನದಲ್ಲಿ ತೊಂದರೆಯಾಗುತ್ತಿದೆ. ತಮಗೆ ವಹಿಸಿದ ನಕ್ಷೆ ಡೌನಲೋಡ್ ಆಗುತ್ತಿಲ್ಲ ಎಂದು ಶಿಕ್ಷಕರು ಮೇಲ್ವಿಚಾರಕರ ಗಮನಕ್ಕೆ ತಂದರು.ಮೇಲ್ವಿಚಾರಕ ಐ.ಎ.ತೇಲಿ, ಗಣತಿದಾರ ಎಂ.ಎನ್.ಮದಬಾವಿ, ಸಾವಿತ್ರಿ ಆಕಳೆ, ನಾರಾಯಣ ಜಗತಾಪ, ಪಿ.ಎಸ್.ಗದ್ಯಾಳ, ಬಿಎಲ್ಓ ರಾಜು ಹುನ್ನೂರ ಇದ್ದರು.

Read More

ಜಿಲ್ಲಾ ನಿರ್ವಹಣಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಏ.೨೩ ರಿಂದ ಮೇ.೨೨ ರವರೆಗೆ ಜಿಲ್ಲೆಯಲ್ಲಿ ೯ನೇ ಸುತ್ತಿನ ಕಾಲು ಬಾಯಿ ರೋಗದ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ತಿಳಿಸಿದ್ದಾರೆ.ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಯೋಜನೆಯಡಿ ೯ನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮದ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಅಭಿಯಾನದಲ್ಲಿ ರೈತರು, ಹಾಲು ಉತ್ಪಾದಕರ ಸಂಘಗಳು ಭಾಗವಹಿಸಿ ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ೧೯೬೨ ಪಶು ಸಹಾಯವಾಣಿಗೆ ಕರೆ ಮಾಡಿ ಉಚಿತ ಅಂಬ್ಯುಲೆನ್ಸ್ ಸೇವೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಪತಿಗಳು,ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸಹಯೋಗದಲ್ಲಿ ಏ.೨೧ರ ಬೆಳಿಗ್ಗೆ ೧೧:೩೦ ಗಂಟೆಗೆ ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.ಕನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಗೌರವಾನ್ವಿತ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಗ್ರಾಸನ ವಹಿಸುವರು.ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಸಮಕುಲಪತಿಗಳಾದ ಡಾ.ಎಂ.ಸಿ ಸುಧಾಕರ್ ಉಪಸ್ಥಿತರಿರುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈನ(ಎಸ್.ಎನ್.ಡಿಟಿ) ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀಮತಿ ನಾಥಿಬಾಯಿ ದಾಮೋದರ್ ಠಾಕರ್ಸಿ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ವಿಜಯಾ ಬಿ. ಕೋರಿಶೆಟ್ಟಿ ಭಾಗವಹಿಸುವವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ ಜಿಲ್ಲಾ ಮಟ್ಟದ ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸಗೊಬ್ಬರ ಮಾರಾಟ ಸಂಬಂಧಿಸಿದಂತೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ, ಅಕ್ರಮ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿದರೆ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಎಚ್ಚರಿಕೆ ನೀಡಿದರು.ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲ ರಸಗೊಬ್ಬರಗಳನ್ನು ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದ ಮೂಲಕವೇ ಕಡ್ಡಾಯವಾಗಿ ಮಾರಾಟ ಮಾಡಿ ದಾಖಲಿಸಬೇಕು ಎಂದರು.ಯೂರಿಯಾ ರಸಗೊಬ್ಬರ ಮಾರಾಟ ಮಾಡುವಾಗ ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶದ ಮೂಲಕ ಫ್ರುಟ್ಸ್ ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಪ್ರಕಾರ, ಒಂದು ಎಕರೆಗೆ ಒಂದು ಚೀಲದಂತೆ ಮಾರಾಟ ಮಾಡಬೇಕು ಎಂದರು.ರಸಗೊಬ್ಬರ ಮಳಿಗೆಗಳಲ್ಲಿ ಪಿಒಎಸ್ ದಾಖಲಾತಿ ಮತ್ತು ಭೌತಿಕ ದಾಸ್ತಾನು ಹೊಂದಾಣಿಕೆ ಇರುವುದನ್ನು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಕೂಡಲೇ ಉದ್ಘಾಟನೆ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಹಾಗೂ ರೈತಸಂಘ ಪದಾಧಿಕಾರಿಗಳು ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ನಮ್ಮ ಕರ್ನಾಟಕ ಸೇನೆ ಹಾಗೂ ರೈತಸಂಘದ ಪದಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ಕುರಿತು ತಹಶೀಲ್ದಾರರ ಗಮನ ಸೆಳೆದರು.ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಯುವ ಸಂಚಾಲಕ ಸಿದ್ಧನಗೌಡ ಪಾಟೀಲ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಪೂರ್ಣಗೊಂಡು ೬ ತಿಂಗಳಾದರೂ ಶಾಸಕರಾಗಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಅದಾಗ್ಯೂ ಯಾವುದೇ ನಿರ್ಧಾರವಾಗಿಲ್ಲ. ಹೀಗೆ ಉದ್ಘಾಟನೆಗೆ ವಿಳಂಬ ಮಾಡಿದ್ದಲ್ಲಿ ಇದೇ ದಿ:೩೦ ರಿಂದ ತಹಶೀಲ್ದಾರ ಕಾರ್ಯಾಲಯದ ಮುಂದೆ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಘಟಕದ…

Read More