ಇಟಗಿಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಸಮಾಜವನ್ನು ನಿರ್ಮಾಣ ಮಾಡುವುದು ಮತ್ತು ಸಮಾದಲ್ಲಿ ಬದುಕಬೇಕು ಅಂದ್ರೆ ಶಿಕ್ಷಣ ಜೋತೆ ಸಂಸ್ಕಾರ ಅತ್ಯಮೂಲ್ಯ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಹೇಳಿದರು.
ನಿಡಗುಂದಿ ತಾಲೂಕಿನ ಇಟಗಿ ಗುರು ನಾಗಲಿಂಗ ಗಿಡ್ಡಯ್ಯ ಅಜ್ಜಾ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಮಕ್ಕಳ ಪುರಸ್ಕಾರ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ನಿವೃತ್ತ ಸಿಬ್ಬಂದಿಯ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೨೦೨೫ ನೇ ಎಸ್ ಎಸ್ ಎಲ್ ಸಿ ಪರಿಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಟಗಿ ಪ್ರೌಡ ಶಾಲೆ ಮೂರು ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪರವಾಗಿ ಹಾಗೂ ಶಾಸಕರಿಂದ ಸನ್ಮಾನಿಸಲಾಯಿತು. ಗುರು ನಾಗಲಿಂಗ ಗಿಡ್ಡಯ್ಯ ಅಜ್ಜಾ ಶಾಲೆಯಲ್ಲಿ ಸುಮಾರು ೬೦ ವರ್ಷ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿದ ,ರಾಮಪ್ಪ ಹೂ ಹುಗ್ಗಿ , ಅಟೆಂಡರ್ ಮತ್ತು ಮರಿಯಪ್ಪ ಯ ಚಲವಾದಿ, ಸಿಪಾಯಿಗಳಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಟಗಿ ಗ್ರಾಮದ ಶಿಕ್ಷಕರಾದ ಹುಸೇನಸಾಬ ದಾ ನಧಾಪ ಮತ್ತು ವಿಜಯಪುರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅರವಿಂದ್ ಬಿರಾದಾರ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ.ದಿವ್ಯ ಸಾನಿಧ್ಯ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಇಟಗಿ ನೇತೃತ್ವ , ವಿಶ್ವನಾಥ ಪಿ. ಮಠ. ಉದ್ಘಾಟಕರು ಸನ್ಮಾನ್ಯ ಭೀಮನಗೌಡ ಬಸನಗೌಡ ಪಾಟಿಲ ಶಾಸಕರು ದೇವರ ಹಿಪ್ಪರಗಿ , ಜ್ಯೋತಿ ಬೆಳಗಿಸುವವರು ಉಮೇಶ ಹುಲ್ಲಪ್ಪ ಮೇಟಿ ಅಧ್ಯಕ್ಷತೆ ತಿಪ್ಪಣ್ಣ ಆ. ಬಂದಾಳ ಅಧ್ಯಕ್ಷರು, ಶ್ರೀ ಗುರು ನಿರುಪಾದೇಶ್ವರ ವಿದ್ಯಾ ವರ್ಧಕ ಸಂಘ ಇಟಗಿ ಮುಖ್ಯ ಅತಿಥಿಗಳು ಬಸಯ್ಯ ಚೆನ್ನಮಲ್ಲಯ್ಯ ಮಠಪತಿ ಉಪನಿರ್ದೇಶಕರು (ನಿವೃತ್ತ), ಕಾ.ಶಿ. ಇಲಾಖೆ, ಧಾರವಾಡ , ಶ್ರೀಮತಿ ಪಾರ್ವತಿ ಎಂ ವಸ್ತ್ರದ ಹಿರಿಯ ಸಹಾಯಕ ನಿರ್ದೆಶಕರು (ನಿವೃತ್ತ), ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತರ ಕಾರ್ಯಾಲಯ, ಧಾರವಾಡ ಬಸವರಾಜ ಎಲ್ ಲಕ್ಕನ್ನವರ ಕುಲಪತಿಗಳು ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಲಕ್ಷ್ಮಣ ಟಿ. ಮಾಗಿ ಅಧ್ಯಕ್ಷರು, ಗ್ರಾ. ಪಂ. ಇಟಗಿ, ಶ್ರೀಶೈಲ ಸಿ. ಹೆಬ್ಬಾಳ, ವಿರೂಪಾಕ್ಷಿ ಕ. ಮಸೂತಿ ,ಉದಯಕುಮಾರ ವಾಯ್. ಬಶೆಟ್ಟಿ ಶಿಕ್ಷಣ ಸಂಯೋಜಕರು, ನಿಡಗುಂದಿ ವಲಯ, ಈರಬಸಪ್ಪ ಎಮ್. ಕಾರಕೂನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಇಟಗಿ ಕ್ಲಸ್ಟರ್ ,ಪವಡೆಪ್ಪ ಎಸ್. ಬಳಬಟ್ಟಿ , ಬಸಪ್ಪ ದ್ಯಾ ಕೇಶಾಪೂರ , ಭೂಷಪ್ಪ ಎನ್, ಮಾಗಿ , ಶಿವಯ್ಯ ವೀ. ಅರಳಲದಿನ್ನಿ ಉಪಸ್ಥಿತರಿದ್ದರು.
ಗುರು ನಾಗಲಿಂಗ ಗಿಡ್ಡಯ್ಯ ಅಜ್ಜಾ ಪ್ರೌಢ ಶಾಲೆಯ ಗುರರುಂದ , ಹನಮಂತಗೌಡ ಬ. ಬಿಲಕೇರಿ ಮುಖ್ಯೋಪಾಧ್ಯಾಯರು ವೆಂಕಟೇಶ ಶಂ. ಕುಲಕರ್ಣಿ ,ಮೋತಿಲಾಲ್ ತಾ. ಚವ್ಹಾಣ ಲಕ್ಷ್ಮಣ ಸಿ. ವಾಲಿಕಾರ, ಸಿದ್ದು ವೀ. ಮಡಿವಾಳರ, ಗುರುರಾಜ ಬ. ಗೋಡಿಕಾರ. ಶ್ರೀಧರ ಹ. ದಿನ್ನಿ, ಮಹೇಶ ತಿ. ಬಂದಾಳ, ಯಲಗೂರೇಶ ಮಾ. ದೊಡಮನಿ ಇದ್ದರೂ .

